135888loveಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg135888loveಪ್ರಾಮಿಸ್‌ ಮಾಡಿದ್ರೆ ಮಾತ್ರ ನಾನ್‌ ಈ ವಿಷ್ಯಾ ಹೇಳ್ತೀನಿ!/column/women/2007/020307gossipping.htmlಕಂಡೋರ ಪತ್ರ, ಅದರಲ್ಲೂ ಪ್ರೇಮ ಪತ್ರಗಳ ಓದೋದು ತಪ್ಪು ಅಂತ ನಮಗೆಲ್ಲರಿಗೂ ಚೆನ್ನಾಗಿ ಗೊತ್ತು, ಆದರೆ ಹಾಳಾದ್ದು ಎಂಥದ್ದೋ ಒಂದು ರೀತಿಯ ಕುತೂಹಲ! ಮೊನ್ನೆ ಹೀಗೆ ಒಂದು ಲವ್‌ಲೆಟರ್‌ ನನ್‌ ಕಣ್ಣಿಗೆ ಬಿತ್ತು. ಅದರ ಬಗ್ಗೆ ನಿಮಗೆ ಹೇಳ್ದೆಯಿದ್ರೇ, ಬೆಳಗ್ಗೆ ತಿಂದ ತಿಂಡಿ ಜೀರ್ಣವಾಗೋದಾದ್ರೂ ಹೇಗೆ? ಅವಳು ಆ ಲವ್‌ಲೆಟರ್‌ನಲ್ಲಿ ಏನೇನ್‌ ಬರ್ದೀದಾಳೆ? ಯಾರಿಗೆ ಬರ್ದೀದಾಳೆ ಅಂತಾ 10897http://kannada.oneindia.com/img/2009/08/27-woman-water1.jpg135888loveಓ ಗೆಳತಿ, ಒಲುಮೆಯ ಹೂವೆ ನೀಹೋದೆ ಎಲ್ಲಿಗೆ?/column/sham/2006/080606loud_thinking.htmlಕಾಡುಬೆಳದಿಂಗಳ ರಾತ್ರಿಯಲ್ಲಿ ತಂಗಾಳಿಗೆ ಮೈಯೊಡ್ಡಿ ವಿಹಾರಕ್ಕೆಂದು ಹೊರಟವರು ನಾವು. ಇಂದು ಹಾಲುಜೇನಿನ ಚಕ್ರತೀರ್ಥದ ಸುಳಿಗೆ ಸಿಲುಕಿಕೊಂಡಿದ್ದೇವೆ. ಗತ್ಯಂತರವೇ ಇಲ್ಲ. ಅಲ್ಲೇ ನಿಂತು ನಕ್ಷತ್ರಗಳತ್ತ ಕೈಚಾಚೋಣ. ಕೆಲವಾದರೂ ನಮ್ಮದಾಗಬಹುದು. ಯೋಗ ಇದ್ದರೆ ಎಲ್ಲವೂ..* ಎಸ್.ಕೆ. ಶಾಮಸುಂದರ'ಓ ಬಸಂತಿ ಪವನ ಪಾಗಲ್‌ ನಾಜಾರೆ ನಾಜಾ.. ರೂಕೋ ಕೋಯೀ .. ಓ ಬಸಂತಿ"ನಮ್ಮದೊಂದು ದಿವ್ಯ ಪ್ರೇಮ ಆಗಿತ್ತು ಅಲ್ವಾ? ಮಧುಮತಿ.ಹೌದು. ಇವತ್ತಿನ 11285http://kannada.oneindia.com/img/2009/09/01-sham3.jpg135888loveಪ್ರೇಮಿಗಳ ದಿನದಂದು ಮುತಾಲಿಕ್‌ಗೆ ಪಿಂಕ್ ಚಡ್ಡಿ!/mixed-bag/lifestyle/2009/0209-pink-chaddi-to-mutalik-on-valentines-day.htmlಫೆಬ್ರವರಿ 14 ಪ್ರೇಮಿಗಳ ದಿನದಂದು ಒಟ್ಟಾಗಿರುವ ಹುಡುಗ ಹುಡುಗಿಯರನ್ನು ಬೇರ್ಪಡಿಸುವ ಅಥವಾ ಮದುವೆ ಮಾಡಿಸಿ ಒಂದಾಗಿಸುವ 'ಪ್ರತಿಜ್ಞೆ'ಗೈದಿರುವ ಬ್ರಹ್ಮಚಾರಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಅವಕೃಪೆಗೊಳಗಾಗಿರುವ ಹುಡುಗಿಯರಿಂದಲೇ 'ಭರ್ಜರಿ' ಕೊಡುಗೆ ಸಿಗಲಿದೆ.'ಕನ್ಸಾರ್ಷಿಯಮ್ ಆಫ್ ಪಬ್ ಗೋಯಿಂಗ್, ಲೂಸ್ ಅಂಡ್ ಫಾರ್ವರ್ಡ್ ವುಮೆನ್' ಎಂಬ ವಿಚಿತ್ರ ಹೆಸರಿನ ಆಧುನಿಕ ಜಗತ್ತಿಗೆ ತೆರೆದುಕೊಂಡಿರುವ, ಬೆಂಗಳೂರಿನಲ್ಲಿ ಬೇರೂರಿರುವ ಮಹಿಳೆಯರ ಸಂಘಟನೆಯೊಂದು 34568http://kannada.oneindia.com/img/2009/02/10-gift-parcel1.jpg135888loveಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg33279poetryಮತ್ತೆ ಮರೆಯಾಗುತ್ತೇನೆಂದು/literature/poem/2008/1223-daily-new-and-old-mahesh-hegade.htmlದಾಟಿ ಹೋಗುತ್ತೇನೆಅಂಗಳದ ಮುಂದೆಹೆಜ್ಜೆಗಳ ಜೊತೆಯಾಗಿನೆನಪುಗಳ ನಡಿಗೆನೆರಳುಗಳ ಹಂಗಿಲ್ಲ ಬೆಳಕಿನ್ನೂ ಹುಟ್ಟಿರದೆಕಡುಗಪ್ಪು ಹಾದಿಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆಸುಮ್ಮನಿರಲೇಳಿನಾನೂ ಮೌನಿಯಾಗುತ್ತೇನೆ.ಮಾತುಗಳ ಮಳೆಯಿಲ್ಲ ಮತ್ತೆ ಹುಟ್ಟುವ ಸೂರ್ಯಕಿಟಕಿಯೊಳಗಿಂದ ತಲುಪಿಮೈಮುರಿದು ಎಚ್ಚೆತ್ತುನೀ ಕಣ್ತೆರೆಯುವಷ್ಟರಲ್ಲಿನಾ ಕಾಲಿಯಾಗುತ್ತೇನೆಕಣ್ಣುಗಳ ಮಿಲನವಿಲ್ಲ ಕತ್ತಲು ಬೆಳಕೆರಡೂಬರುವ ಹೋಗುವನಿತ್ಯದ ಹೊಂದಾಣಿಕೆಗೆಮನಸೋತುಮಾತು ಕೊಟ್ಟಿದ್ದೇನೆನೀವು ಸಂಧಿಸುವ ಸಮಯಕ್ಕೆಸರಿಯಾಗಿ ಹಾಜರಿರುತ್ತೇನೆಂದು ಮತ್ತೆ ಮರೆಯಾಗುತ್ತೇನೆಂದು..ಚಿತ್ರ ಕೃಪೆ ; ನೆರಳು ಬೆಳಕು33660http://kannada.oneindia.com/img/2008/12/23-sun-shadow1.jpg33279poetryಬಾಗಿಲನು ತೆರೆದು ಸೇವೆಯನು ಕೊಡೊ/literature/articles/2008/1223-poetry-and-criticism-not-our-cup-of-tea.htmlಕನ್ನಡದಲ್ಲಿ ಕವನಗಳನ್ನು ಬರೆಯುವವರು ಹೆಚ್ಚು. ಓದುವವರು ಕಡಿಮೆ. ಅಲ್ಪಾಹಾರದ ನಂತರ ಏಕಾಗ್ರತೆಯಿಂದ ಕವನ ಓದಿ ಅದರ ರಸ ಹೀರಿಕೊಳ್ಳುವವರ ಸಂಖ್ಯೆ ಬಹಳೇ ಕಡಿಮೆ ಎನಬಹುದು. ಆದರೂ ಕೂಡ ಹಠಬಿಡದ ಆಂಟುಲೆಯಂತೆ ಕನ್ನಡದ ಮಾಧ್ಯಮಗಳು ಕಾಯಾ ವಾಚಾ ಮನಸಾ ಕವನಗಳನ್ನು ಅಚ್ಚು ಮಾಡುತ್ತಲೇ ಬರುತ್ತಿರುವುದು ಮಾನ್ಯ ಕವನ ಕರ್ತಾರರಿಗೆ ಗೊತ್ತಿರದ ಸಂಗತಿಯೇನಲ್ಲ. ಕವನದ ಗಂಧಗಾಳಿ ಗೊತ್ತಿಲ್ಲದಿದ್ದರೂ ಕವನಗಳನ್ನು ಪ್ರಕಟಿಸುತ್ತಲೇ 33667http://kannada.oneindia.com/img/2008/12/23-kanakadasa1.jpg33279poetryಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg33279poetryಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg33279poetryನಮ್ಮ ನಾಡು/literature/poem/2009/0826-my-land-my-people-lakshmi-rangaswamy.htmlಪಚ್ಚೆಯ ಹಸುರಿನ ಸೀರೆಯುಟ್ಟುನಾನಾ ನದಿಗಳಿಗೆ ಜಾಗಕೊಟ್ಟುಜಲಪಾತಗಳ ಧುಮುಕಬಿಟ್ಟುದಿನಮಣಿ ಇಡುವನು ಮೂಡಣದಿ ಬೊಟ್ಟುಸುತ್ತಲೂ ಹರಿದ್ವರ್ಣದ ಕಾಡುಗಳುಪಡೆದಿದೆ ಆಶ್ರಯವ ನಾನಾ ಪ್ರಾಣಿಗಳುತೇಗ ಶ್ರೀಗಂಧ ಮರಗಳ ಸಾಲುಮಾಡಿವೆ ಕನ್ನಡತಿಯ ಎಲ್ಲದರಲು ಮೇಲುಸಾಂಸ್ಕೃತಿಕ ಕಲೆಗಳ ತವರೂರುಇಲ್ಲಿ ಕವಿಗಳದೆ ಕಾರುಬಾರುತಾಯಿ ಮಡಿಲ ತುಂಬಿದೆ ಏಳು ಜ್ಞಾನಪೀಠಶಾಸ್ತ್ರೀಯ ಸ್ಥಾನಮಾನದ ಗೌರವ ಪಟ್ಟವಿಜಯ ಕನಕ ಪುರಂದರದಾಸರುಸಾವಿರ ದೀಪಗಳರಮನೆಯ ಅರಸರುಗಣ್ಯಾತಿಗಣ್ಯ ವ್ಯಕ್ತಿಗಳನೇಕರುಕರ್ನಾಟಕವೇ ನಮ್ಮೆಲ್ಲರ ತವರುಉಳಿಸಿಬೆಳೆಸುವಾ ಬನ್ನಿ ಕರುನಾಡನುಬನ್ನಿ ಹಾಡುವಾ 38834http://kannada.oneindia.com/img/2009/08/26-lakshmi-rangaswamy1.jpg278232mobileಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ/news/2009/02/17/media-contribution-to-agricultural-development.htmlಬೆಂಗಳೂರು, ಫೆ. 17 : ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಕೂಡ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಇಂಟರ್ನೆಟ್ ಸೇರಿದಂತೆ ಮಾಧ್ಯಮಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಅಂತರ್ಜಾಲ ಮಾಧ್ಯಮ ಮತ್ತು ಮೊಬೈಲ್ ತಂತ್ರಜ್ಞಾನ ಕೃಷಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರು ಮೊಬೈಲ್ ಸಹಾಯದಿಂದ ಬೆರಳತುದಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ.ಈ ನಿಟ್ಟಿನಲ್ಲಿ ಕೃಷಿ 34704http://kannada.oneindia.com/img/2009/02/17-mobile-sms1.jpg278232mobileಟ್ರಾಫಿಕ್ ಪೊಲೀಸರ ಕೈಯಲ್ಲಿ ಹೈಟೆಕ್ ಇಂಟರ್‌ಸೆಪ್ಟರ್!/cj/pasha/2009/0604-hitech-interceptor-for-shivamogga-police.htmlಶಿವಮೊಗ್ಗ, ಜೂ. 4 : ವೇಗವಾಗಿ ವಾಹನ ಓಡಿಸುವವರ, ಸಿಗ್ನಲ್ ಜಂಪ್ ಮಾಡುವವರ, ಕುಡಿದು ವಾಹನ ಓಡಿಸುವವರ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವವರನ್ನು ಸುಲಭವಾಗಿ ಗುರುತಿಸಿ ಕೇಸು ದಾಖಲಿಸಲು ರಾಜ್ಯ ಸರಕಾರ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಇಂಟರ್‌ಸೆಪ್ಟೆರ್ ವಾಹನ ಜಿಲ್ಲಾ ಪೊಲೀಸರಿಗೆ ನೀಡಿದೆ.ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಸಂಜಾರಿ ಪೊಲೀಸರು ನಗರದ ಬಸವೇಶ್ವರ 37115http://kannada.oneindia.com/img/2009/06/04-shivamogga-police1.jpg278232mobileಎಚ್ಜಿಕೆಗೆ ಕರೆ ಮಾಡಿ ಜೀವ ತಿನ್ನುತ್ತಿದ್ದಾಕೆ ಬಂಧನ/news/2009/06/17/honey-trap-nabs-hd-kumaraswamys-phony-girl.htmlಬೆಂಗಳೂರು, ಜೂ. 17 : ಮಹತ್ವದ ಕಾರ್ಯಾಚರಣೆಯಲ್ಲಿ ಕಳೆದ 8 ತಿಂಗಳಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಜೀವ ತಿನ್ನುತ್ತಿದ್ದ ಯುವತಿಯನ್ನು ಬಂಧಿಸುವಲ್ಲಿ ಸದಾಶಿವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಂದಿನಿಲೇಔಟ್ ನ ಲಕ್ಷ್ಮಿದೇವಿ ನಗರದ ನಿವಾಸಿಯಾಗಿರುವ ಜಯಲಕ್ಷ್ಮಿ ಎಂಬ ಪಿಯುಸಿ ಅನುತ್ತೀರ್ಣವಾದ ಯುವತಿ ಕುಮಾರಸ್ವಾಮಿ ಅವರ ನಿದ್ದೆಗೆಡಿಸಿದಾಕೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು 37400http://kannada.oneindia.com/img/2009/06/17-hd-kumaraswamy2e.jpg278232mobileಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ/column/manikanth/2009/0923-ks-narasimhaswamy-and-modern-lovers.htmlಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ 39341http://kannada.oneindia.com/img/2009/09/23-ksn4.jpg278232mobileಶಿವಮೊಗ್ಗ ಗ್ರಾಹಕರಿಗೆ ಬಿಎಸ್ಎನ್ಎಲ್ ವಿಶೇಷ ಕೊಡುಗೆ/news/2009/10/01/special-offers-to-shimoga-customers-by-bsnl.htmlಶಿವಮೊಗ್ಗ, ಅ. 1 : ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್.) 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವೈವಿಧ್ಯಮಯ ಸೇವೆಗಳನ್ನು ನೀಡುತ್ತಿದೆಯೆಂದು ಶಿವಮೊಗ್ಗ ಟೆಲೆಕಾಂ ಜಿಲ್ಲೆಯ ಮಹಾ ಪ್ರಬಂಧಕ ರಾಧಾಕೃಷ್ಣನ್ ತಿಳಿಸಿದ್ದಾರೆ.ಅವರು ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇತ್ತೀಚಿನ ಸರ್ಕಾರದ ಆದೇಶದನ್ವಯ ಶಿವಮೊಗ್ಗ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ 39466http://kannada.oneindia.com/img/2009/10/01-bsnl-logo2e.gifnews"> ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ | KS Narasimhaswamy | Modern lovers | Love | Venkamma | Mysooru Mallige - ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ - Kannada Oneindia

ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ

KS Narasimhaswamy
ಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆಯೇ ಬರೆದರಲ್ಲ? ಆ ವಿಷಯವಾಗಿಯೇ ಅವರು ಮಾತಾಡಲಿದ್ದಾರಾ? ಭರ್ತಿ ಐವತ್ತು ವರ್ಷಗಳ ಕಾಲ ಪ್ರೀತಿ-ಪ್ರೇಮದ ಜಪದಲ್ಲೇ ಕೆಎಸ್‌ನ ಉಳಿದುಬಿಟ್ಟರು ಅಂದರೆ- ಅವರ ಮನಸ್ಸು ಕದ್ದ ಬೆಡಗಿ(ಯರು) ತುಂಬ ಸುಂದರಿಯೇ ಇರಬೇಕು. ಅವರ ನೆನಪಲ್ಲಿಯೇ ತೇಲಿಹೋಗಿ ಕೆಎಸ್‌ನ ಒಂದರ ಹಿಂದೊಂದು ಪದ್ಯ ಬರೆದಿರಬೇಕು. ಹಳೆಯ ಪ್ರೇಮ ಮತ್ತು ಹಳೆಯ ಪ್ರೇಯಸಿಯರು ನೆನಪಾದಾಗೆಲ್ಲ ಅವರಿಗೆ ಒಂದೊಂದು ಪದ್ಯ ಹೊಳೆದಿರಬೇಕು. ಅಂದಹಾಗೆ, ಕೆಎಸ್‌ನ ಅವರ ಪತ್ನಿಗೆ ಇದೆಲ್ಲ ಗೊತ್ತಿಲ್ಲವಾ? ಎಲ್ಲ ಗೊತ್ತಿದ್ದೂ ಅವರು ಸುಮ್ಮನಿದ್ದಾರಾ? ಗಂಡ ಹೀಗೆ ಒಂದರ ಹಿಂದೊಂದು ಪ್ರೇಮ ಕವಿತೆ ಬರೀತಾ ಇದ್ದಾಗೆಲ್ಲ ಅವರಿಗೆ ಸಂತೋಷ, ಬೆರಗು, ಅಭಿಮಾನ ಮತ್ತು ಅನುಮಾನ ಒಟ್ಟೊಟ್ಟಿಗೇ ಬಂದುಬಿಡಲ್ವ? ಈ ವಿಷಯವಾಗಿ ಅವರು ಅವಾಗವಾಗ ಜಗಳ ಮಾಡೋದಿಲ್ವ?

