Inspiration: ಕೇರಳಿಗರ ಕಷ್ಟಕ್ಕೆ ಅಭಯಹಸ್ತ: ಕನ್ನಡತಿ, ವಯನಾಡಿನ ಜಿಲ್ಲಾಧಿಕಾರಿ ಮೇಘಶ್ರೀ ಡಿಆರ್ ಸ್ಫೂರ್ತಿದಾಯಕ ಪಯಣ
ಕೇರಳದ ವಯನಾಡಿನ ಜನರ ಕಷ್ಟಕ್ಕೆ ಕನ್ನಡತಿ ಮೇಘಶ್ರೀ ಡಿ.ಆರ್ ಅಭಯಹಸ್ತ ನೀಡುತ್ತಿದ್ದಾರೆ. ಹೌದು ವಯನಾಡ್ ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿದೆ ವಯನಾಡಿನ ಜಿಲ್ಲಾಧಿಕಾರಿ ಆಗಿರುವ ಮೇಘಶ್ರೀ ಡಿ.ಆರ್ ಕನ್ನಡತಿ. ಕರ್ನಾಟಕದ ಚಿತ್ರದುರ್ಗದ ಜಿಲ್ಲೆಯವರು. ಇವರ ಕಾರ್ಯವೈಖರಿ ವಯನಾಡಿನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕ - ಕೇರಳದ ಗಡಿರಾಜ್ಯವಾಗಿರುವ ವಯನಾಡಿನಲ್ಲಿ ಪದೇ ಪದೇ ಪ್ರಕೃತಿ ವಿಕೋಪ ಸಂಭವಿಸುತ್ತಲ್ಲೇ ಇದೆ. ವಯನಾಡಿನ ಜನ ಈಚೆಗೆ ಸಂಭವಿಸಿದ ಭೂಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಭಾರೀ ಮಳೆಯಿಂದ ವಯನಾಡಿನಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ಕೇರಳದ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಮುಂಡಕ್ಕೈ, ಚೂರಲ್ಮಲ ಮತ್ತು ಅತ್ತಮಲ ಗ್ರಾಮಗಳಲ್ಲಿ ನೂರಾರು ಜನ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಜನ ಸಂಕಷ್ಟಕ್ಕೆ ಮಿಡಿದವರು ಮೇಘಶ್ರೀ ಅವರು. ಇದೀಗ ವಯನಾಡ್ ಮತ್ತೊಮ್ಮೆ ಸಂಕಷ್ಟದಲ್ಲಿದೆ.
ವಯನಾಡಿನ ಜಿಲ್ಲಾಧಿಕಾರಿ ಮೇಘಶ್ರೀ ಡಿಆರ್ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದವರು. ಇವರು ಬೆಳಗಾವಿಯ ವಿಟಿಯುನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (B.E.) ಪದವಿ ಮಾಡಿದ್ದಾರೆ. ಇವರು 2017ರ ಬ್ಯಾಚ್‌ನ ಕೇರಳ ಕೆಡರ್‌ನ ನೇರ ನೇಮಕಾತಿ ಐಎಎಸ್ ಅಧಿಕಾರಿಯಾಗಿದ್ದಾರೆ. ವಯನಾಡಲ್ಲಿ ಕಳೆದ ವರ್ಷ ಭಾರೀ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪ, ಭೂಕುಸಿತ ಹಾಗೂ ಈಚೆಗೆ ಸಂಭಿಸಿರುವ ಭೂಕುಸಿತದ ಸಂಕಷ್ಟದ ಸಂದರ್ಭದಲ್ಲಿ ಕನ್ನಡತಿ ಹಾಗೂ ವಯನಾಡಿನ ಜಿಲ್ಲಾಧಿಕಾರಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ವಯನಾಡಿನ ಜಿಲ್ಲಾಧಿಕಾರಿ ಮೇಘಶ್ರೀ ಡಿಆರ್ ಬೆಳಿಗ್ಗೆ 6 ಗಂಟೆಗೆ ತಮ್ಮ ದಿನವನ್ನು ಪ್ರಾರಂಭಿಸಿ ಮತ್ತು ವಯನಾಡಿನ ಭೂಕುಸಿತದಲ್ಲಿ ಹಾನಿಗೊಳಗಾದವರಿಗೆ ಸೇವೆ ಸಲ್ಲಿಸಲು ಬೆಳಗಿನ ಜಾವ 3 ಗಂಟೆಯವರೆಗೆ ಅವಿಶ್ರಾಂತವಾಗಿ ಕೆಲಸ ಮಾಡಿದ್ದು ಇದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯಾಚರಣೆಯ ಪ್ರತಿ ನಿಮಿಷವೂ ಅತ್ಯಂತ ಅಮೂಲ್ಯವಾದುದು ಎಂದು ನಂಬಿದ್ದ ಅವರು, ಪ್ರತಿ ಕ್ಷಣವು ಎಚ್ಚರಿಕೆ ಹಾಗೂ ಕಾಳಜಿಯಿಂದ ನಿಭಾಯಿಸಿದ್ದರು. ಭೂಕುಸಿತ ಸಂತ್ರಸ್ತರ ರಕ್ಷಣೆ ಹಾಗೂ ಮೃತಪಟ್ಟವರ ಶವ ಸಂಸ್ಕಾರದ ಪ್ರತಿಕ್ಷಣವೂ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿದ್ದರು.
ಇನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಯಲ್ಲಿ ಕೇರಳದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿಗೆ ವಯನಾಡು ಜಿಲ್ಲಾಧಿಕಾರಿ ಆಗಿರುವ ಡಿ.ಆರ್. ಮೇಘಶ್ರೀ ಅವರು ಪಾತ್ರರಾಗಿದ್ದರು. ಸಮಗ್ರ ಶಿಶು ಅಭಿವೃದ್ಧಿ ಇಲಾಖೆ ಘೋಷಿಸಿದ ಆರು ವಿಭಾಗಗಳಲ್ಲಿ ಐದು ವಿಭಾಗಗಳಲ್ಲಿ ಜಿಲ್ಲೆ ಪ್ರಶಸ್ತಿಗಳನ್ನು ಗೆದ್ದಿತ್ತು ಎನ್ನುವುದು ವಿಶೇಷ. ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ, ಸಹಾಯಕ, ಮೇಲ್ವಿಚಾರಕಿ ಮತ್ತು ಅತ್ಯುತ್ತಮ ಅಂಗನವಾಡಿ ವಿಭಾಗಗಳಲ್ಲಿ ಜಿಲ್ಲೆ ಅತ್ಯುತ್ತಮ ಫಲಿತಾಂಶಗಳ ಗರಿಮೆಗೆ ಪಾತ್ರವಾಗಿತ್ತು.
ಹಗಲಿರುಳು ಶ್ರಮಿಸುತ್ತಿರುವ ಮೇಘಶ್ರೀ ಡಿ.ಆರ್
ವಯನಾಡಿನಲ್ಲಿ ಪದೇ ಪದೇ ಪ್ರಕೃತಿ ವಿಕೋಪ, ಭಾರೀ ಮಳೆಯಿಂದ ಸಂಕಷ್ಟದ ಸಂದರ್ಭ ಎದುರಾಗುತ್ತಿದೆ. ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿ ಬಳಿ (ಮೀನಾಕ್ಷಿ ಸೇತುವೆ) ಮತ್ತು ಹಿಂದೆ ಮುಂಡಕ್ಕೈ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಭಾರೀ ಭೂಕುಸಿತ ಸಂಭವಿಸಿದೆ. ವಯನಾಡು-ಕೋಯಿಕ್ಕೋಡ್ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಈ ಭಾಗದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಹಲವರು ಈ ಭಾಗದಲ್ಲಿ ಶ್ರಮಿಸುತ್ತಿದ್ದಾರೆ. ಅವರಲ್ಲಿ ಕೇರಳದ ವಯನಾಡಿನ ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್ ಅವರು ಸಹ ಒಬ್ಬರು.
"ಒಬ್ಬ ತಂದೆಯಾಗಿ, ನನ್ನ ಮಗಳು ಮತ್ತು ವಯನಾಡಿನ ಪರಿಸ್ಥಿತಿಗಾಗಿ ನಾನು ಭಾರೀ ಆತಂಕ್ಕೆ ಒಳಗಾಗಿದ್ದೇನೆ. ಆದಾಗ್ಯೂ, ನಾನು ಅವಳಿಗೆ ಮೊದಲು ದೇಶದ ನಾಗರಿಕಳಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವಂತೆ ಹೇಳಿದ್ದೇನೆ. ಸಂಕಷ್ಟದಲ್ಲಿರುವ ಜನರಿಗೆ ಸೇವೆ ಸಲ್ಲಿಸುವಂತೆ ನನ್ನ ಮಗಳಿಗೆ ತಿಳಿಸಿದ್ದೇನೆ ಯಾಕೆಂದರೆ ಜನರ ಸೇವೆ ಹೆಚ್ಚು ಮುಖ್ಯವಾಗಿದೆ" ಎಂದು ಮೇಘಶ್ರೀ ಅವರ ತಂದೆ ಈ ಹಿಂದೆಯೊಮ್ಮೆ ಹೇಳಿದ್ದರು.












Click it and Unblock the Notifications