ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ನಗರದ ಸ್ವಚ್ಚತೆಗಾಗಿ ಪೌರಕಾರ್ಮಿಕರಿಗೆ 815 ಕ್ಲಿನಿಂಗ್ ಯಂತ್ರ ನೀಡಲಿರುವ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಬೆಂಗಳೂರು ಸ್ವಚ್ಚಗೊಳಿಸುವ ಪೌರ ಕಾರ್ಮಿಕರಿಗೆ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ 815 ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಖರೀದಿಸಲು ಟೆಂಡರ್ ಆಹ್ವಾನಿಸಿದೆ. ಈಗಾಗಲೇ ಪ್ರಾಯೋಗಿಕವಾಗಿ ಈ ಕಸ ಗುಡಿಸುವ ಯಂತ್ರ ಯಶಸ್ವಿಯಾಗಿದೆ.

ಒಂದು ಯಂತ್ರವು ಕಸ, ಕಡ್ಡಿ ಸೇರಿದಂತೆ ಸುಮಾರು 5 ಕೆ.ಜಿ ಧೂಳು ಹಿಡಿದುಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಪೌರ ಕಾರ್ಮಿಕರು ಬಳಸುವ ಪೊರಕೆಗೆ ಹೋಲಿಸಿದರೆ ಯಂತ್ರವು ಕೆಲಸದ ಹೊರೆ ಕಡಿಮೆ ಮಾಡುತ್ತದೆ. ಬಿಬಿಎಂಪಿಯು ಇತ್ತೀಚೆಗೆ ಪೌರಕಾರ್ಮಿಕರಿಗೆ ಈ ಯಂತ್ರ ನೀಡಿ ಪ್ರಯೋಗ ನಡೆಸಿತ್ತು. ಅದರಲ್ಲಿ ಯಶಸ್ವಿಯಾಗಿದ್ದು, ಪೌರಕಾರ್ಮಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಈ ಕಸ ಗುಡಿಸುವ ಯಂತ್ರವನ್ನು ಹೆಚ್ಚು ಇಷ್ಟ ಪಟ್ಟಿದ್ದಾರೆ ಎಂದು ಬಿಬಿಎಂಪಿ ಹೇಳಿಕೊಂಡಿದೆ.

ಬೆಂಗಳೂರು: ಕೆ-100 ಮಾರ್ಗದ ಒತ್ತುವರಿ ತೆರವಿಗೆ ಬಿಬಿಎಂಪಿ ಸೂಚನೆಬೆಂಗಳೂರು: ಕೆ-100 ಮಾರ್ಗದ ಒತ್ತುವರಿ ತೆರವಿಗೆ ಬಿಬಿಎಂಪಿ ಸೂಚನೆ

ಈ ಕಾರಣದಿಂದ ಬಿಬಿಎಂಪಿ ಒಟ್ಟು 815 ವ್ಯಾಕ್ಯೂಮ್ ಕ್ಲೀನರ್ ಖರೀದಿಸಲು ಟೆಂಡರ್‌ಗೆ ಕರೆದಿದೆ. ಪೌರಕಾರ್ಮಿಕರಿಗೆ ದೈನಂದಿನ ಕೆಲಸಕ್ಕೆ ಈ ಯಂತ್ರ ಹೆಚ್ಚು ನೆರವಾಗಲಿದೆ. ಪೊರಕೆ ಬಳಸುವಾಗ ಕಾರ್ಮಿಕರು ಬಾಗದಬೇಕಿತ್ತು. ಆದರೆ ಚಕ್ರ ಇರುವ ಈ ಯಂತ್ರದ ಬಂಡಿಯನ್ನು ತಳ್ಳಬೇಕಿದ್ದು, ಸ್ವಚ್ಛತಾ ಕೆಲಸುವ ಹೆಚ್ಚುಬೇಗ ಆಗುತ್ತದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ.

BBMP To Provide 815 Cleaning Machines To Civic Workers For Cleanliness Of The City soon

ಶೀಘ್ರವೇ ಯಂತ್ರಗಳಿಂದ ರಸ್ತೆ ಸ್ವಚ್ಚತೆ

ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವಾಗಿ ಪ್ರತಿಕ್ರಿಯಿಸಿ, ಯಂತ್ರವು ಬೀದಿಗಳನ್ನು ಸ್ವಚ್ಛಗೊಳಿಸುವ ಸಮಯ ಮತ್ತು ಪೌರಕಾರ್ಮಿಕರ ಶ್ರಮ ಕಡಿಮೆ ಮಾಡುತ್ತದೆ. ಹೀಗಾಗಿ ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದ್ದೇವೆ. ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲ ಪೌರಕಾರ್ಮಿಕರಿಗೆ ಹಂತಹಂತವಾಗಿ ಇದೇ ರೀತಿಯ ಯಂತ್ರಗಳನ್ನು ವಿತರಿಸಲಿದ್ದೇವೆ ಎಂದರು.