ಅವತ್ತು ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಕಿರಿಯರಿಗೆ ಇಂಥವೇ ಕೆಟ್ಟ ಕುತೂಹಲದ ಪ್ರಶ್ನೆಗಳು ಕ್ಷಣಕ್ಷಣಕ್ಕೂ ಕಾಡಿದ್ದವು. ಎಲ್ಲರೂ ಕವಿಗಳ ನಿರೀಕ್ಷೆಯಲ್ಲಿದ್ದಾಗಲೇ, ದಸರಾ ರಜೆ ಕಳೆಯಲು ಅಜ್ಜಿಯ ಮನೆಗೆ ಮಕ್ಕಳು ಬರ್‍ತಾರಲ್ಲ? ಆ ಖುಷಿಯಲ್ಲಿ ಬಂದೇಬಿಟ್ಟರು ಕೆ.ಎಸ್.ನ. ಅವರೊಂದಿಗೆ ಶ್ರೀಮತಿ ವೆಂಕಮ್ಮನವರಿದ್ದರು. ಇಬ್ಬರ ನಡಿಗೆಯಲ್ಲೂ ತಾಳಮೇಳವಿತ್ತು. ವೇಗದಲ್ಲಿ ಮಂದಹಾಸವಿತ್ತು. ಕೆಎಸ್‌ನ ಅವತ್ತು ಮಲ್ಲಿಗೆ ಬಿಳುಪಿನ ಜುಬ್ಬಾ- ಪಂಚೆ ಧರಿಸಿದ್ದರು. ವೆಂಕಮ್ಮನವರು ಗಾಢ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕಾರ್ಯಕ್ರಮದುದ್ದಕ್ಕೂ ದಂಪತಿಯರು ಪರಸ್ಪರರ ಬಗ್ಗೆ ಅದೆಷ್ಟು ಕೇರ್ ತಗೊಂಡರು ಅಂದರೆ-ವಾಹ್, ಜಗತ್ತಿನ ಆದರ್ಶ ದಂಪತಿ ಅಂದರೆ ಇವರೇ ಇರಬೇಕು ಎಂಬ ಭಾವ ಹಲವರಿಗೆ ಬಂದದ್ದು ಸುಳ್ಳಲ್ಲ. ಏಕೆಂದರೆ ಕೆಎಸ್‌ನ ಅವರ ಹಣೆಯ ಮೇಲೆ ಒಂದೇ ಒಂದು ಬೆವರಹನಿ ಕಂಡರೂ ಸಾಕು, ಅದನ್ನು ಒರೆಸಲು ವೆಂಕಮ್ಮನವರು ಮುಂದಾಗುತ್ತಿದ್ದರು. ಹಾಗೆಯೇ ವೆಂಕಮ್ಮನವರು ಒಂದೆರಡು ನಿಮಿಷದ ಮಟ್ಟಿಗೆ ಸಪ್ಪೆ ಮುಖಭಾವದಲ್ಲಿ ಕೂತರೂ ಕೆಎಸ್‌ನ-ಏನಾಯ್ತು ನಿಂಗೆ? ಯಾಕೆ ಸಪ್ಪಗಾಗಿ ಬಿಟ್ಟೆ? ಆಯಾಸ ಆಯ್ತಾ? ಎಂಬರ್ಥದಲ್ಲಿ ಪ್ರಶ್ನೆ ಹಾಕುತ್ತಿದ್ದರು.

ವಿಶೇಷವೆಂದರೆ-ಅವತ್ತು ಕೆಎಸ್‌ನ ಅವರ ನಂತರ ಶ್ರೀಮತಿ ವೆಂಕಮ್ಮನವರೂ ನಾಲ್ಕು ಮಾತಾಡಿದರು! ಅದಕ್ಕೆ ಕಾರಣವಾದದ್ದು ಕಿರಿಯರೊಬ್ಬರ ತುಂಟ ಪ್ರಶ್ನೆ. ಅವರು ಸಹಜ ಕುತೂಹಲದಿಂದಲೇ ಕೇಳಿದ್ದರು: ಕೆಎಸ್‌ನ ಅವರ ಪದ್ಯದಲ್ಲಿ ಬರುವ ಪದುಮ, ಶಾರದೆ, ಶಾನುಭೋಗರ ಮಗಳು, ಕಾಮಾಕ್ಷಿ, ಕನಕ... ಹೆಸರಿನ ಹುಡುಗಿಯರು(?) ಬೇರೆ ಬೇರೆ ಊರಿನವರೋ ಅಥವಾ ಇವೆಲ್ಲ ತಮ್ಮ ಕಾವ್ಯದ ನಾಯಕಿಗೆ ಕೆಎಸ್‌ನ ಇಟ್ಟುಕೊಂಡ ಹೆಸರುಗಳೋ? ಅವರ ಕಾವ್ಯದ ನಾಯಕಿ ಯಾರು? ತಮ್ಮ ನಾಯಕಿಯರೊಂದಿಗೆ ಕೆಎಸ್‌ನ ಒಂದೇ ಒಂದು ದಿನವಾದರೂ ಜಗಳ ಮಾಡಲೇ ಇಲ್ಲವೆ? ಬರೀ ಪ್ರೀತಿ-ಪ್ರೇಮದ ಬಗ್ಗೆ ಮಾತ್ರ ಅವರು ಪದ್ಯ ಬರೆದಿದ್ದಾರೆ. ಜಗಳವಾಡಿದ ಬಗ್ಗೆ ಒಂದೇ ಒಂದು ಕವಿತೆಯೂ ಇಲ್ಲವಲ್ಲ, ಯಾಕೆ?'

