ಮಹಿಳಾ ಟೆಕ್ಕಿಗೆ ಕಿರುಕುಳ : ಹಾಸ್ಯ ನಟನ ವಿರುದ್ಧ ಆರೋಪ

Posted By:
Subscribe to Oneindia Kannada

ಬೆಂಗಳೂರು, ಜನವರಿ 07: ಮಜಾ ಟಾಕೀಸ್ ಖ್ಯಾತಿಯ ಹಾಸ್ಯ ನಟ ತರಂಗ ವಿಶ್ವ ಅವರ ವಿರುದ್ಧ ಕಿರುಕುಳ ಆರೋಪ ಹೊರೆಸಿ ಮಹಿಳಾ ಟೆಕ್ಕಿ ನಂದಾ ಎಂ.ಕೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಆರೋಪವನ್ನು ವಿಶ್ವ ಅವರು ತಳ್ಳಿಹಾಕಿದ್ದಾರೆ.

ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಹಾಸ್ಯನಟ ತರಂಗ ವಿಶ್ವ ಅಲಿಯಾಸ್ ವಿಶ್ವನಾಥ್ ಅವರ ದೂರು ನೀಡಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಗೂ ದೂರು ಸಲ್ಲಿಕೆಯಾಗಿದ್ದು, ಆಯುಕ್ತರ ನಿರ್ದೇಶನದ ಮೇಲೆ ಆರೋಪಿಗಳ ವಿರುದ್ಧ ಎಫ್ ಐ ಆರ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಉತ್ತರಹಳ್ಳಿಯ ಪ್ಯಾಷನ್ ಹೌಸ್ ಅಪಾರ್ಟ್ ಮೆಂಟ್ ನಲ್ಲಿ ತನ್ನ ಮಗಳ ಜೊತೆ ಟೆಕ್ಕಿ ವಾಸವಾಗಿದ್ದಾರೆ. 2013-14ರಲ್ಲಿ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಪುಟ್ಟಸ್ವಾಮಿ(ಆರೋಪಿ ನಂ 01)ಅವರು ಆಗಾಗ್ಗೆ ಮಹಿಳೆಯನ್ನು ಹಿಂಬಾಲಿಸಿ, ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿರುತ್ತಾರೆ.

Woman Techie files complaint against a actor Taranga Vishwa

ನಂತರ 2015ರಲ್ಲಿ ಕನಕ ಲೇಔಟ್ ಗೆ ಬಂದ ಮೇಲೂ ಪುಟ್ಟಸ್ವಾಮಿ ಹಾಗೂ ಅಳಿಯ ನಾಗೇಶ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ವಾಸವಾಗಿದ್ದು, ಅಲ್ಲಿ ಕೂಡಾ ನನಗೆ ಪುಟ್ಟಸ್ವಾಮಿ, ನಾಗೇಶ್, ವಿಶ್ವನಾಥ್(ತರಂಗ ವಿಶ್ವ), ಪಾಪಣ್ಣ ಎಂಬುವರು ಕಾಟ ಕೊಟ್ಟಿದ್ದಾರೆ. ಈ ಬಾರಿ ಈ ಹಿಂದೆ ಕೂಡಾ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೆಕ್ಕಿ ನಂದಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.

"ಪೊಲೀಸರೇ ಇದೊಂದು ಸುಳ್ಳು ಸುದ್ದಿ ಎಂದು ನನಗೆ ಸ್ಪಷ್ಟ ಪಡಿಸಿದ್ದಾರೆ. ನನಗೆ ಆ ಮಹಿಳೆಯ ಪರಿಚಯವೇ ಇಲ್ಲ. ಅದಷ್ಟೇ ಅಲ್ಲದೆ ಅಲ್ಲಿ ತರಂಗ ವಿಶ್ವ ಅನ್ನುವ ಹೆಸರಿನಲ್ಲಿ ದೂರನ್ನ ದಾಖಲು ಮಾಡಿದ್ದಾರೆ ಅಷ್ಟೇ ಅದೂ ನಾನಲ್ಲ" ಎಂದು ನಟ ವಿಶ್ವ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru : Woman Techie files complaint against a actor Taranga Vishwa with CK Achchukattu police station. Actor Taranaga Vishwa alias Vishwanth is one of the four accused in the case. A FIR is filed and police are investigating the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