ಬ್ರಹ್ಮಗಂಟು ಸೀರಿಯಲ್‌ ನೋಡಿ ಇದೊಂದು ಬೇಡ ಇತ್ತು ಅಂತಿರೋ ವೀಕ್ಷಕರು! ಯಾವ್ದು ಆ ಸೀನ್?

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಚಿರಾಗ್‌ ಮತ್ತು ದಿಶಾ ನಡುವೆ ರೊಮ್ಯಾಂಟಿಕ್‌ ಸೀನ್‌ಗಳು ನಡೀತಿವೆ. ಇಷ್ಟು ದಿನ ಬೇರೆ ಥರ ಇದ್ದ ಸೀರಿಯಲ್‌ ಟರ್ನ್‌ ತಗೊಂಡಿದೆ. ಆದರೆ ಅದೊಂದು ಬೇಡವಿತ್ತು ಅಂತಿದ್ದಾರೆ ವೀಕ್ಷಕರು.

ಬ್ರಹ್ಮಗಂಟು ಅನ್ನೋ ಸೀರಿಯಲ್‌ ಜೀ ಕನ್ನಡದಲ್ಲಿ ರಾತ್ರಿ ೧೦ಕ್ಕೆ ಪ್ರಸಾರವಾಗ್ತಿದೆ. ಆದರೆ ಈಗೆಲ್ಲ ಓಟಿಟಿಯಲ್ಲೇ ಹೆಚ್ಚಾಗಿ ಸೀರಿಯಲ್‌ ನೋಡೋ ಕಾರಣ ಜೀ೫ನಲ್ಲಿ ತಮಗೆ ಟೈಂ ಆದಾಗ ನೋಡ್ಕೊಳ್ತಾರೆ. ಬ್ರಹ್ಮಗಂಟು ಸೀರಿಯಲ್‌ನಲ್ಲಿ ಕಥೆ ಕಳೆದ ಒಂದಿಷ್ಟು ದಿನಗಳಿಂದ ಟರ್ನ್‌ ತಗೊಂಡಿದೆ. ದಿಶಾಗೆ ಚಿರಾಗ್‌ ವರ್ತನೆ ಬಗ್ಗೆ ಡೌಟ್‌ ಬರುತ್ತಿದೆ. ಜೊತೆಗೆ ತಾನು ಎಲ್ಲಿ ಕೊನೇವರೆಗೂ ಇದೇ ಅವತಾರದಲ್ಲೇ ಇದ್ದುಬಿಡಬೇಕಾಗಿ ಬರಬಹುದೋ ಅಂತ ಸಿಕ್ಕಾಪಟ್ಟೆ ಟೆನ್ಶನ್‌ ಬೇರೆ ಶುರುವಾಗಿದೆ.

Brahmagantu Serial Twist

ಕತೆ ಏನು?

