Amruthadhare Serial: ಅಮೃತಧಾರೆಯಲ್ಲಿ ಡಬಲ್ ಟ್ವಿಸ್ಟ್: ಜೈದೇವ್‌ಗೆ ಚಳ್ಳೆ ಹಣ್ಣು ತಿನ್ನಿಸ್ತಾಳಾ ಶಕುಂತಲಾದೇವಿ!
Amruthadhare Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್‌ನಲ್ಲಿ ವಿಲನ್ ಮತ್ತೊಬ್ಬ ವಿಲನ್‌ಗೆ ತಂತ್ರ ಹೆಣೆಯುತ್ತಿರುವ ದೃಶ್ಯಗಳು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಮೃತಧಾರೆ ಸೀರಿಯಲ್‌ನ ಮುಂದಿನ ಎಪಿಸೋಡ್‌ಗಳಲ್ಲಿ ಯಾರೂ ನಿರೀಕ್ಷಿಯೇ ಮಾಡದ ತಿರುವು ಪಡೆದುಕೊಳ್ಳಲಿದೆಯೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಅಮೃತಧಾರೆ ಸೀರಿಯಲ್‌ನ ವಿಲನ್ ಶಕುಂತಲಾ ದೇವಿ ಇದೀಗ ಕೇಡಿ ಜೈದೇವ್‌ಗೆ ಸಪೋರ್ಟ್ ಮಾಡುತ್ತಿರುವಂತೆ ತೋರಿಸಲಾಗುತ್ತಿದೆಯಾದರೂ, ಶಕುಂತಲಾ ದೇವಿಯೇ ಎಲ್ಲ ಆಸ್ತಿಯನ್ನು ಲಪಟಾಯಿಸಲಿದ್ದಾಳೆಯೇ ಎನ್ನುವ ಅನುಮಾನ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿನ ಎಪಿಸೋಡ್‌ಗಳಲ್ಲಿ ಶಕುಂತಲಾ ದೇವಿ ಮಾಡುತ್ತಿರುವ ಖತರ್ನಾಕ್ ಪ್ಲ್ಯಾನ್‌ಗಳು. ಜೈದೇವ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದ ಶಕುಂತಲಾ, ಜೈದೇವ್‌ನನ್ನು ಪೊಲೀಸರಿಂದ ಬಿಡಿಸಿಕೊಳ್ಳುವುದಕ್ಕೂ ಪರೋಕ್ಷವಾಗಿ ಸಹಾಯ ಮಾಡಿದ್ದಳು.

Amruthadhare Serial: ಡಾಕ್ಯೂಮೆಂಟ್ಸ್‌ಗೆ ಸೈನ್ ಮಾಡಿಸಿಕೊಂಡ ಶಕುಂತಲಾ
ಕೆಲವೊಂದು ಪ್ರಮುಖ ಡಾಕ್ಯೂಮೆಂಟ್ಸ್‌ಗೆ ಜೈದೇವ್‌ನಿಂದ ಶಕುಂತಲಾ ಸೈನ್ ಮಾಡಿಸಿಕೊಂಡಿದ್ದಾಳೆ. ಆದರೆ ಮೊದಲು ಡಾಕ್ಯೂಮೆಂಟ್ಸ್‌ಗೆ ಸಹಿ ಹಾಕುವುದಕ್ಕೆ ಜೈದೇವ್ ವಿರೋಧ ವ್ಯಕ್ತಪಡಿಸಿದ್ದಾನೆ. ನೀನು ಹೇಳಿದ್ಯಾ ಅಂತ ಈಗ ನಾನು ಈ ಡಾಕ್ಯೂಮೆಂಟ್ಸ್‌ಗೆ ಸೈನ್ ಮಾಡಿದರೆ ನಾನು ಸೋತೆ ಅಂತ ಲೆಕ್ಕ, ಬರುವ ಅಲ್ಪ - ಸ್ವಲ್ಪ ದುಡ್ಡನ್ನೂ ನಾನು ಕಳೆದುಕೊಳ್ಳಬೇಕಾಗುತ್ತದೆ ಎಂದು ಜೈದೇವ್ ಹೇಳಿದ್ದಾನೆ. ಇದಕ್ಕೆ ಶಕುಂತಲಾ ಇಡೀ ಸಾಮ್ರಾಜ್ಯವನ್ನೇ ನಿನಗೆ ಕೊಡಿಸಬೇಕು ಅಂತ ಅಂದುಕೊಂಡರೆ, ಜುಜುಬಿ ದುಡ್ಡಿಗೆ ಆಸೆಪಟ್ಟುಪಡ್ತಿದ್ದೀಯಲ್ಲ ಅಂತ ಶಕುಂತಲಾ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಮರು ಮಾತನಾಡದೆ ಜೈದೇವ್ ಫೈಲ್ಸ್‌ಗೆ ಸಹಿ ಹಾಕಿ ಕೊಟ್ಟಿದ್ದಾನೆ.
