ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಇ-ಶೌಚಾಲಯ ಸ್ಥಾಪಿಸಲಿದೆ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ನ.8 : ಬೆಂಗಳೂರಿನಲ್ಲಿ ಸಾರ್ವಜನಿಕರ ಅನುಕೂಲಕಕ್ಕಾಗಿ 'ಇ-ಶೌಚಾಲಯ' ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಕೇರಳ ಮೂಲದ ಸಂಸ್ಥೆಯೊಂದು ಇದರ ಮಾದರಿ ಸಿದ್ದಪಡಿಸಿದ್ದು, ಗುರುವಾರ ಬಿಬಿಎಂಪಿ ಕಚೇರಿಯಲ್ಲಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಗಿದೆ.

ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಮತ್ತು ಅವುಗಳ ದುಸ್ಥಿತಿ ನೋಡಿರುವ ಸಾರ್ವಜನಿಕರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದರು. ಆದ್ದರಿಂದ ಇ-ಶೌಚಾಲಯ ಸ್ಥಾಪನೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಸದ್ಯ ಇದರ ಪ್ರಾತ್ಯಕ್ಷಿಗೆ ನಡೆದಿದ್ದು, ಬಿಬಿಎಂಪಿ ಒಪ್ಪಿಗೆ ನೀಡಿದರೆ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಈ ಶೌಚಾಲಯ ಸ್ಥಾಪನೆ ಆಗಲಿದೆ.

BBMP

ಕೇರಳ ಮೂಲದ ಇರಮ್ ಸೈಂಟಿಫಿಕ್ ಸಲೂಷನ್ಸ್ ಸಂಸ್ಥೆಯು ಇ-ಶೌಚಾಲಯ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ್ ಮುಂತಾದವರು ಬಿಬಿಎಂಪಿ ಆವರಣದಲ್ಲಿ ಗುರುವಾರ ಶೌಚಾಲಯದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮೇಯರ್ ಕಟ್ಟೆ ಸತ್ಯನಾರಾಯಣ, ಇ-ಶೌಚಾಲಯದ ಪರಿಕಲ್ಪನೆ ಆಕರ್ಷಕವಾಗಿದ್ದು, ನಗರದ ಉದ್ಯಾನವನ, ಕ್ರೀಡಾಂಗಣ, ಮಾರುಕಟ್ಟೆಗಳಲ್ಲಿ ಅಳವಡಿಸುವ ಬಗ್ಗೆ ಚಿಂತಿಸಲಾಗುವುದು. ಜಾಹೀರಾತು ಅಳವಡಿಕೆಗೆ ಅವಕಾಶ ನೀಡಿ ನಿರ್ವಹಣೆ ಮಾಡುವ ಯೋಚನೆ ಬಿಬಿಎಂಪಿ ಮುಂದಿದೆ. ಪ್ರಾಯೋಗಿಕವಾಗಿ ಕೆಲವು ಪ್ರದೇಶದಲ್ಲಿ ಅಳವಡಿಸಿ, ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಏನಿದು ಈ ಶೌಚಾಲಯ : ಇ-ಶೌಚಾಲಯ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಕರ್ನಾಟಕ ವಿಭಾಗದ ಮುಖ್ಯಸ್ಥ ಯೂನಿಸ್ ಸಲೀಂ, ಇದು ಸಂಪೂರ್ಣ ಯಾಂತ್ರೀಕೃತವಾದ ಶೌಚಾಲಯ ಮಾದರಿಯಾಗಿದೆ. 45 ಚದರ ಅಡಿ ವಿಸ್ತೀರ್ಣದಲ್ಲಿ ಇದನ್ನು ಅಳವಡಿಸಬಹುದಾಗಿದೆ ಎಂದು ತಿಳಿಸಿದರು. ಶೌಚಾಲಯಕ್ಕೆ ನೀರು, ಒಳಚರಂಡಿ ಸೌಕರ್ಯ ಕಲ್ಪಿಸಬೇಕಾಗಿದೆ ಎಂದು ಹೇಳಿದರು.