ಅಂದ ಹಾಗೆ ಬ್ರಹ್ಮಗಂಟು ಸೀರಿಯಲ್‌ನ ಕಥೆಯ ವಿಷಯಕ್ಕೆ ಬಂದರೆ ದೀಪಾ ಎಂಬ ಹೊರನೋಟಕ್ಕೆ ಅಂಥಾ ಸುಂದರಿಯಲ್ಲದ ಹೆಣ್ಮಗಳ ಜೊತೆಗೆ ಚಿರಾಗ್‌ ಎಂಬ ಕೋಟ್ಯಧಿಪತಿಯ ಮದುವೆ ಆಗಿದೆ. ಅವಳ ಹೆಸರು ದೀಪಾ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿರಾಗ್‌ ಮದುವೆಯಾಗಬೇಕಿದ್ದದ್ದು ಈ ದೀಪಾಳ ಅಕ್ಕನನ್ನು. ಆದರೆ ಅವಳು ಸಾಧನೆಯ ಹಪಹಪಿಗೆ ಬಿದ್ದು ಮದುವೆಗೂ ಮುನ್ನಾದಿನವೇ ಎಸ್ಕೇಪ್‌ ಆಗ್ತಾಳೆ. ಆಗ ಅನಿವಾರ್ಯವಾಗಿ ಕುರೂಪಿ ಅಂತ ಅನಿಸಿಕೊಂಡ ದೀಪಾ ಜೊತೆಗೆ ಚಿರಾಗ್‌ ಮದುವೆ ನಡೆಯುತ್ತದೆ. ಆದರೆ ಚಿರಾಗ್‌ಗೆ ದೀಪಾ ಕಂಡರೆ ಒಂಚೂರೂ ಇಷ್ಟ ಇರಲಿಲ್ಲ. ಚಿರಾಗ್‌ ಅತ್ತಿಗೆ ಸೌಂದರ್ಯ ಇಲ್ಲಿ ದೊಡ್ಡ ವಿಲನ್‌. ಅವಳು ಸೌಂದರ್ಯವೇ ಮುಖ್ಯ ಅಂದುಕೊಂಡವಳು, ಗುಣವೇ ಮುಖ್ಯ ಅನ್ನುವ ದೀಪಾ ಜೊತೆಗೆ ಅವಳದು ಮುಗಿಯದ ಯುದ್ಧ. ಕೊನೆಗೆ ಎಲ್ಲರ ಊಹೆಯಂತೆ ಚಿರಾಗ್‌ಗೆ ದೀಪಾ ಮೇಲೆ ಪ್ರೀತಿ ಹುಟ್ಟಲು ಶುರುವಾಗುತ್ತೆ. ಇವರಿಬ್ಬರ ಪ್ರೇಮ್‌ ಕಹಾನಿ ಮತ್ತೊಂದು ಹಂತಕ್ಕೆ ಹೋಗಬೇಕು ಅನ್ನುವಾಗ ಕಹಾನಿ ಮೆ ಟ್ವಿಸ್ಟ್.‌ ದೀಪಾ ಸತ್ತೇ ಹೋಗುತ್ತಾಳೆ ಅಂತ ಬಿಂಬಿಸುತ್ತಾರೆ. ಆದರೆ ಅವಳು ದಿಶಾ ಎಂಬ ಸುಂದರಿಯ ವೇಷದಲ್ಲಿ ಚಿರಾಗ್‌ನನ್ನು ಮತ್ತೆ ಮದುವೆ ಆಗ್ತಾಳೆ. ಇದರ ಹಿಂದಿನ ಉದ್ದೇಶ ಅತ್ತಿಗೆ ಸೌಂದರ್ಯಾಗೆ ಬುದ್ಧಿ ಕಲಿಸೋದು.

Karna Serial: ಕರ್ಣ ಸೀರಿಯಲ್: ನಿಧಿ ಕುಟುಂಬದ ರಹಸ್ಯ ಬಯಲು ? ಕರ್ಣ ಕೈಗೆ ಸಿಕ್ಕ ಫೋಟೋ ಬದಲಿಸಲಿದೆ ಕಥೆಯ ದಿಕ್ಕು!
Karna Serial: ಕರ್ಣ ಸೀರಿಯಲ್: ನಿಧಿ ಕುಟುಂಬದ ರಹಸ್ಯ ಬಯಲು ? ಕರ್ಣ ಕೈಗೆ ಸಿಕ್ಕ ಫೋಟೋ ಬದಲಿಸಲಿದೆ ಕಥೆಯ ದಿಕ್ಕು!

