ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ತೂರು ಕೋಡಿ ಸೇತುವೆ ನಿರ್ಮಾಣ ಕಾರ್ಯ ಇನ್ನೂ 2 ತಿಂಗಳು ಮುಂದಕ್ಕೆ

|
Google Oneindia Kannada News

ಬೆಂಗಳೂರು, ಏ.4: ವರ್ತೂರು ಕೋಡಿ ಬ್ರಿಡ್ಜ್ ಮರು ನಿರ್ಮಾಣ ಯೋಜನೆಯನ್ನು ಫೆಬ್ರವರಿಯಲ್ಲೇ ಪೂರ್ಣಗೊಳಿಸುತ್ತೇವೆ ಎಂದು ಬಿಬಿಎಂಪಿ ಭರವಸೆ ನೀಡಿತ್ತು. ಆದರೆ ಚುನಾವಣೆ ಮುಗಿದ ಬಳಿಕ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಬೂಬು ಹೇಳುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಬಿಎಂಪಿ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ಬ್ಯುಜಿಯಾಗಿರುವ ಕಾರಣ ಕಾಮಗಾರಿ ಕಡೆಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತಿಲ್ಲ. ಕಾಮಗಾರಿ ನಿಧಾನದಿಂದಾಗಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಜಾಪುರ ರಸ್ತೆ,ಗುಂಜೂರ್, ವೈಟ್‌ ಫೀಲ್ಡ್ ಮಾರ್ಗದಲ್ಲಿ ವಿಪರೀತ ಸಂಚಾರ ದಟ್ಟಣೆ ಏರ್ಪಟ್ಟಿದೆ.

ಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿ ಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿ

ಚುನಾವಣೆ ಇರುವ ಕಾರಣ ಜೂನ್ ವರೆಗೂ ಬಿಬಿಎಂಪಿ ಅಧಿಕಾರಿಗಳು ಅತ್ತ ಕಡೆ ಹೆಜ್ಜೆ ಹಾಕುವುದಿಲ್ಲ ಹಾಗಾಗಿ ಒಂದು ಭಾಗದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಐದು ತಿಂಗಳು ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.

BBMP finds poll excuse to delay varthur bridge

ಮತ್ತೊಂದು ಭಾಗ ಏಪ್ರಿಲ್ 2020ಕ್ಕೆ ಪೂರ್ಣಗೊಳ್ಳಲಿದೆ. ವರ್ತೂರು ಕೆರೆಯ ಬಳಿ ಸೇತುವೆ ನಿರ್ಮಾಣ ಸೂಕ್ಷ್ಮದ ಕೆಲಸ ಇಲ್ಲವಾದಲ್ಲಿ ಕೊಲ್ಕತ್ತ ಬ್ರಿಡ್ಜ್ ಮಾದರಿಯಲ್ಲಿ ಬಿದ್ದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾಮಗಾರಿ ನಿಧಾನವಾಗಿ ಮುಗಿಸುತ್ತಿದ್ದೇವೆ ಎನ್ನುವುದು ಅಧಿಕಾರಿಗಳ ಉತ್ತರವಾಗಿದೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

87 ಮೀಟರ್ ಅಂತರದಲ್ಲಿ ಎರಡು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 30 ಕೋಟಿ ವೆಚ್ಚವಾಗಲಿದೆ. ಕಾಮಗಾರಿಯನ್ನು 2018ರಲ್ಲಿಯೇ ಆರಂಭಿಸಲಾಗಿದೆ. ಈ ಯೋಜನೆಯು ಜಾಗದ ತೊಂದರೆಯಿಂದಾಗಿ ಸಾಕಷ್ಟು ವಿಳಂಬವಾಗಿತ್ತು. ಆಸ್ತಿ ಮಾಲೀಕರು ಜಾಗವನ್ನು ಕೊಡಲು ಹಿಂದೇಟು ಹಾಕಿದ್ದರು.

English summary
After promising a February opening and postponing it to may, the BBMP now citing election work and slow progress to push the varthur kodi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X