Gold Rate Today: ಬೆಂಗಳೂರು ಸೇರಿ ದೇಶದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಏರಿಕೆ! ಬೆಳ್ಳಿ 10,000 ರೂ ಕುಸಿತ
Gold Rate Today update; ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಯಲ್ಲಿ ಸತತವಾಗಿ ಇಳಿಕೆ ಕಾಣುತ್ತಿದ್ದ ಬಂಗಾರದ ಬೆಲೆ ಇಂದು ಗುರುವಾರ (ಜುಲೈ 9) ಕೊಂಚ ಏರಿಕೆ ಕಂಡಿದೆ. ಆದರೆ ಕೆಲವು ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಬಿಳಿ ಲೋಹ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಸುಮಾರು ಐದಾರು ದಿನಗಳಿಂದ ಕುಸಿತಗೊಂಡಿದ್ದ ಚಿನ್ನದ ಮೌಲ್ಯ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿಯ ಇಂದಿನ ಅಪ್ಡೇಟ್ ಮಾಹಿತಿ ಇಲ್ಲಿದೆ.
ಜುಲೈ 4ರಿಂದ ಇಳಿಕೆ ಹಾದಿ ಹಿಡಿದ್ದ 22 ಕ್ಯಾರಟ್ ಚಿನ್ನದ ಒಂದು ಗ್ರಾಂ ದರ ಇಂದು 10 ರೂ.ನಂತೆ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 100 ರೂಪಾಯಿ ಏರಿಕೆಯಾಗಿದೆ. ಗುರುವಾರ ಅದರ ಒಟ್ಟು ಬೆಲೆ 1,31,300 ರೂಪಾಯಿ ಮುಟ್ಟಿದೆ.

24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 11ರೂಪಾಯಿಯಂತೆ 10ಗ್ರಾಂ ಬಂಗಾರಕ್ಕೆ 110 ರೂಪಾಯಿ ಹೆಚ್ಚಾಗಿದೆ. ಈ ಮೂಲಕ ಅದರ ಬೆಲೆ 1,43,240 ರೂಪಾಯಿ ತಲುಪಿದೆ.
18 ಕ್ಯಾರಟ್ ನ ಒಂದು ಗ್ರಾಂ ಬಂಗಾರಕ್ಕೆ 8 ರೂ.ನಂತೆ 10 ಗ್ರಾಂಗೆ 80 ರೂಪಾಯಿ ಏರಿಕೆ ಆಗಿದ್ದು, ಒಟ್ಟು ಬೆಲೆ 1,07,430 ರೂಪಾಯಿ ತಲುಪಿದೆ.
ಬೆಳ್ಳಿ ದರದಲ್ಲಿ ಭರ್ಜರಿ ಇಳಿಕೆ
ಬಿಳಿ ಲೋಹ ಬೆಳ್ಳಿ ಯಾವಾಗಲೂ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದ ಬೆಳ್ಳಿಯು ಕೆಲವು ದಿನಗಳಿಂದ ನಿರಂತರವಾಗಿ 2,50,000 ರೂಪಾಯಿ ಆಸುಪಾಸಿನಲ್ಲಿ ಸ್ಥಿರವಾಗಿತ್ತು. ಇಂದು ಗುರುವಾರ ಒಂದೇ ದಿನಕ್ಕೆ ಬರೋಬ್ಬರಿ 10,000 ರೂಪಾಯಿ ಕುಸಿತ ಕಂಡಿದ್ದು, ನೆನ್ನೆ 2,45,000 ರೂಪಾಯಿ ಇದ್ದ ಒಂದು ಕೆಜಿ ಚಿನ್ನ ಇಂದು 2,35,000 ರೂಪಾಯಿಗೆ ಇಳಿಕೆಯಾಗಿದೆ.
ಈ ವಾರಾಂತ್ಯದಲ್ಲಿ ಮತ್ತಷ್ಟು ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ ಆಗಲಿದೆ ಎನ್ನಲಾಗಿದೆ. ಮುಂದಿನ ಎಂಟತ್ತು ವಾರಗಳಲ್ಲಿ ವಿದೇಶಿ ರಿಸರ್ವ್ ಬ್ಯಾಂಕ್‌ಗಳ ಬಡ್ಡಿ ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಅದು ಆದಲ್ಲಿ ಚಿನ್ನ ಮಾರುಕಟ್ಟೆ ಮೌಲ್ಯದಲ್ಲಿ ಇನ್ನಷ್ಟು ಏರಿಳಿತವಾಗಲಿದೆ ಎಂದು ಅಂದಾಜಿಸಲಾಗಿದೆ.
22k ಒಂದು ಗ್ರಾಂ ದರ: ನಗರವಾರು ಮಾಹಿತಿ
ಚೆನ್ನೈ: 13,220 ರೂಪಾಯಿ
ಮುಂಬೈ: 13,130 ರೂಪಾಯಿ
ದೆಹಲಿ: 13,145 ರೂಪಾಯಿ
ಕೊಲ್ಕತ್ತಾ: 13,130 ರೂಪಾಯಿ
ಬೆಂಗಳೂರು: 13,130 ರೂಪಾಯಿ
ಹೈದರಾಬಾದ್: 13,130 ರೂಪಾಯಿ
ಕೇರಳ: 13,130 ರೂಪಾಯಿ
ಪುಣೆ: 13,130 ರೂಪಾಯಿ
24k ಒಂದು ಗ್ರಾಂ ಬೆಲೆ: ನಗರವಾರು ಮಾಹಿತಿ
ಚೆನ್ನೈ: 14,422 ರೂಪಾಯಿ
ಮುಂಬೈ:14,324 ರೂಪಾಯಿ
ದೆಹಲಿ: 14,339 ರೂಪಾಯಿ
ಕೊಲ್ಕತ್ತಾ: 14,324 ರೂಪಾಯಿ
ಬೆಂಗಳೂರು: 14,324 ರೂಪಾಯಿ
ಹೈದರಾಬಾದ್: 14,324 ರೂಪಾಯಿ
ಕೇರಳ: 14,324 ರೂಪಾಯಿ
ಪುಣೆ: 14,324 ರೂಪಾಯಿ













Click it and Unblock the Notifications