ಉಳಿದಂತೆ ಶೌಚಾಲಯದಲ್ಲಿ ಎಲ್ಲವೂ ಯಾಂತ್ರೀಕೃತವಾಗಿ ನಡೆಯಲಿದೆ. ಒಂದು ರೂ. ನಾಣ್ಯ ಹಾಕಿದರೆ ಬಾಗಿಲು ತೆರೆಯುತ್ತದೆ. ಒಳಭಾಗದಲ್ಲಿ ಸೆನ್ಸಾರ್ ಸೌಲಭ್ಯ ಅಳವಡಿಸಲಾಗಿದ್ದು, ದೀಪ ಹಾಗೂ ಫ್ಯಾನ್ ಯಾಂತ್ರಿಕವಾಗಿ ಚಾಲನೆಯಾಗಲಿದೆ. ಶೌಚಾಲಯ ಬಳಸಿದ ತರುವಾಯ ಸೆನ್ಸಾರ್ ವ್ಯವಸ್ಥೆ ಮೂಲಕವೇ ನೀರು ಪೂರೈಕೆಯಾಗಲಿದೆ. ನಂತರ ಒಳಗಿನ ಗುಂಡಿ ಒತ್ತಿದರೆ ಬಾಗಿಲು ತೆರೆಯುತ್ತದೆ ಎಂದು ಮಾಹಿತಿ ನೀಡಿದರು.

ಇ ಶೌಚಾಲಯದಲ್ಲಿ ಜಿಪಿಎಸ್ ಸೆನ್ಸಾರ್ ತಂತ್ರಜ್ಞಾನ ಅಳವಡಿಸಲಾಗಿದೆ. ನೀರಿನ ಪ್ರಮಾಣ, ಸಂಗ್ರಹವಾದ ನಾಣ್ಯಗಳ ಸಂಖ್ಯೆ ವಿವರದ ಜತೆಗೆ ಯಾವುದೇ ಹಾನಿ ಸಂಭವಿಸಿದರೂ ತಕ್ಷಣವೇ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗಲಿದೆ. ಹಾಗೆಯೇ ಬಳಕೆದಾರರು ದೂರು ದಾಖಲಿಸಲು ಧ್ವನಿಮುದ್ರಿತ ವ್ಯವಸ್ಥೆಯನ್ನು ಇದರಲ್ಲಿ ಮಾಡಲಾಗಿದೆ ಎಂದರು.

ಸದ್ಯ ಕೇರಳದಲ್ಲಿ 500ಕ್ಕೂ ಅಧಿಕ ಹಾಗೂ ಜಮ್ಮ ಮತ್ತು ಕಾಶ್ಮೀರದಲ್ಲಿ 15 ಇ-ಶೌಚಾಲಯ ಅಳವಡಿಸಲಾಗಿದೆ ಅವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ನಗರದಲ್ಲಿ ಕನಿಷ್ಠ 100 ಶೌಚಾಲಯಗಳು ಸ್ಥಾಪನೆ ಮಾಡಿದರೆ, ಸಂಸ್ಥೆಯು ಮೇಲ್ವಿಚಾರಣೆ ನಡೆಸಲು ಅನುಕೂಲವಾಗುತ್ತದೆ. ಸಂಸ್ಥೆಯ ಬಳಿ 4.50 ಲಕ್ಷ ರೂ. ಹಾಗೂ 5.50 ಲಕ್ಷ ರೂ. ಮೊತ್ತದ ಎರಡು ಮಾದರಿಯ ಶೌಚಾಲಯಗಳಿವೆ ಎಂದು ತಿಳಿಸಿದರು.

English summary
The Bruhat Bangalore Mahanagara Palike (BBMP) is considering a proposal to instal modern public toilets across the Bangalore. A Thiruvananthapuram based company has come forward to address the large void created by the lack of public toilets in Bangalore. The firm has designed lightweight toilets which can be easily installed and monitored. The company’s proposal is encouraging and offers a solution to Bangalore's problem of lack of toilets said, Mayor B.S.Sathyanarayana speaking after the demonstration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X