ಕಹಾನಿ ಮೆ ಟ್ವಿಸ್ಟ್‌

ದಿಶಾಳನ್ನು ಮದುವೆ ಆದಮೇಲೂ ಚಿರಾಗ್‌ಗೆ ತನ್ನ ಹೆಂಡತಿ ದೀಪಾ ಸತ್ತಿಲ್ಲ, ಅವಳು ಇಲ್ಲೇ ಎಲ್ಲಾದರೂ ಇದ್ದಾಳೆ ಅನ್ನುವ ಬಲವಾದ ನಂಬಿಕೆ. ಈ ದಿಶಾ ಯಾವುದೋ ಉದ್ದೇಶ ಇಟ್ಟುಕೊಂಡು ಬಂದು ತನ್ನ ಬದುಕಿನಲ್ಲಿ ಆಟ ಆಡ್ತಿದ್ದಾಳೆ ಎಂಬ ಸಂದೇಹ. ಅದಕ್ಕಾಗಿ ಸತತವಾಗಿ ದಿಶಾಳನ್ನು ಮನೆಯಿಂದ ಆಚೆ ಹಾಕಲು ಪ್ರಯತ್ನ ಮಾಡುತ್ತಲೇ ಇರುತ್ತಾನೆ. ಅವಳು ತನ್ನನ್ನು ಮದುವೆಯಾದ ಉದ್ದೇಶ ಅರಿತುಕೊಳ್ಳಬೇಕು, ಅದನ್ನು ಎಲ್ಲರ ಮುಂದೆ ಹೇಳಬೇಕು ಅಂದುಕೊಳ್ಳುತ್ತಾನೆ. ಆದರೆ ಅಷ್ಟರಲ್ಲಿ ನಿಜಮುಖ ಬಯಲಾಗುತ್ತೆ.

ದಿಯಾಳ ಅಸಲಿ ಮುಖ ಬಯಲು

ಚಿರಾಗ್‌ ಹೋಮವನ್ನು ಏರ್ಪಡಿಸಿ ಹೇಗಾದರೂ ಈ ದಿಶಾ ಬಂಡವಾಳ ಬಯಲು ಮಾಡ್ತೀನಿ ಅಂತ ಹೊರಟಿರ್ತಾನೆ. ದೀಪಾ ಮೊದಲು ದಪ್ಪದ ಸೋಡಾ ಗ್ಲಾಸ್‌ ಹಾಕುತ್ತಿದ್ದದ್ದು, ಈಗ ದಿಶಾ ಆದ್ಮೇಲೆ ಅದನ್ನು ಲೆನ್ಸ್‌ಗೆ ಬದಲಿಸಿದ್ದಾಳೆ. ಹೋಮದ ಹೊಗೆಯಲ್ಲಿ ಅವಳ ಲೆನ್ಸ್‌ ಗೆ ಸಮಸ್ಯೆಯಾಗಿ ಓಡಿಕೊಂಡು ರೂಮಿಗೆ ಬರುತ್ತಾಳೆ. ಅವಳನ್ನು ಚಿರಾಗ್‌ ಹಿಂಬಾಲಿಸುತ್ತಾನೆ. ಅಷ್ಟೊತ್ತಿಗೆ ಅವಳ ಲೆನ್ಸ್‌ ಬಿದ್ದು ಕಣ್ಣು ಸರಿ ಕಾಣದೆ ತನ್ನ ಹಳೆಯ ಕನ್ನಡಕ ಹಾಕಿಕೊಂಡು ಲೆನ್ಸ್‌ ಹುಡುಕುತ್ತಾಳೆ. ಮುಖಕ್ಕೆ ನೀರು ಹಾಕಿದಾಗ ಅವಳ ಮೇಕಪ್‌ ಕರಗಿ ದೀಪಾ ರೂಪ ಚಿರಾಗ್‌ ಮುಂದೆ ಬಯಲಾಗುತ್ತದೆ.

ಕರ್ಣ ಸೀರಿಯಲ್: ಅನಿರೀಕ್ಷಿತ ತಿರುವಿಗೆ ಪ್ರೇಕ್ಷಕರು ಫಿದಾ, ಧಾರಾವಾಹಿ ಕ್ಲೈಮ್ಯಾಕ್ಸ್‌ ಮುನ್ಸೂಚನೆಯೇ
ಕರ್ಣ ಸೀರಿಯಲ್: ಅನಿರೀಕ್ಷಿತ ತಿರುವಿಗೆ ಪ್ರೇಕ್ಷಕರು ಫಿದಾ, ಧಾರಾವಾಹಿ ಕ್ಲೈಮ್ಯಾಕ್ಸ್‌ ಮುನ್ಸೂಚನೆಯೇ

