ರಿಮೋಟ್‌ ವರ್ಕ್‌ನಿಂದ ಸಮಯ, ಹಣ ಎಲ್ಲವೂ ಸಿಕ್ಕಿದೆ: 8 ವರ್ಷಗಳಲ್ಲಿ ಲೈಫ್‌ಸ್ಟೈಲ್‌ ಬದಲಾದ ಬಗ್ಗೆ ಸಾಫ್ಟ್‌ವೇರ್‌ ಉದ್ಯಮಿ ಮಾತು

ಕೊರೋನಾ ಅವಧಿಯಲ್ಲಿ ಬಹುತೇಕ ಎಲ್ಲಾ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ ನೀಡಿತ್ತು. ಇದೀಗ ಮತ್ತೆ ಎಲ್ಲಾ ಕಂಪನಿಗಳು ವರ್ಕ್‌ ಫ್ರಂ ಆಫೀಸ್‌ ಪದ್ದತಿಗೆ ಮರಳುತ್ತಿದೆ. ಇನ್ನು ಕೆಲವು ಕಂಪನಿಗಳು ಹೈಬ್ರೀಡ್‌ ಮೋಡ್‌ ಅಂದರೆ ವಾರದಲ್ಲಿ ಒಂದಷ್ಟು ದಿನ ಮನೆಯಿಂದ ಮತ್ತೊಂದಷ್ಟು ದಿನ ಆಫೀಸಿನಿಂದ ಕೆಲಸ ಮಾಡುವಂತೆ ಸೂಚಿಸುತ್ತಿದೆ. ಇದರ ನಡುವೆಯೇ ಉದ್ಯಮಿಯೊಬ್ಬರು ಸುಮಾರು ಒಂದು ದಶಕದ ಹಿಂದೆ ತಾವು ಅಳವಡಿಸಿಕೊಂಡ 'ರಿಮೋಟ್ ವರ್ಕ್' ಅಂದರೆ ಮನೆಯಿಂದಲೇ ಕೆಲಸ ಮಾಡುವುದರಿಂದ ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನವ ಯಾವ ರೀತಿಯಲ್ಲಿ ಬದಲಾಗಿದೆ ಎನ್ನುವುದನ್ನು ಶೇರ್‌ ಮಾಡಿದ್ದಾರೆ.

2018ರಿಂದ ರಿಮೋಟ್‌ ವರ್ಕ್‌:

'ನೆಕ್ಸ್ಟ್‌ಡೋರ್‌ಕಂಪನಿ' (NextDoorCompany) ಸಂಸ್ಥಾಪಕ ಸಂಕಲ್ಪ್ ಸಿನ್ಹಾ ಅವರು 'ಎಕ್ಸ್' ಖಾತೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 2018 ರಲ್ಲಿ ಸಂಪೂರ್ಣ 'ರಿಮೋಟ್ ವರ್ಕಿಂಗ್' ಮಾದರಿಯನ್ನು ಅಳವಡಿಸಿಕೊಂಡ ಬಳಿಕ ಅವರಿಗೆ ಯಾವತ್ತೂ ಮತ್ತೆ ಆಫೀಸಿಗೆ ಹೋಗಿ ಕೆಲಸ ಮಾಡಬೇಕು ಎಂದು ಅನ್ನಿಸಿಯೇ ಇಲ್ಲವಂತೆ.

Remote Work Changed My Life

ಬೆಂಗಳೂರಿನ ವಸತಿ ಸಮುದಾಯಗಳನ್ನು (Residential Communities) ಉಲ್ಲೇಖಿಸಿರುವ ಸಿನ್ಹಾ, "ಬೆಂಗಳೂರಿನಲ್ಲಿ ನೀವು ಪಡೆಯಬಹುದಾದ ಅತ್ಯುತ್ತಮ 'ಕಚೇರಿ' ಎಂದರೆ ಉತ್ತಮವಾದ ಉದ್ಯಾನವನವಿರುವ ಗೇಟೆಡ್ ಕಮ್ಯುನಿಟಿ" ಎಂದು ಬರೆದಿದ್ದಾರೆ. "ನಾನು 8 ವರ್ಷಗಳ ಹಿಂದೆ ಸಂಪೂರ್ಣವಾಗಿ ರಿಮೋಟ್ ವರ್ಕ್ ಆರಂಭಿಸಿದೆ, ಅಂದಿನಿಂದ ಮತ್ತೆಂದೂ ಹಿಂತಿರುಗಿ ನೋಡಿಲ್ಲ. ರಿಮೋಟ್ ವರ್ಕ್ ನಿಮಗೆ ಊಹಿಸಲಾಗದಷ್ಟು ಅವಕಾಶಗಳನ್ನು ತೆರೆದಿಡುತ್ತದೆ ಎನ್ನುವ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

