ಬಿಜೆಪಿ ತೊರೆದು ಜೆಡಿಎಸ್ ಸೇರಿದ ನಟಿ ಅಮೂಲ್ಯ ಮಾವ

Written By:
Subscribe to Oneindia Kannada
   ನಟಿ ಅಮೂಲ್ಯ ಮಾವ ಬಿಜೆಪಿ ನಾಯಕ ಜಿ ಎಚ್ ರಾಮಚಂದ್ರ ಜೆಡಿಎಸ್ ಪಾಲು | Oneindia Kannada

   ಬೆಂಗಳೂರು, ಏಪ್ರಿಲ್ 13: ರಾಜರಾಜೇಶ್ವರಿ ನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಜಿ.ಎಚ್.ರಾಮಚಂದ್ರ ಅವರು ಇಂದು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

   ಸೊಗಡು ಶಿವಣ್ಣಗೆ ಟಿಕೆಟ್ ಗೆ ಒತ್ತಾಯ, ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ

   ಎರಡು ದಶಕದಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ರಾಮಚಂದ್ರ ಅವರು ಜೆಡಿಎಸ್ ಸೆರ್ಪಡೆಗೊಂಡಿದ್ದು, ರಾಜರಾಜೇಶ್ವರಿನಗರದಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ.

   bjp-leader-gh-ramachandra-joined-jds

   ಚಿತ್ರ ನಟಿ ಅಮೂಲ್ಯ ಅವರ ಮಾವನವರಾಗಿರುವ ಜಿ.ಎಚ್.ರಾಮಚಂದ್ರ ಅವರು ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾಗೂ ಈ ಬಾರಿ ರಾಜರಾಜೇಶ್ವರಿ ನಗರದಿಂದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಸಹ ಆಗಿದ್ದರು.

   ಬೀದರ್: ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ?

   ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿರುವ ಕಾರಣ, ರಾಮಚಂದ್ರ ಅವರಿಗೇ ಜೆಡಿಎಸ್ ಸಿಗುವ ಸಾಧ್ಯತೆ ಇದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP leader GH Ramachandra has joined JDS today. He was BJP ticket aspirant from Rajarajeshwari Nagar. He is also father in law of actress Amulya.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