ಮಳೆಗಾಲಕ್ಕೆ ಮನೆ ಮದ್ದು, ಆರೋಗ್ಯ ಜೋಪಾನ, ಇರಲಿ ಎಚ್ಚರ
ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ನೆಗಡಿ, ಜ್ವರ, ಕೆಮ್ಮು, ಮತ್ತು ಶೀತ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು. ಇಂತಹ ಸಂದರ್ಭಗಳಲ್ಲಿ ಮನೆಯಲ್ಲಿ ನಾವು ಸುಲಭವಾಗಿ ಸಿಗುವ ಸಾಂಬಾರ ಪದಾರ್ಥಗಳು ಬಳಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳವುದರ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುಲು ನೈಸರ್ಗಿಕ ಔಷದೀ ಪದಾರ್ಥಗಳು ನಾವು ಹೇಗೆ ಬಳಸಬೇಕು ಎಂಬುದು ಆಯುರ್ವೇದದ ತಜ್ಞರು ವಿವರಿಸಿದ್ದಾರೆ.
ಭಾರತೀಯ ಸಾಂಬಾರ ಪದಾರ್ಥಗಳನ್ನು ಅನಾದಿ ಕಾಲದಿಂದಲೂ ಕೇವಲ ರುಚಿಗಾಗಿ ಅಡಿಗೆಯಲ್ಲಿ ಬಳಸುತ್ತಿಲ್ಲ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲೂ ಇವು ಅತ್ಯಂತ ಉಪಯುಕ್ತವಾಗಿದೆ
ಮಳೆಗಾಲದಲ್ಲಿ ವಾತಾವರಣದಲ್ಲಿ ಒಮ್ಮೆಲೆ ಉಂಟಾಗುವ ತಾಪಮಾನದ ವ್ಯತ್ಯಾಸದಿಂದ ಜೀರ್ಣ ಕ್ರಿಯೆ ಕುಂಠಿತವಾಗಿ ಹಲವು ರೋಗಗಳಿಗೆ ದಾರಿಮಾಡಿಕೊಡುತ್ತದೆ ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಸಾಂಬಾರ ಪದಾರ್ಥಗಳು ಹೆಚ್ಚು ಮಹತ್ವವನ್ನು ಹೊಂದಿದೆ.

ಅರಿಶಿಣ:
ಮಳೆಗಾಲದಲ್ಲಿ ಅರಿಶಿನದ ಧೂಪವನ್ನು ಆಹಾರದ ನಂತರ ಸೇವಿಸಿದಲ್ಲಿ ಶೀತ ನೆಗಡಿಯಂತಹ ರೋಗಗಳನ್ನು ತಡೆಯುತ್ತದೆ. ರಾತ್ರಿ ಹಾಲಿನಲ್ಲಿ ಹಾಕಿ ಕುಡಿಯುದರಿಂದ ಆರೋಗ್ಯ ವರ್ಧಿಸುತ್ತದೆ.

ಜೀರಿಗೆ:
ಮಳೆಗಾಲದಲ್ಲಿ ಕುಡಿಯುವ ನೀರಿಗೆ ಜೀರಿಗೆ ಹಾಕಿ ಕುದಿಸಿ ಕುಡಿಯುದರಿಂದ ಜೀರ್ಣ ಕ್ರಿಯೆಯನ್ನು ಸಮತೋಲನದಲ್ಲಿಡಲು ಸಹಕಾರಿ
ವಿಧಾನ: 2 ಚಮಚ ಜೀರಿಗೆಗೆ 2 ಲೀಟರ್ ನೀರು ಹಾಕಿ ಕುದಿಸಿ 1 ಲೀಟರ್ ಗೆ ಬತ್ತಿಸಬೇಕು ಇದನ್ನು ಬಾಯಾರಿಕೆ ಆದಾಗ ಸ್ವಲ್ಪ ಸ್ವಲ್ಪವೇ ಸೇವಿಸುವುದು.

ಕಾಳುಮೆಣಸು:
ಮಳೆಗಾಲದ ಶೀತತ್ವ ನಿವಾರಣೆಗೆ ಕಾಳುಮೆಣಸು ಅತ್ಯಂತ ಸಹಕಾರಿ. ಕಾಳುಮೆಣಸಿನ ಸಾರು ಅತಿಯಾಗಿ ಮಳೆಯಾಗುವ ಮಲೆನಾಡು ಭಾಗಗಳಲ್ಲಿ ಹೆಸರುವಾಸಿ ಕಾಳುಮೆಣಸು,ಜೀರಿಗೆ, ಅರಿಶಿನದೊಂದಿಗೆ ಸೇರಿಸಿ ಹಾಲಿಗೆ ಹಾಕಿ ಕುಡಿಯುವುದು ಉತ್ತಮ.

ಶುಂಠಿ:
ಶುಂಠಿಯು ಅಜೀರ್ಣ ನಿವಾರಕವೂ ಹಾಗು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ಅತಿಯಾಗಿ ಮೋಡವಾಗಿ ಬಿಡದೆ ಮಳೆ ಸುರಿಯುವ ಕಾಲದಲ್ಲಿ ಒಂದು ಸಣ್ಣ ಪ್ರಮಾಣದ ಹಸಿ ಶುಂಠಿಯನ್ನು ಸೇರಿಸಿ ಗಂಜಿ ಮಾಡಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.

ತುಳಸಿ:
ತುಳಸಿಯ ಔಷಧೀಯ ಗುಣಗಳು ಜನಜನಿತ. ಶೀತ, ನೆಗಡಿಯ ಸಂದರ್ಭದಲ್ಲಿ ತುಳಸಿಯ ಎಲೆಗಳನ್ನು ನೀರಿಗೆ ಹಾಕಿ ಆ ನೀರಿನ ಹಬೆ ತೆಗೆದುಕೊಳ್ಳುವುದರಿಂದ ನೆಗಡಿ ಕಡಿಮೆಯಾಗುತ್ತದೆ. ತುಳಸಿ ಉತ್ತಮ anti viral ದ್ರವ್ಯವಾಗಿದೆ.

ದೊಡ್ಡ ಪತ್ರೆ:
ಮಳೆಗಾದಲ್ಲಿ ದೊಡ್ಡ ಪತ್ರೆ ಗಿಡದ ಎಲೆಗಳಿಂದ ಮಾಡಿದ ತೊಂಬಳಿಯನ್ನು ಸೇವಿಸುವುದರಿಂದ ಕಫ ದೋಷ ನಿವಾರಣೆಯಾಗುತ್ತದೆ
ಪ್ರದೇಶಕ್ಕೆ ಹಾಗು ಕಾಲಕ್ಕೆ ಅನುಗುಣವಾಗಿ, ಶರೀರಕ್ಕೆ ಅನುಗುಣವಾಗಿ ಆಹಾರಗಳನ್ನು ಬದಲಾಯಿಸಿಕೊಳ್ಳುವುದು ಸ್ವಾಸ್ಥ್ಯ ಕಾಪಾಡಿಕೊಳ್ಳಲು ಅನಿವಾರ್ಯ
ಡಾ॥ ಸುಹಾಸ್ ಹೆಚ್.ಡಿ
ಮುಖ್ಯ ವೈದ್ಯಾಧಿಕಾರಿ
ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ, ಶೃಂಗೇರಿ














Click it and Unblock the Notifications