996 ವರ್ಕ್‌ ಕಲ್ಚರ್‌ನಿಂದ ಬೇಸರ: ಕುರಿ ಮೇಯಿಸುವತ್ತ ವಾಲುತ್ತಿರುವ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳು
996 ವರ್ಕ್‌ ಕಲ್ಚರ್‌ನಿಂದ ಬೇಸರ: ಕುರಿ ಮೇಯಿಸುವತ್ತ ವಾಲುತ್ತಿರುವ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳು

ರಿಮೋಟ್ ವರ್ಕ್‌ ಕಲ್ಚರ್‌ನ ಪ್ರಯೋಜನಗಳು:

ಒಂದೆರಡು ದಿನಗಳ ಮಟ್ಟಿಗೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುವ ಬದಲು, ನಮಗಿಷ್ಟವಿರುವ ಸ್ಥಳಗಳಲ್ಲಿ ದೀರ್ಘಕಾಲ ನೆಲೆಸಿ ಕೆಲಸ ಮಾಡುವುದು ರಿಮೋಟ್ ವರ್ಕ್‌ನ ಅತಿದೊಡ್ಡ ಪ್ರಯೋಜನಗಳಲ್ಲಿ ಒಂದು ಎಂಬುದು ಸಿನ್ಹಾ ಅವರ ಅಭಿಪ್ರಾಯ. ನೀವು ಹಿಂದೆಂದೂ ಹೋಗಿರದ ಸ್ಥಳಗಳು, ನಗರಗಳು ಮತ್ತು ದೇಶಗಳಿಗೆ ತೆರಳಿ ಅಲ್ಲಿಂದಲೇ ಕೆಲಸ ಮಾಡುವ ಅವಕಾಶವನ್ನು ರಿಮೋಟ್‌ ವರ್ಕ್‌ ನೀಡುತ್ತದೆ ಎಂದಿದ್ದಾರೆ. 2018 ರಿಂದ, ನಾನು ಪ್ರಪಂಚದಾದ್ಯಂತ ಸುಮಾರು 40 ನಗರಗಳಿಗೆ ಪ್ರಯಾಣಿಸಿ, ಪ್ರತಿ ನಗರದಲ್ಲೂ ಸರಾಸರಿ 3 ವಾರಗಳ ಕಾಲ ಉಳಿದು ಕೆಲಸ ಮಾಡಿದ್ದೇನೆ," ಎಂದು ಅವರು ವಿವರಿಸಿದ್ದಾರೆ. ಪ್ರತಿ ಸ್ಥಳದಲ್ಲೂ ಹಲವು ವಾರಗಳ ಕಾಲ ಕಳೆಯುವುದರಿಂದ ಸ್ಥಳೀಯ ಜೀವನ, ಸಂಸ್ಕೃತಿ ಮತ್ತು ಜನರನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಹಾಗೂ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಶಾಶ್ವತ ಕಚೇರಿ ಹೊಂದುವ ಗುರಿಯಿಲ್ಲ:

ತಾವು ಪ್ರಸ್ತುತ ತಮ್ಮದೇ ಆದ ಸಾಫ್ಟ್‌ವೇರ್ ಕಂಪನಿಯನ್ನು ಕಟ್ಟುತ್ತಿದ್ದು, ಮುಂದೆಯೂ ಶಾಶ್ವತ ಕಚೇರಿ ಇಲ್ಲದೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವ ಉದ್ದೇಶ ಸಿನ್ಹಾ ಅವರದ್ದು. 2026 ರಲ್ಲಿ, ನಾನು ನನ್ನದೇ ಆದ ಸಾಫ್ಟ್‌ವೇರ್ ಕಂಪನಿಯನ್ನು ಏಕಾಂಗಿಯಾಗಿ, ಮತ್ತು ಸಂಪೂರ್ಣ ರಿಮೋಟ್ ಆಗಿ ಕಟ್ಟುತ್ತಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ. ಶಾಶ್ವತ ಕಚೇರಿ ಹೊಂದುವುದರಿಂದ ಯಾವುದೇ ಯೋಜನೆಗಳಿಲ್ಲ, ಕೆಲಸ ಮಾಡಲು ಆಫೀಸೇ ಬೇಕು ಎನ್ನುವುದು ಅನಿವಾರ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೈಕ್ರೋಸಾಫ್ಟ್‌ನಲ್ಲಿ 5 ವರ್ಷ ಕೆಲಸ ಮಾಡಿದರೂ ಬೇಸರವೇ ಇಲ್ಲ! ಬೆಂಗಳೂರಿನ ಮಹಿಳೆಯ ಪೋಸ್ಟ್ ವೈರಲ್
ಮೈಕ್ರೋಸಾಫ್ಟ್‌ನಲ್ಲಿ 5 ವರ್ಷ ಕೆಲಸ ಮಾಡಿದರೂ ಬೇಸರವೇ ಇಲ್ಲ! ಬೆಂಗಳೂರಿನ ಮಹಿಳೆಯ ಪೋಸ್ಟ್ ವೈರಲ್

