• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಡಿತರ ಚೀಟಿಯಲ್ಲಿ ಏಸುವಿನ ಚಿತ್ರ ಆಂಧ್ರ ಸರ್ಕಾರ ಹೇಳಿದ್ದೇನು?

|

ಅಮರಾವತಿ, ಡಿಸೆಂಬರ್ 10: ಆಂಧ್ರಪ್ರದೇಶ ಸರ್ಕಾರದ ಪಡಿತರ ಚೀಟಿಯಲ್ಲಿ ಏಸುವಿನ ಚಿತ್ರ ಕಾಣಿಸಿಕೊಂಡಿರುವುದು ಬಾರಿ ವಿವಾದಕ್ಕೆ ಕಾರಣವಾಗಿದೆ.

ಸ್ಥಳೀಯ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಎಲ್ಲೆಡೆ ಕ್ರಿಶ್ಚಿಯನ್ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಮೊದಲಿನಿಂದಲೂ ಇದ್ದವು.

ಆದರೆ ಈಗ ಸರ್ಕಾರದ ಪಡಿತರ ಚೀಟಿಯಲ್ಲೇ ಏಸು ಪ್ರತ್ಯಕ್ಷವಾಗಿದ್ದಾರೆ.ಆಂಧ್ರ ಸರ್ಕಾರವೇ ಮತಾಂತರ ಹಾಗೂ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲು ಆರಂಭಿಸಿದ್ದಾರೆ.

ಆದರೆ ರಾಜ್ಯ ಸರ್ಕಾರ ಮಾತ್ರ ಈ ಆರೋಪವನ್ನು ಅಲ್ಲಗಳೆದಿದೆ. ಆಂಧ್ರದ ಒಡ್ಲಮೂರು ಎಂಬ ಹಳ್ಳಿಯಲ್ಲಿ ಪಡಿತರ ಅಂಗಡಿಯ ಮಾಲೀಕರು ಈ ಪ್ರಮಾದವೆಸಗಿದ್ದಾರೆ.

ಇವರು ತೆಲುಗು ದೇಶಂ ಪಕ್ಷದ ಕಟ್ಟ ಬೆಂಬಲಿಗರಾಗಿದ್ದು, ಸರ್ಕಾರದ ವಿರುದ್ಧ ಅಪ ಪ್ರಚಾರಕ್ಕಾಗಿಯೇ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ.
ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಉದ್ದೇಶಪೂರ್ವಕವಾಗಿಯೇ ಪಡಿತರ ಅಂಗಡಿಯ ಮಾಲೀಕರು ಏಸುವಿನ ಚಿತ್ರ ಪ್ರಕಟಿಸಿ ಗ್ರಾಹಕರಿಗೆ ನೀಡುತ್ತದ್ದಾರೆ.
ಈ ಹಿಂದೆ ಸಾಯಿಬಾಬಾ ಹಾಗೂ ತಿರುಪತಿ ತಿಮ್ಮಪ್ಪನ ಚಿತ್ರವನ್ನು ಕೂಡ ಇವರು ಪ್ರಕಟಿಸಿದ್ದರು.ಒಟ್ಟಾರೆ ಈ ಷಡ್ಯಂತ್ರವನ್ನು ಟಿಡಿಪಿಯಿಂದಲೇ ಹೆಣೆಯಲಾಗಿದ್ದು, ಹಾಗೆಯೇ ಆ ಕುಟುಂಬವು ಕ್ರೈಸ್ತ ಧರ್ಮಕ್ಕೆ ಮತಾಂತರವೂ ಆಗಿಲ್ಲ.

ಆದಾಗ್ಯೂ ಈ ರೀತಿ ತಪ್ಪು ಮಾಡಿದ ಅಂಗಡಿ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ ಇಲಾಖೆ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

English summary
Jesus Photo Printed in Andhrapeadesh ration card people criticised the government move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X