YS Sharmila: ಆಂಧ್ರ ಸಿಎಂ ಜಗನ್‌ ಸಹೋದರಿ ವೈಎಸ್ ಶರ್ಮಿಳಾ ಕಾಂಗ್ರೆಸ್‌ ಸೇರ್ಪಡೆ- ತೆಲುಗು ರಾಜಕಾರಣದಲ್ಲಿ ಬಹುದೊಡ್ಡ ಸಂಚಲನ

ನವದೆಹಲಿ, ಜನವರಿ 04: ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಮತ್ತು ವೈಎಸ್ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ಶರ್ಮಿಳಾ ಅವರು ಕಾಂಗ್ರೆಸ್‌ ಪಕ್ಷದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸುವ ಬಗ್ಗೆ ಊಹಾಪೋಹಗಳು ಹರಡಿದ್ದವು. ಆದರೆ, ವಿಲೀನ ಪ್ರಕ್ರಿಯೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಶರ್ಮಿಳಾ ಅವರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಿರಲಿಲ್ಲ.

Andhra pradesh cm jagan Mohan reddys sister ys sharmila to join congress party

'ತಮ್ಮ ಪಕ್ಷದ ಅಭ್ಯರ್ಥಿಗಳು ಕಾಂಗ್ರೆಸ್ ಪರ ಮತಗಳನ್ನು ವಿಭಜಿಸಲು ಬಯಸುವುದಿಲ್ಲ' ಎಂದು ಹೇಳುವ ಮೂಲಕ ಶರ್ಮಿಳಾ ಅವರು ಚುನಾವಣಾ ಕಣದಿಂದ ದೂರ ಉಳಿದಿದ್ದರು.

ವೈಎಸ್‌ಆರ್‌ಸಿಪಿ ಮಾಜಿ ಸಂಸದ ವೈವಿ ಸುಬ್ಬಾ ರೆಡ್ಡಿ ನಡುವಿನ ಮಾತುಕತೆ ವಿಫಲವಾದ ನಂತರ ಕಾಂಗ್ರೆಸ್‌ ಸೇರ್ಪಡೆಗೊಳ್ಳಲು ಶರ್ಮಿಳಾ ಅವರು ನಿರ್ಧರಿಸಿದ್ದಾರೆ. ಸಹೋದರಿ ಶರ್ಮಿಳಾ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ ತಮ್ಮ ಇಮೇಜ್‌ಗೆ ಧಕ್ಕೆಯಾಗಬಹುದು ಎಂಬುದಾಗಿ ಜಗನ್‌ ಮೋಹನ ರೆಡ್ಡಿ ಭಾವಿಸಿದ್ದಾರೆ ಎನ್ನಲಾಗಿದೆ. ಈ ಕಾರಣ ಸಹೋದರಿಯನ್ನು ತಮ್ಮ ಪಕ್ಷಕ್ಕೆ ಸೇರುವಂತೆ ಮನವೊಲಿಸಲು ಜಗನ್‌ ಮುಂದಾಗಿದ್ದರು ಎಂದು ಹೇಳಲಾಗಿದೆ.

ಡಿಸೆಂಬರ್ 31 ಮತ್ತು ಜನವರಿ 1 ರಂದು ನಡೆದ ಸಭೆಗಳಲ್ಲಿ ಶರ್ಮಿಳಾ ಅವರು ವೈಎಸ್‌ಆರ್‌ಸಿಪಿಗೆ ಸೇರಲು ನಿರಾಕರಿಸಿದರು ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ.

Andhra pradesh cm jagan Mohan reddys sister ys sharmila to join congress party

ಜುಲೈ 2021 ರಲ್ಲಿ ಶರ್ಮಿಳಾ ಅವರು ತೆಲಂಗಾಣದಲ್ಲಿ ತಮ್ಮ ಪಕ್ಷವನ್ನು ಘೋಷಿಸಿದ ನಂತರ ಸಹೋದರ-ಸಹೋದರಿ ನಡುವೆ ರಾಜಕೀಯ ಅಸಮಾಧಾನ ಏರ್ಪಟ್ಟಿತ್ತು.

ಆಂಧ್ರ ಪ್ರದೇಶದಲ್ಲಿ ಸಕ್ರಿಯವಾಗುವ ಮೂಲಕ ಶರ್ಮಿಳಾ ಅವರು ತಮ್ಮದೇ ಆದ ರಾಜಕೀಯ ಅಸ್ತಿತ್ವನ್ನು ಕಂಡುಕೊಳ್ಳಲಿದ್ದಾರೆ. ಇದು ಜಗನ್‌ಗೆ ಸಂಕಷ್ಟ ತಂದೊಡ್ಡಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಮೇಲೆಯೂ ಇದು ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

ಶರ್ಮಿಳಾ ಹಾಗೂ ಜಗನ್‌ ನಡುವೆ ರಾಜಕೀಯವಷ್ಟೇ ಅಲ್ಲದೇ ವೈಯಕ್ತಿಕ ಮತ್ತು ವ್ಯವಹಾರಿಕ ಸಮಸ್ಯೆಗಳು ಇವೆ ಎನ್ನಲಾಗಿದೆ. ಜಗನ್‌ ರಿಂದ ದೂರವಾಗಿರುವ ತಾಯಿ ವಿಜಯಮ್ಮ ಶರ್ಮಿಳಾ ಬೆಂಬಲಕ್ಕೆ ನಿಂತಿದ್ದಾರೆ. ಇದು ತೆಲುಗು ಭಾಷಿಗ ಜನರನ್ನು ಸೆಳೆಯಬಹುದು ಎಂದು ಕಾಂಗ್ರೆಸ್‌ ಭಾವಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ತೆಲಂಗಾಣದಲ್ಲಿ ಪ್ರಚಂಡ ಬಹುಮತ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್‌ ಆಂಧ್ರದಲ್ಲೂ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದೆ. ವೈಎಸ್‌ ಶರ್ಮಿಳಾ ಸೇರ್ಪಡೆ ಮೂಲಕ ತೆಲುಗು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರವನ್ನು ಹಿಡಿಯುವ ಉಮ್ಮೇದಿಯಲ್ಲಿದೆ. ಶರ್ಮಿಳಾ ಸೇರ್ಪಡೆ ಆಂಧ್ರ ರಾಜಕಾರಣದಲ್ಲಿ ಯಾವ ತಿರುವನ್ನು ಹುಟ್ಟುಹಾಕಲಿದೆ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+