ಮನೆಯಿಂದ ಕೆಲಸ ಮಾಡುವಾಗ ತಮಗೆ ದೈನಂದಿನ ಸಣ್ಣಪುಟ್ಟ ಸಂತೋಷಗಳನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದಿರುವ ಅವರು, ತಮ್ಮ ಹಿತ್ತಲಿನ ಹುಲ್ಲುಹಾಸಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ 21 ವರ್ಷದ ಸಂಕಲ್ಪ್‌ಗೆ, ರಿಮೋಟ್ ವರ್ಕ್ ಊಹಿಸಲೂ ಆಗದಷ್ಟು ಸಮಯ, ಸ್ವಾತಂತ್ರ್ಯ ಮತ್ತು ಹಣವನ್ನು ನೀಡಿದೆ ಎನ್ನುವುದನ್ನು ಅವರು ಸ್ಮರಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ:

ಸಿನ್ಹಾ ಅವರ ಈ ಪೋಸ್ಟ್‌ಗೆ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ರಿಮೋಟ್ ವರ್ಕ್‌ನಿಂದಾಗುವ ಲಾಭಗಳನ್ನು ಶ್ಲಾಘಿಸಿದರೆ, ಇನ್ನು ಕೆಲವರು ಅದರ ಪ್ರಾಯೋಗಿಕ ಮಿತಿಗಳನ್ನು ಎತ್ತಿತೋರಿಸಿದ್ದಾರೆ. ವ್ಯಕ್ತವಾದ ಪ್ರಮುಖ ಪ್ರತಿಕ್ರಿಯೆಗಳು ಇಲ್ಲಿವೆ:

ಸಮಯದ ಕೊರತೆ: "ರಿಮೋಟ್‌ ವರ್ಕ್‌ ಎನ್ನುವುದು ಕೇಳಲು ಚೆನ್ನಾಗಿದೆ, ಆದರೆ ಕೆಲಸ ಮಾಡುತ್ತಲೇ ಸ್ಥಳಗಳನ್ನು ಸುತ್ತಾಡುವುದು ಕಷ್ಟ. ವಾರಾಂತ್ಯದಲ್ಲಿ ಅಥವಾ ಕೆಲಸದ ದಿನಗಳಲ್ಲಿ ಕೆಲವೇ ಗಂಟೆಗಳು ಮಾತ್ರ ಸುತ್ತಾಡುವುದಕ್ಕೆ ಅವಕಾಶ ಸಿಗಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಜೀವನದ ಗುಣಮಟ್ಟ: "ಇದರಿಂದ ಜೀವನದ ಗುಣಮಟ್ಟ ಗಣನೀಯವಾಗಿ ಸುಧಾರಿಸುತ್ತದೆ. ಉತ್ತಮ ಸಮಯ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದು, ಇನ್ನೊಬ್ಬರು ಈ ಪೋಸ್ಟ್ ಅನ್ನು "ಸ್ಫೂರ್ತಿದಾಯಕ" ಎಂದಿದ್ದಾರೆ.

ಪ್ರಾಯೋಗಿಕ ಸವಾಲುಗಳು: ಅಂತರರಾಷ್ಟ್ರೀಯ ಸ್ಥಳಗಳಿಂದ ಕೆಲಸ ಮಾಡುವ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ತೆರಿಗೆ ಕಾರಣಗಳಿಂದಾಗಿ ಕಂಪನಿಗಳು ವಿದೇಶಗಳಿಂದ ಕೆಲಸ ಮಾಡಲು ತಕರಾರು ಮಾಡುವುದಿಲ್ಲವೇ? ಎಂದು ಒಬ್ಬರು ಪ್ರಶ್ನಿಸಿದರೆ, ಮೊಬೈಲ್ ಹಾಟ್‌ಸ್ಪಾಟ್ ಉತ್ತಮ ಕೆಲಸಕ್ಕೆ ಸಾಕಾಗುತ್ತದೆಯೇ? ಎಂದು ಮತ್ತೊಬ್ಬರು ಕೇಳಿದ್ದಾರೆ.

ರಿಮೋಟ್ ಆಗಿ ಕೆಲಸ ಮಾಡುವವರು ನಿಜಕ್ಕೂ ಅದೃಷ್ಟವಂತರು ಎಂಬುದು ಮತ್ತೊಬ್ಬ ನೆಟ್ಟಿಗರ ಅಭಿಪ್ರಾಯ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+