ಕೆಣಕುವಂತಿದ್ದ ಈ ಪ್ರಶ್ನೆಗೆ ಕೆಎಸ್‌ನ ಉತ್ತರಿಸಲಿಲ್ಲ. ಸುಮ್ಮನೆ ನಸುನಕ್ಕರು. ಆಗ ಮಾತು ಶುರು ಮಾಡಿದ ವೆಂಕಮ್ಮನವರು ಹೀಗೆಂದರು:ಇವರ ಪದ್ಯಗಳಲ್ಲಿ ಬರುವ ಪದುಮ, ಶಾರದೆ, ಕಾಮಾಕ್ಷಿ, ಕನಕ, ಶಾನುಭೋಗರ ಮಗಳು... ಎಲ್ಲವೂ ನಾನೇ. ವೆಂಕಮ್ಮ ಅನ್ನೋ ಹೆಸರು ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸಿರಬೇಕು ಇವರಿಗೆ. ಆ ಕಾರಣದಿಂದಲೇ ಬೇರೆ ಹೆಸರು ಬಳಸಿದ್ದಾರೆ. ಇವರು ಒಂದು ದಿನ ಕೂಡ ಜಗಳ ಮಾಡಲೇ ಇಲ್ಲ. ತುಂಬಾ ಬೇಸರವಾದರೆ, ಸಿಟ್ಟು ಬಂದರೆ ಆಗ ಯಾರೊಂದಿಗೂ ಮಾತನಾಡದೆ ಕೂತುಬಿಡ್ತಿದ್ರು. ಆಗ ನಮಗೆಲ್ಲ ರಾಯರು ಸಿಟ್ಟಾಗಿದ್ದಾರೆ' ಎಂದು ಅರ್ಥವಾಗುತ್ತಿತ್ತು. ಅಂಥ ವೇಳೆಯಲ್ಲಿ ನಾನೂ ಅವರನ್ನು ಕೆಣಕಲು ಹೋಗುತ್ತಿರಲಿಲ್ಲ. ಅವರೊಂದಿಗೆ ಒಮ್ಮೆ ಕೂಡ ಜಗಳ ಮಾಡಲಿಲ್ಲವಲ್ಲ ಎಂದು ಸ್ವಲ್ಪ ಬೇಸರವಿದೆ. ಹಾಗೆಯೇ ಜಗಳ ಮಾಡದೆಯೇ ಬದುಕಿದ ವಿಷಯವಾಗಿ ಹೆಮ್ಮೆಯೂ ಇದೆ...'

ವೆಂಕಮ್ಮನವರ ಮಾತು ಮುಗಿಯುತ್ತಿದ್ದಂತೆಯೇ ಒಮ್ಮೆ ಕತ್ತೆತ್ತಿ ನೋಡಿದ ಕೆ.ಎಸ್.ನ ಮತ್ತೆ ನಸುನಕ್ಕರು. ತಕ್ಷಣವೇ ಅವರದೊಂದು ಕವಿತೆ ನೆನಪಾಯಿತು. ಆ ಪದ್ಯ, ತುಂಬ ಪ್ರಾಯದ ಹುಡುಗಿಯ ಥರಾ, ಅವಳ ಜಂಬದ ನಗುವಿನ ಥರಾ, ವಯ್ಯಾರದ ನಡಿಗೆಯ ಥರಾ, ಕಾಲ್ಗೆಜ್ಜೆಯ ಸದ್ದಿನ ಥರಾ, ಕೈಬಳೆಯ ನಾದದ ಥರಾ, ಘಮ್ಮೆನ್ನುವ ಮಲ್ಲಿಗೆಯ ಪರಿಮಳದ ಥರಾ, ಜೀವ ಝಲ್ಲೆನಿಸುವ ಎದೆಯ ಮಧ್ಯದ ಸುವಾಸನೆಯ ಥರಾ ಶುರುವಾಗುತ್ತದೆ. ನದಿಯಂತೆ ಬಾಗಿ, ಬೀಗಿ, ಬಳುಕಿ ಸಾಗುತ್ತದೆ. ಅದನ್ನು ಕವಿ ಹೇಳುವುದು ಹೀಗೆ:

ಒಬ್ಬಳೇ ಬಂದಳು/ ನಡೆನಡೆದು ಕನಕ!/ನಗುನಗುತ ಬಂದಳು/ನನ್ನೆದೆಯ ತನಕ
ಬರುವ ಸಡಗರದಲ್ಲಿ/ಸದ್ದಾಯ್ತು ಚಿಲಕ;/ ಬಂದು ನಿಂತಳು ಇಲ್ಲಿ/ಎತ್ತರಿಸಿ ಬೆಳಕ.
........................
........................
ನೀಲ ಗಗನದ ನಡುವೆ/ಚಂದಿರನ ಹೊರಳು ಮೌನಮಾಯೆಯ ನಡುವೆ/ರಾಗಗಳ ಹೊರಳು.
ಕಣ್ಣೆತ್ತಿ ನೋಡಿದಳು/ಕಣ್ತುಂಬ ಕನಕ; ಗಾಳಿಯಲಿ ತುಂಬಿಗಳು/ಝಂಕಾರ ಪದಕ.

ಪದ್ಯ ಮುಂದುವರಿದಂತೆಲ್ಲ ಖುಷಿಯಾಗುತ್ತದೆ. ರೋಮಾಂಚನವಾಗುತ್ತದೆ. ಆಗಿರುವ ವಯಸ್ಸನ್ನೂ ಮರೆತು ಪ್ರೀತಿಸುವ ಮನಸ್ಸಾಗುತ್ತದೆ. ಕೆ.ಎಸ್.ನ ಅವರ ಜಮಾನಾದಲ್ಲಿ ಪ್ರೇಮಿಗಳಿಗೆ ಇದ್ದ (?) ಪ್ರೈವೇಸಿ ನೆನೆದು ಅಸೂಯೆಯಾಗುತ್ತದೆ!

****
ಕೆಎಸ್‌ನ ಅವರ ಪದ್ಯ, ಅವರ ಕಾಲದ ಪ್ರೇಮ, ಅವರಿಗೆ ಸಿಕ್ಕ ರೋಮಾಂಚನ ತುಂಬ ಇಷ್ಟವಾಗುತ್ತದೆ ನಿಜ. ಆದರೆ, ಆ ಕಾಲದವರಂತೆ ಪ್ರೇಮಿಸುವುದು ಈಗ ಸಾಧ್ಯವೇ ಇಲ್ಲವೇನೋ. ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ, ಒಮ್ಮೆ ನಗುಬರುತ್ತದೆ. ಹಿಂದೆಯೇ ಹೌದಲ್ವಾ?' ಅನ್ನಿಸಿ ಅಚ್ಚರಿಯಾಗುತ್ತದೆ.