ಶುರುವಾಯ್ತು ಚಿರಾಗ್‌ ರೊಮ್ಯಾನ್ಸ್‌

ಸತ್ಯಕಂಡು ಬೆಚ್ಚಿಬೀಳುವ ಚಿರಾಗ್‌ಗೆ ಸಿಕ್ಕಾಪಟ್ಟೆ ಸಿಟ್ಟು ಬಂದರೂ ಒಳಗೊಳಗೆ ತನ್ನ ಹೆಂಡತಿ ಬದುಕಿದ್ದಾಳೆ, ಜೊತೆಗೆ ಇದ್ದಾಳೆ ಎಂಬ ಖುಷಿ. ಹೇಗಾದರೂ ಅವಳಿಂದಲೇ ತಾನು ದೀಪಾ ಅನ್ನೋದನ್ನು ಹೇಳಿಸಬೇಕು ಅಂತ ಹಠ. ಇಲ್ಲೀವರೆಗೆ ಅವಳ ನೆರಳು ಕಂಡರೂ ಸಿಟ್ಟಾಗುತ್ತಿದ್ದ ಚಿರಾಗ್‌ ಆ ಬಳಿಕ ಸಿಕ್ಕಾಪಟ್ಟೆ ರೊಮ್ಯಾಂಟಿಕ್‌ ಆಗಿ ಬದಲಾಗ್ತಾನೆ.

ದಿಶಾಗೆ ಕಿರಿಕಿರಿ, ಟೆನ್ಶನ್‌

ಯಾವಾಗ ಚಿರಾಗ್‌ ದಿಶಾ ಹಿಂದೆ ಬೀಳತೊಡಗಿದನೋ ದೀಪಾಗೆ ಟೆನ್ಶನ್‌, ಕಿರಿಕಿರಿ, ಬೇಸರ ಎಲ್ಲ ಶುರುವಾಗಿದೆ. ಚಿರಾಗ್‌ ದಿಶಾಳನ್ನ ಇಷ್ಟಪಟ್ಟರೆ ತಾನು ಜೀವನಪರ್ಯಂತೆ ದಿಶಾ ವೇಷದಲ್ಲೇ ಇರಬೇಕಾಗುತ್ತದೆ, ಅದು ದೊಡ್ಡ ಶಿಕ್ಷೆ. ಜೊತೆಗೆ ಆತನ ಮನಸ್ಸಲ್ಲಿ ತನ್ನ ನಿಜವಾದ ಚಿತ್ರ ಕರಗಿಯೇ ಹೋಯ್ತಾ ಎಂಬ ಹತಾಶೆಯೂ ಇದೆ.

ಅದೊಂದು ಬೇಡವಿತ್ತು..

ಇದೇ ಫ್ರರ್ಸ್ಟೇಶನ್‌ ಅಲ್ಲಿ ತನ್ನ ಜೊತೆ ಕ್ಲೋಸ್‌ ಆಗಿ ನಡ್ಕೊಂಡ ಚಿರಾಗ್‌ಗೆ ದಿಶಾ ಕಪಾಳ ಮೋಕ್ಷ ಮಾಡಿದ್ದಾಳೆ. ಆದರೆ ವೀಕ್ಷಕರಿಗೆ ಇದ್ಯಾಕೋ ಸರಿಕಂಡಿಲ್ಲ. ಅಷ್ಟು ಪ್ರೀತಿಸುವ ಚಿರಾಗ್‌ಗೆ ಅವಳು ಕೈ ಎತ್ತಬಾರದಿತ್ತು ಅಂತ ಬಹಳಷ್ಟು ಮಂದಿ ಕಾಮೆಂಟ್‌ ಮಾಡ್ತಿದ್ದಾರೆ. ಜೊತೆಗೆ ಇದರ ಮೇಕಿಂಗ್‌ ವೀಡಿಯೋ ಕೂಡ ಸೋಷಲ್‌ ಮೀಡಿಯಾದಲ್ಲಿ ಹೈಪ್‌ ಪಡ್ಕೊಂಡಿದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+