ಗೌತಮ್‌ಗೆ ಡಾಕ್ಟರ್ ಕಾಲ್ - ಭೂಮಿಕಾ ಶಾಕ್
ಇನ್ನು ಆಸ್ಪತ್ರೆಯಿಂದ ಡಾಕ್ಟರ್ ಗೌತಮ್‌ಗೆ ಕಾಲ್ ಮಾಡಿದ್ದು, ಆ ಕರೆಯನ್ನು ಭೂಮಿಕಾ ರಿಸೀವ್ ಮಾಡಿದ್ದಾಳೆ. ಯಾಕೆ ಡಾಕ್ಟರ್ ಕಾಲ್ ಮಾಡಿದ್ದಾರೆ ಎನ್ನುವ ವಿಷಯವನ್ನು ಡಾಕ್ಟರ್ ರಿವೀಲ್ ಮಾಡಿಲ್ಲ. ಆಸ್ಪತ್ರೆಗೆ ಬನ್ನಿ ಆಸ್ಪತ್ರೆಯಲ್ಲೇ ಮಾತನಾಡೋಣ ಎಲ್ಲವನ್ನು ವಿವರಿಸುತ್ತೇನೆ ಅಂತ ಡಾಕ್ಟರ್ ಹೇಳಿದ್ದಾರೆ. ಇದು ಸಹ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ಒಟ್ಟಾರೆ ಅಮೃತಧಾರೆಯಲ್ಲಿ ಏಕಕಾಲಕ್ಕೆ ಎರಡು ಬಿಗ್‌ಟ್ವಿಸ್ಟ್ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಶಕುಂತಲಾಳನ್ನು ಜೈದೇವ್ ಈ ಹಿಂದೆ ಕೆಟ್ಟದಾಗಿ ನಡೆಸಿಕೊಂಡಿದ್ದ ಹೀಗಾಗಿ ಎಲ್ಲ ಆಸ್ತಿಯನ್ನು ಶಕುಂತಲಾ ತನ್ನ ಹೆಸರಿಗೆ ಮಾಡಿಸಿಕೊಂಡು ಎಲ್ಲರಿಗೂ ಪಾಠ ಕಲಿಸಲಿದ್ದಾಳೆಯೇ ಎನ್ನುವುದು ವೀಕ್ಷಕರ ಕುತೂಹಲವಾಗಿದೆ.
ಸಮಸ್ಯೆ ಸೃಷ್ಟಿ ಮಾಡಿದ್ದೇ ನಾನು ಎಂದ ಶಕುಂತಲಾ
ಫೈಲ್‌ವೊಂದನ್ನು ತಂದು ಶಕುಂತಲದೇವಿ ಕೈಗೆ ಇರಿಸಿರುವ ಪಾರ್ಥ ಹೇಗಾದರೂ ಮಾಡಿ ಈ ಫೈಲ್‌ಗೆ ಹೇಗಾದರೂ ಮಾಡಿ ಜೈದೇವ್ ಬಳಿ ಸೈನ್ ಮಾಡಿಸಿಕೊಂಡು ಬಾ, ಇಲ್ಲದಿದ್ದರೆ ಕಂಪನಿಗೆ ಕೋಟ್ಯಾಂತರ ರೂಪಾಯಿ ಲಾಸ್ ಆಗುತ್ತದೆ ಅಂತ ಹೇಳಿದ್ದಾನೆ. ಇದಕ್ಕೆ ಶಕುಂತಲಾ ಈ ಸಮಸ್ಯೆಯನ್ನು ಸೃಷ್ಟಿ ಮಾಡಿದ್ದೇನ ನಾನು ಅಂತ ಮನಸ್ಸಿನಲ್ಲೇ ಹೇಳಿಕೊಂಡಿದ್ದಾಳೆ. ಬಿಗ್‌ಬ್ರೋ ಬಳಿ ನಾನು ಈ ಸಮಸ್ಯೆಯ ಬಗ್ಗೆ ಹೇಳಿದ್ದೀನಿ, ತುಂಬಾ ಕಾನ್ಫಿಡೆಂಟ್ ಆಗಿ ನೀನು ಸೈನ್ ಮಾಡಿಸಿಕೊಂಡು ಬರುತ್ತೀಯ ಅಂತಲೂ ಹೇಳಿದ್ದೀನಿ. ಒಂದು ಸಲ ಸೈನ್ ಮಾಡಿಸಿಕೊಂಡು ಬಂದರೆ ಕಂಪನಿಗೆ ಬಿಗ್ ರಿಲೀಫ್ ಸಿಗುತ್ತೆ ಅಂತಲೂ ಪಾರ್ಥ ಹೇಳಿದ್ದಾನೆ.












Click it and Unblock the Notifications