ಕೇಳಿ: ಇವತ್ತು ಪ್ರೀತಿಯ ಹೊಳೆಗೆ ಬಿದ್ದವರೆಲ್ಲ ರೋಮಾಂಚನದಲ್ಲಿ' ಮುಳುಗದೇ ಇರಲು ಮುಖ್ಯ ಕಾರಣವಾಗಿರುವುದು ಮೊಬೈಲು! ಇವತ್ತು ಎಷ್ಟೋ ಮಂದಿಗೆ ಪ್ರೀತಿ ಚಿಗುರುವುದೇ ಒಂದು ಎಸ್ಸೆಮ್ಮೆಸ್, ಒಂದು ಕಾಲ್ ಮೂಲಕ! ಹಾಗೆಯೇ ಅದೇ ಮಧುರ ಪ್ರೇಮ ಲಟಾರನೆ ಮುರಿದು ಬೀಳುವುದೂ ಒಂದು ಎಸ್ಸೆಮ್ಮೆಸ್ಸು ಅಥವಾ ಒಂದು ಫೋನ್ ಕಾಲ್ ಮೂಲಕವೇ ಎಂಬುದು ವಿಪರ್‍ಯಾಸ. ಈಗ ಎಲ್ಲಿ ಸರಸವೂ, ಸಿಹಿಮುತ್ತೂ ಮೊಬೈಲಿನ ಪಿಸಪಿಸ ಮಾತುಗಳಲ್ಲೇ ಮುಗಿದು ಹೋಗುತ್ತದೆ. ಈಗಿನ ಕಾಲದಲ್ಲಿ ಯಾವ ಹುಡುಗನೂ ಅವಳ' ಮೇಲೆ ಪದ್ಯ ಬರೆಯುವುದಿಲ್ಲ. ಬದಲಿಗೆ ರಿಂಗ್‌ಟೋನ್ ಕಳಿಸುತ್ತಾನೆ, ಕೇಳಿಸುತ್ತಾನೆ! ಒಂದು ಗ್ರೀಟಿಂಗ್ ಕಾರ್ಡಿನೊಂದಿಗೆ ಅವಳ ಮುಂದೆ ದೈನೇಸಿಯಂತೆ ನಿಲ್ಲುವುದಿಲ್ಲ. ಬದಲಿಗೆ ಅವಳಿಗೆ ಭರ್ತಿ ಹದಿನೈದು ಸಾವಿರದ ಮೊಬೈಲು ಕೊಡಿಸುತ್ತಾನೆ. ಆಮೇಲೆ ದಿನದ ಇಪ್ಪತ್ನಾಲ್ಕು ಗಂಟೆಯೂ ಅವಳೊಂದಿಗೆ ಟಚ್'ನಲ್ಲಿರುತ್ತಾನೆ. ಒಂದು ದಿನವೂ ತಪ್ಪಿಸದೆ ಮಾತಾಡುವುದರಿಂದ ಹುಡುಗನಿಗಾಗಲಿ, ಹುಡುಗಿಗಾಗಲಿ ಎಲ್ಲರ ಕಣ್ತಪ್ಪಿಸಿ ಭೇಟಿಯಾಗಬೇಕಾದ ಮಹದಾಸೆ ಇರುವುದಿಲ್ಲ ಅಥವಾ ಭೇಟಿಯಾದರೂ, ಆಗಲೂ ಹೊಸ ರಿಂಗ್‌ಟೋನ್ ಕೇಳಿಸುವ, ಏನನ್ನೋ ಕದಿಯುವ ಅವಸರ' ಮಾತ್ರ ಇರುತ್ತದೆ. ಅಂಥ ಭೇಟಿಯಲ್ಲೂ ಮೊಬೈಲಿನಲ್ಲಿ ಅವನೋ, ಅವಳೋ ಹದಿನೈದಿಪ್ಪತ್ತು ನಿಮಿಷ ಮಾತಿಗೆ ನಿಂತರೆ- ಆ ಕಾರಣಕ್ಕೇ ಜಗಳ ಶುರುವಾಗಿಬಿಡುತ್ತದೆ. ಉಹುಂ, ನಂತರದಲ್ಲಿ ಅವರ' ಪ್ರೇಮ ಮತ್ತೆ ಹಳೆಯ ಟ್ರ್ಯಾಕ್‌ಗೆ ಬರುವುದಿಲ್ಲ.

