ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊರಕೆ ಹಿಡಿದ ವಿಜಯಾ ಕಾಲೇಜು ವಿದ್ಯಾರ್ಥಿಗಳು

|
Google Oneindia Kannada News

ಬೆಂಗಳೂರು, ಅ. 28: ನರೇಂದ್ರ ಮೋದಿ 'ಸ್ವಚ್ಛ ಭಾರತ' ಅಭಿಯಾನಕ್ಕೆ ಕೈಜೋಡಿಸಿರುವ ಬೆಂಗಳೂರಿನ ವಿಜಯಾ ಟೀಚರ್ಸ್ ಕಾಲೇಜು ವಿದ್ಯಾರ್ಥಿಗಳು ಜಯನಗರದ ರಸ್ತೆಗಳನ್ನು ಸ್ವಚ್ಛಮಾಡಿದರು. ಸೋಮವಾರ ಬೆಳಗ್ಗೆ ಮಳೆ ಬೀಳುತ್ತಿದ್ದನ್ನು ಲೆಕ್ಕಿಸದೆ ಪೊರಕೆ ಹಿಡಿದು, ಕಸ, ಪ್ಲಾಸ್ಟಿಕ್ ಮತ್ತು ಕಟ್ಟಡ ತ್ಯಾಜ್ಯಗಳನ್ನು ಶುಚಿಗೊಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಸಿದ ಶಾಸಕ ಬಿ.ಎನ್.ವಿಜಯ್ ಕುಮಾರ್ ಮಾತನಾಡಿ, ಈ ಸ್ವಚ್ಛತಾ ಅಭಿಯಾನವನ್ನು ಅರ್ಧಕ್ಕೆ ಬಿಡಬಾರದು. ಪ್ರತಿಯೊಬ್ಬರು ತಮ್ಮ ಸುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿ ಮನೆಯಿಂದ ಸ್ವಚ್ಛತಾ ಕೆಲಸ ಆರಂಭವಾಗಬೇಕು. ಇದು ಒಂದು ದಿನದ ಕೆಲಸವಾಗಿರದೇ ಪ್ರತಿದಿನದ ಕೆಲಸವಾಗಬೇಕು ಎಂದು ಹೇಳಿದರು.[ಬ್ಯಾಟ್ ಹಿಡಿದ ಕೈಗೆ ಪೊರಕೆ ತಗೊಂಡ ತೆಂಡೂಲ್ಕರ್]

ಇದೊಂದು ಸರ್ಕಾರಿ ಕಾರ್ಯಕ್ರಮ ಎಂದುಕೊಳ್ಳಬಾರದು. ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣ ಪರಿಕಲ್ಪನೆ ಸಾಕಾರಕ್ಕೆ ಇಂಥ ವಿನೂತನ ಕಾರ್ಯಕ್ರಮಗಳು ಪೂರಕವಾಗಿದ್ದು ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು.[ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]

vijaya

ಭೈರಸಂದ್ರ ವಾರ್ಡ್ ಬಿಬಿಎಂಪಿ ಸದಸ್ಯ ಎನ್.ನಾಗರಾಜ್, ಸಿ.ಕೆ.ಕುಮಾರಸ್ವಾಮಿ ಹಾಜರಿದ್ದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

English summary
Bangalore: In continuity of Swachh Bharat Abhiyan, students of Vijaya Teachers College joined the cleanliness drive in the Jayanagar area as they were seen on roads Monday morning with brooms in their hands. Despite heavy rainfall in the morning, hundreds of students cleaned the road and removed all the garbage and unwanted debris & construction items from the roads in Jayanagar 4th Block.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X