ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.18ಕ್ಕೆ ಕೆ.ಎಸ್.ನ.ಟ್ರಸ್ಟ್ ನಿಂದ ಕವಿಪತ್ನಿ ದಿನಾಚರಣೆ: ವಿಭಿನ್ನ ಕಾರ್ಯಕ್ರಮ

|
Google Oneindia Kannada News

ಕನ್ನಡ ಭಾಷೆಯ ಸೊಗಡನ್ನು ಪರಿಚಯಿಸಿದ, ಅದರ ಹಿರಿಮೆಯನ್ನು ಉತ್ತುಂಗಕ್ಕೇರಿಸಿದ ಹಲವು ಕವಿ, ಸಾಹಿತಿಯರು ಕರ್ನಾಟಕದ ಮಣ್ಣಲ್ಲಿ ತಮ್ಮ ಅಮೂಲ್ಯ ಬದುಕ್ನು ಸವೆಸಿ ಹೋಗಿದ್ದಾರೆ. ಕನ್ನಡ ಭಾಷಾ ಸಂಪತ್ತನ್ನು ಶ್ರೀಮಂತವಾಗಿಸುತ್ತಿರುವ ಕವಿಗಳು ಈಗಲೂ ಹಲವರಿದ್ದಾರೆ. ಆದರೆ ಆ ಎಲ್ಲ ಕವಿಗಳಿಗೆ ಬೆನ್ನೆಲುಬಾಗಿ ನಿಂತು, ಅಡಿಗಡಿಗೆ ಪ್ರೋತ್ಸಾಹ ನೀಡಿ, ಅವರ ಸಾಧನೆಯ ಪಾಲುದಾರರಾದ ಎಷ್ಟೋ ಕವಿಯರ ಪತ್ನಿಯರ ಪರಿಚಯ ಮಾತ್ರ ಯಾರಿಗೂ ಇಲ್ಲ!

ಇಲ್ಲಿಂದಲೇ ಕೈ ಮುಗಿದರೆ ಅಲ್ಲಿಂದಲೇ ಹರಸಿದರು!ಇಲ್ಲಿಂದಲೇ ಕೈ ಮುಗಿದರೆ ಅಲ್ಲಿಂದಲೇ ಹರಸಿದರು!

ಪ್ರಸಿದ್ಧ ಕವಿಗಳ ಸಾಹಿತ್ಯ ಬದುಕಿಗೆ ಮಾರ್ಗದರ್ಶಿಗಳಾದ, ಸ್ಫೂರ್ತಿಯಾದ ಕವಿಪತ್ನಿಯರಿಗೆ ಗೌರವ ನೀಡುವ ವಿನೂತ ನಾರ್ಯಕ್ರಮವೊಂದನ್ನು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಆರಂಭಿಸಿದೆ. ಕವಿಪತ್ನಿಯರಿಗೆ ಪ್ರತಿವರ್ಷ, ವೆಂಕಮ್ಮ ಕೆ.ಎಸ್.ನರಸಿಂಹಸ್ವಾಮಿ ನೆನಪಿನ 'ನಿನ್ನೊಲುಮೆಯಿಂದಲೇ' ಗೌರವವನ್ನು ನೀಡಿ ಸನ್ಮಾನಿಸುವ ಯೊಜನೆ ಹಮ್ಮಿಕೊಳ್ಳಲಾಗಿದೆ. ದಾಂಪತ್ಯ ಕವಿ.ಕೆ.ಎಸ್.ನ. ಅವರ ಪತ್ನಿ ವೆಂಕಮ್ಮ ಅವರ ಜನ್ಮದಿನದಂದು ಈ ಗೌರವ ಪ್ರದಾನ ಕಾರ್ಯಕ್ರಮವಿರುತ್ತದೆ. ಈ ಗೌರವವನ್ನು ಈ ಬಾರಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕವಿ ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮಾ ಚಂದ್ರಶೇಖರ ಕಂಬಾರರಿಗೆ ನೀಡಲಾಗುತ್ತಿದೆ.

An honour to Kannada poets' wives by K.S.Narasimhaswamy trust

ನವೆಂಬರ್ 18 ರಂದು, ಶನಿವಾರ ಸಂಜೆ 5:30 ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎನ್ ಎನ್ ಮಲ್ಟಿಮೀಡಿಯಾ ಹಾಲ್ ನಲ್ಲಿ 'ನಿನ್ನೊಲುಮೆಯಿಂದಲೇ...' ಗೌರವ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ

ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್(ರಿ.) ಅಧ್ಯಕ್ಷರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ವಿಮರ್ಶಕಿ ಎಂ.ಎಸ್.ಆಶಾದೇವಿ, ಎಂ.ವಿ.ವೆಂಕಟೇಶಮೂರ್ತಿ ಉಪಸ್ಥಿತರಿರುತ್ತಾರೆ.

An honour to Kannada poets' wives by K.S.Narasimhaswamy trust

ಕೆ.ಎಸ್.ನರಸಿಂಹಸ್ವಾಮಿ ಅವರ ಮೊಮ್ಮಗಳಾದ ಡಾ.ಮೇಖಲಾ ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಅನುಶ್ರೀ, ಹೇಮಾ ಎಂಬುವವರು ಕೆ.ಎಸ್.ನ. ಅವರ ಪದ್ಯಗಳನ್ನು ಹಾಡಲಿದ್ದಾರೆ.

ದಾಂಪತ್ಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸಾಹಿತ್ಯ ಬದುಕಿಗೆ ಸ್ಫೂರ್ತಿಯಾದ, ಅವರ ಬಹುಪಾಲು ಕವನಗಳಲ್ಲಿ ಬರುವ ಪಾತ್ರವಾದ ಅವರ ಪತ್ನಿ ವೆಂಕಮ್ಮ ಅವರ ಜನ್ಮದಿನದ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

English summary
K.S.Narasimhaswamy trust is celebrating a different event as Kavipatni Dinacharane(birthday celebration of poet's wife) on Nov. 18th, in National College Basavanagudi in Bengaluru. The trust will be presenting an award to poet's wife in memory of great kannada poet K.S.Narasimhaswamy's wife Venkamma'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X