ಈ ದಿನಗಳಲ್ಲಿ ಪ್ರೇಮಿಗಳಿಗೆ ಇರುವ ಅಡೆತಡೆಗಳನ್ನು ಗಮನಿಸಿದರೂ ಅಚ್ಚರಿಯಾಗುತ್ತದೆ. ಏಕೆಂದರೆ, ಇವತ್ತು ಅವರ ರಕ್ಷಣೆಗೆ ಜನರೂ ಇಲ್ಲ. ಪ್ರಕೃತಿಯೂ ಇಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ, ಇವತ್ತು ಪ್ರೀತಿಯ ಹೊಳೆಗೆ ಬಿದ್ದ ಹುಡುಗ/ಹುಡುಗಿ ಕೆಲಸಕ್ಕೆ ಸೇರಿರುತ್ತಾರೆ; ಕಾಲೇಜಿಗೂ ಹೋಗುತ್ತಿರುತ್ತಾರೆ. ಅವರದು ಪ್ರಧಾನಮಂತ್ರಿಯಷ್ಟೇ ಬ್ಯುಸಿ ಶೆಡ್ಯೂಲ್. ಮಧ್ಯಾಹ್ನ ಅವಳಿಗೊಂದು ಮೆಸೇಜು ಕಳಿಸಲು ಇವನು ಮೊಬೈಲು ಎತ್ತಿಕೊಂಡರೆ, ಅದೇ ವೇಳೆಗೆ ಬಾಸ್ ಕರೆದಿರುತ್ತಾನೆ. ಇವಳು ಸಂಜೆ' ಬೇಗ ಸಿಗೋಣವಾ ಎಂದು ಅವನಿಗೆ ಮೆಸೇಜು ಬಿಟ್ಟು, ಹತ್ತು ನಿಮಿಷ ಮೊದಲೇ ಆಫೀಸು ಬಿಟ್ಟರೂ, ಗಿಜಿಗಿಜಿ ಟ್ರಾಫಿಕ್ಕಿಗೆ ಸಿಕ್ಕಿಕೊಂಡ ಕಾರಣದಿಂದ ಕಾಫಿಡೇ ತಲುಪುವ ವೇಳೆಗೆ ಎಂಟೂವರೆ ದಾಟಿರುತ್ತದೆ. ಒಂಬತ್ತೂವರೆಯ ಒಳಗೆ ಮನೇಲಿರಬೇಕು; ಬಟ್ಟೆ ಅಥವಾ ಕೈ ಬೆರಳಿನಲ್ಲಿ ಅವನು' ಹಾಕಿರುವ ಪರ್‌ಫ್ಯೂಮ್‌ನ ಘಮವೋ, ಸಿಗರೇಟಿನ ಘಾಟೋ ಅಂಟಿಕೊಳ್ಳಬಾರದು ಎಂದು ಇವಳು' ವಿಪರೀತ ಎಚ್ಚರಿಕೆ ವಹಿಸುವುದರಿಂದ ಜತೆಯಲ್ಲಿ ಕೂತಿದ್ದರೂ ಅವನು ಮುಟ್ಟುವಂತಿಲ್ಲ. ಮುತ್ತಿಡುವಂತಿಲ್ಲ!

ಹೋಗಲಿ, ಮನೆಮಂದಿಯ ಅಡ್ಡಿಯೇ ಇಲ್ಲ ಅಂದುಕೊಂಡರೂ ಈ ದಿನಗಳಲ್ಲಿ ಪ್ರೇಮಿಗಳಿಗೆ ಸ್ವಾತಂತ್ರ್ಯವಿಲ್ಲ. ಪಾರ್ಕಿಗೆ ಹೋದರೆ ಪೊಲೀಸರು ಕಾಡುತ್ತಾರೆ. ಕಾಫಿಡೇಲಿ ಕುಳಿತರೆ ಪುಂಡರು ಕೆಣಕುತ್ತಾರೆ. ಹುಡುಗ-ಹುಡುಗಿ ಇಬ್ಬರೂ ಒಂದೇ ಆಫೀಸಿನಲ್ಲಿ ಕೆಲಸ ಮಾಡಿದರಂತೂ ಸಹೋದ್ಯೋಗಿಗಳೇ ಅಣಕಿಸಿಬಿಡುತ್ತಾರೆ. ಇನ್ನು, ಮನೆಯಲ್ಲಿ ಸಣ್ಣದೊಂದು ಕಿರಿಕ್ ಆಗಿಬಿಟ್ಟರೂ ಸಾಕು, ಅಪ್ಪ-ಅಮ್ಮ ಮೊದಲು ಕೆಲಸ ಬಿಡಿಸುತ್ತಾರೆ. ದಿನದಿನವೂ ಮೊಬೈಲು ಚೆಕ್ ಮಾಡುತ್ತಾರೆ ಅಥವಾ ಆ ಹುಡುಗನ್ನೇ ಕರೆಸಿ ಬುದ್ಧಿ ಹೇಳಿಸುತ್ತಾರೆ. ಹುಡುಗಿಯನ್ನು ಊರೇ ಬಿಡಿಸುತ್ತಾರೆ! ಈ ಯಾವುದಕ್ಕೂ ಹುಡುಗ-ಹುಡುಗಿ ಕೇರ್ ಮಾಡದೆ ಅಡ್ಡಾಡಿಕೊಂಡಿದ್ದರು ಅಂದುಕೊಳ್ಳಿ: ಅಂಥವರನ್ನು ಒಂದಷ್ಟು ದಿನ ಸೂಕ್ಷ್ಮವಾಗಿ ಗಮನಿಸುವ ಪ್ರಮೋದ್ ಮುತಾಲಿಕ್ ಕಡೆಯ ಜನ ಅವಸರದಲ್ಲಿ ತಾಳಿ ಕಟ್ಟಿಸಿ ಮದುವೆ ಮುಗಿಸಿಬಿಡುತ್ತಾರೆ! ಒಮ್ಮೆ ಮದುವೆಯ ಬಂಧನಕ್ಕೆ ಈಡಾದ ಮೇಲೆ- ನಗುವುದಕ್ಕೆ, ಅವಳ ನೆನಪಲ್ಲಿ ಚಿತ್' ಆಗುವುದಕ್ಕೆ, ಏನನ್ನೋ ಕಲ್ಪಿಸಿಕೊಂಡು ಸಡಗರ ಪಡುವುದಕ್ಕೆ ಅವಕಾಶ ಎಲ್ಲಿದೆ ಹೇಳಿ?

ಇದನ್ನೆಲ್ಲ ನೆನಪು ಮಾಡಿಕೊಂಡರೆ, ಈಗಿನ ಕಾಲದ ಪ್ರೇಮಿಗಳ ಬಗ್ಗೆ ಅಯ್ಯೋಪಾಪ' ಅನ್ನಿಸುತ್ತದೆ. ಮರುಕವಾಗುತ್ತದೆ. ಮಾಡರ್ನ್' ಎನ್ನುವಂಥ ಥಳುಕು, ಬಳುಕು, ಒಂದಿಷ್ಟು ವಿಶೇಷ ಅನುಕೂಲಗಳು ಇರಲಿಲ್ಲ ಎಂಬುದನ್ನು ಬಿಟ್ಟರೆ ಹಳೆಯ ಕಾಲದ ಪ್ರೀತಿಯೇ ಚೆನ್ನಾಗಿತ್ತು: ಕೆಎಸ್‌ನ ಕಾಲದ ಪ್ರೇಮಿಗಳು ತುಂಬ ಖುಷಿಯಿಂದ ಇದ್ದರು ಎಂದು ಸಂಕೋಚವಿಲ್ಲದೆ ಹೇಳುವ ಆಸೆಯಾಗುತ್ತದೆ. ಆ ಸಂದರ್ಭಗಳಲ್ಲಿ ಮತ್ತೆ ನೆನಪಾಗುವುದು ಅವೇ ಕೆಎಸ್‌ನ ಕವಿತೆಯ ಮುಂದುವರಿದ ಸಾಲುಗಳು. ಕವಿತೆ, ನಿಂತು ಹೋಗಿದ್ದ ಹಾಡಿನಂತೆ, ಅಮ್ಮನ ಚೆಂದದ ಡ್ಯಾನ್ಸಿನಂತೆ ಹೀಗೆ ತೆರೆದುಕೊಳ್ಳುತ್ತದೆ:

ತಲೆಬಾಗಿ ನೋಡಿದಳು/ಕನ್ನಡಿಯ ಕಡೆಗೆ/ ಅಲ್ಲಿ ಉತ್ತರವಿತ್ತು/ಹೂವಿಟ್ಟ ಜಡೆಗೆ!
........................
ಕೈ ಹಿಡಿದು ಕೇಳದೆನು/ಸಿಟ್ಟೇನೆ, ಕನಕ! ನಿಟ್ಟುಸಿರ ನಟ್ಟಿದಳು/ನನ್ನೆದೆಯ ತನಕ.
ಬಿಗಿದಪ್ಪಿ ಕೇಳಿದೆನು/ಕಣ್ಣಬಳಿ, ಕನಕ ಬೆಳ್ದಿಂಗಳಿಳಿದಿತ್ತು/ಆ ಮುಖದ ತನಕ

ಹೌದಲ್ಲವಾ? ಪ್ರೇಮಿಗಳು ಇರಬೇಕಾದದ್ದೇ ಹೀಗೆ. ಇಲ್ಲ ಅನ್ನುವುದಾದರೆ, ಇಡೀ ದಿನದಲ್ಲಿ ಹತ್ತಿರವೇ ಇದ್ದರೂ ಸರಸವಾಡಲಿಲ್ಲ ಎನ್ನುವುದಾದರೆ ಅವರು ಯಾಕೆ ಪ್ರೀತಿಯ ಮಾತಾಡಬೇಕು? ಯಾಕಾದರೂ ಅವರು ಪ್ರೇಮಿಗಳಾಗಬೇಕು? ಹೀಗೆಲ್ಲ ಅಂದುಕೊಂಡಾಗಲೇ ದಶಕಗಳ ಹಿಂದೆ ಮನೆ ಮನೆಗಳಲ್ಲೂ ನಡೆದ ಪ್ರೇಮಕತೆಗಳು ಆ ಕಾಲದ ಜನರಿಂದ ರಸವತ್ತಾದ ಕಾಮೆಂಟರಿಯಂತೆ ಕೇಳಿಬರುತ್ತದೆ. ಎಲ್ಲ ಅಡೆತಡೆಗಳ ಮಧ್ಯೆಯೂ ಅವರು ಎಲ್ಲೆಲ್ಲಿ, ಹೇಗೆಲ್ಲ ಭೇಟಿಯಾಗಿದ್ದರು? ಏನೇನೆಲ್ಲ ಮಾತಾಡಿಕೊಂಡಿದ್ದರು ಎಂಬುದನ್ನೂ ಅದೇ ಕಾಮೆಂಟರಿ ಮಾತುಗಳಲ್ಲಿ ಕೇಳಿಸಿಕೊಂಡಾಗಲೇ ಕೆಎಸ್‌ನರ ಪದ್ಯದ ಕಡೆಯ ಸಾಲು ನಿದ್ರಿಸುವ ಮಗುವಿನ ದಿವ್ಯ ನಗೆಯಂತೆ; ಅವಳ (ನ) ಅನುರಾಗದ ಪಿಸುಮಾತಿನಂತೆ ಕೇಳಿಸುತ್ತದೆ. ಕವಿತೆಯಲ್ಲಿ ಅವನು' ಹೇಳುತ್ತಾನೆ: ಮುತ್ತಿಟ್ಟು ಕೇಳಿದೆನು/(ಗುಟ್ಟಾಗಿ) ಕನಕ! ಕಣ್ಣೆತ್ತಿ ನೋಡಿದಳು/ಚಂದಿರನ ತನಕ!

****
ಮಾತಿಗೆ ಮೀರಿದ್ದು' ಅಂತಾರಲ್ಲ- ಅದಷ್ಟೂ ಕಡೆಯ ಸಾಲುಗಳಲ್ಲಿದೆ. ಅವನು ಮುತ್ತಿಡುವುದು, ಗುಟ್ಟಾಗಿ ಕೇಳುವುದು ಸಹಜ ಮತ್ತು ಅನಿವಾರ್ಯ. ಅದಕ್ಕೆ ಅವಳು ಒಂದೇ ಮಾತಲ್ಲಿ ಉತ್ತರಿಸಿದ್ದರೆ ಅಂಥ ವಿಶೇಷ ಇರುತ್ತಿರಲಿಲ್ಲ. ಆದರೆ ಅವಳು ಮಾತೇ ಆಡುವುದಿಲ್ಲ. ಸುಮ್ಮನೇ ಕಣ್ಣೆತ್ತಿ ನೋಡುತ್ತಾಳೆ- ಆ ನೋಟ ಚಂದಿರನನ್ನೂ ತಲುಪಿಬಿಡುತ್ತವೆ. ಅವನನ್ನೇ ತಾಕಿ ಬಿಡುತ್ತದೆ! ಇದೆಲ್ಲ ನಿಜವಾ? ಇದಿಷ್ಟೂ ನಡೆದಿದ್ದಾ? ಪತ್ನಿ ವೆಂಕಮ್ಮನವರೊಂದಿಗೆ ಒಂದು ದಿನ ಆಡಿದ ರೊಮ್ಯಾಂಟಿಕ್ ಆಟವನ್ನೇ ಕೆಎಸ್‌ನ ಪದ್ಯವಾಗಿಸಿಬಿಟ್ಟರಾ? ಇದ್ದರೂ ಇರಬಹುದು! ಅವರ ಕಾವ್ಯಶಕ್ತಿಗೆ ನಮಸ್ಕಾರ. ಅವರಿಗೂ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+