ಬಿಬಿಎಂಪಿಯು ವ್ಯಾಕ್ಯೂಮ್ ಕ್ಲೀನರ್‌ಗಳಂತೆಯೇ 815 ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ. ಆದಷ್ಟು ಶೀಘ್ರವೇ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಪೌರಕಾರ್ಮಿಕರಿಗೆ ಯಂತ್ರ ನೀಡಲಿವೆ. ಇನ್ನುಮುಂದೆ ಕಾರ್ಮಿಕರು ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಲು ಪೊರಕೆಗಳ ಬದಲಾಗಿ 'ಕೈಯಾರೆ ತಳ್ಳುವ ಸ್ವೀಪಿಂಗ್ ಯಂತ್ರ ಬಳಸಲಿದ್ದಾರೆ.

ಯಂತ್ರದ ವಿಶೇಷತೆ ಏನು?, ಕೆಲಸ ಹೇಗೆ?

ಬಿಬಿಎಂಪಿ ಪ್ರಕಾರ ಹಸ್ತಚಾಲಿತವಾಗಿ ತಳ್ಳುವ ಸ್ವೀಪಿಂಗ್ ಯಂತ್ರಗಳು ಪ್ರತಿ ಯಂತ್ರಕ್ಕೆ ಸರಿಸುಮಾರು 40,000 ರೂ. ವೆಚ್ಚವಾಗಲಿದೆ. ಯಂತ್ರಕ್ಕೆ ವಿದ್ಯುತ್ ಅಥವಾ ಇಂಧನ ಅಗತ್ಯವಿಲ್ಲ ಮತ್ತು ಮಾನವಶಕ್ತಿಯ ಮೇಲೆ ಕೆಲಸ ಮಾಡುತ್ತದೆ.

BBMP To Provide 815 Cleaning Machines To Civic Workers For Cleanliness Of The City soon

ಯತ್ರದ ಪ್ರತಿ ಮೂಲೆಯಲ್ಲಿ ನಾಲ್ಕು ಬ್ರಷ್‌ಗಳು ಮತ್ತು ಗಾಡಿಯ ಕೆಳಗೆ ಎರಡು ಬ್ರಷ್‌ಗಳು ಅಳವಡಿಸಲಾಗಿದೆ. ಅದರಿಂದಲೇ ರಸ್ತೆಯಲ್ಲಿನ ಧೂಳಿನ ಕಣಗಳನ್ನು ಕಾರ್ಟ್‌ನ ತ್ಯಾಜ್ಯ ಪೆಟ್ಟಿಗೆಯೊಳಗೆ ಎಳೆಯಲಾಗುತ್ತದೆ. ಯಂತ್ರಕ್ಕೆ ಎರಡು ಚಿಕ್ಕ ಚಕ್ರಗಳು ಮತ್ತು ಬಂಡಿಯನ್ನು ತಳ್ಳಲು ಹ್ಯಾಂಡಲ್ ಹೊಂದಿದೆ.

ಯಂತ್ರವು ಸುಮಾರು 5 ಕೆಜಿ ಧೂಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಿಬಿಎಂಪಿ ಹೇಳಿದೆ.

ಯಂತ್ರವು ಧೂಳು, ಸಣ್ಣ ಕಲ್ಲುಗಳು, ಎಲೆ, ಸಣ್ಣ ಪ್ಲಾಸ್ಟಿಕ್ ಮತ್ತು ಕಾಗದದ ವಸ್ತುಗಳನ್ನು ಸಂಗ್ರಹಿಸುತ್ತದೆ. ದಿನಕ್ಕೆ ಕನಿಷ್ಠ ಒಂದು ಕಿಲೋಮೀಟರ್ ಬಳಸಲು ಯೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಒಟ್ಟು ಸುಮಾರು 16,000 ಪೌರಕಾರ್ಮಿಕರು ನಗರದ ಸ್ವಚ್ಚತೆಯಲ್ಲಿ ತೊಡಗಿದ್ದಾರೆ. ಮೊದಲ ಹಂತದಲ್ಲಿರನ್ನು ಬೀದಿ ಗುಡಿಸಲು ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ 815 ಕಾರ್ಮಿಕರಿಗೆ ಸ್ವೀಪಿಂಗ್ ಯಂತ್ರ ಸಿಗಲಿವೆ.

English summary
Bruhat Bengaluru Mahanagara Palike (BBMP) to provide 815 cleaning machines to civic workers for cleanliness of the city very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X