Get Updates
Get notified of breaking news, exclusive insights, and must-see stories!

ಚಂದ್ರಬಾಬು ನಾಯ್ಡು ರ್‍ಯಾಲಿಯಲ್ಲಿ ಮತ್ತೆ ಮೂವರು ಮಹಿಳೆಯರ ಸಾವು: ಒಂದೇ ವಾರದಲ್ಲಿ ಎರಡನೇ ಕಾಲ್ತುಳಿತ

ಹೈದರಾಬಾದ್, ಡಿಸೆಂಬರ್‌ 02: ತೆಲುಗು ದೇಶಂ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರ್‍ಯಾಲಿಯಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ರ್‍ಯಾಲಿಯಲ್ಲಿ ಕಾಲ್ತುಳಿತದಿಂದಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 2024 ರ ವಿಧಾನಸಭಾ ಚುನಾವಣೆಯ ತಯಾರಿಗಾಗಿ ರಾಜ್ಯಾದ್ಯಂತ ಸರಣಿ ರಾಜಕೀಯ ಸಭೆಗಳನ್ನು ಚಂದ್ರಬಾಬು ನಾಯ್ಡು ನಡೆಸುತ್ತಿದ್ದಾರೆ. ಅವರ ನೇತೃತ್ವದ ತೆಲುಗು ದೇಶಂ ಪಕ್ಷದ ಸಾರ್ವಜನಿಕ ಸಮಾರಂಭದಲ್ಲಿ ಜನರು ಪ್ರಾಣ ಕಳೆದುಕೊಂಡಿರುವುದು ಇದು ಎರಡನೇ ಬಾರಿ. ಈ ಎರಡೂ ಘಟನೆಗಳು ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ನಡೆದಿವೆ.

ಈ ಘಟನೆ ಅತ್ಯಂತ ದುರದೃಷ್ಟಕರ ಎಂದು ಹೇಳಿರುವ ಚಂದ್ರಬಾಬು ನಾಯ್ಡು, ತಮ್ಮ ಬೆಂಬಲಿಗರನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

 ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮ

ಮಹಿಳೆಯರಿಗೆ ಸೀರೆ ವಿತರಿಸುವ ಕಾರ್ಯಕ್ರಮ

ಸಾರ್ವಜನಿಕ ಸಭೆ ಮುಗಿದ ಬಳಿಕ ನಾಯ್ಡು ಅವರು ತಮ್ಮ ಮನೆಗೆ ತೆರಳಿದ್ದರು. ಈ ದುರಂತ ಸಂಭವಿಸಿದಾಗ ಸ್ಥಳದಲ್ಲಿ ಅವರು ಇರಲಿಲ್ಲ ಎಂದು ಆಂಧ್ರಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯ ನಂತರ, ತೆಲುಗು ದೇಶಂ ಪಕ್ಷದ ಸ್ಥಳೀಯ ಮುಖಂಡರಿಂದ ಮಹಿಳೆಯರಿಗೆ ಸೀರೆಗಳನ್ನು ಉಡುಗೊರೆಯಾಗಿ ವಿತರಿಸುವ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮವು ಸಂಕ್ರಾಂತಿ ಪ್ರಯುಕ್ತ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಊಟದ ಪ್ಯಾಕೆಟ್‌ಗಾಗಿ ನೂಕಾಟ

'ಚಂದ್ರಬಾಬು ನಾಯ್ಡು ಅವರ ಸಂಕ್ರಾಂತಿ ಉಡುಗೊರೆ ಪಡೆಯಲು ಸುಮಾರು 4,000 ಮಹಿಳೆಯರು ಸ್ಥಳದಲ್ಲಿ ನೆರೆದಿದ್ದರು. ಅಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು. ಸರತಿಯಲ್ಲಿರಲು ಮಹಿಳೆಯರಿಗೆ ಸೂಚಿಸಲಾಗಿತ್ತು. ಇನ್ನೊಂದು ಬದಿಯಲ್ಲಿ, ಊಟದ ಪ್ಯಾಕೆಟ್‌ಗಳನ್ನು ವಿತರಿಸಲಾಗತ್ತಿತ್ತು. ಇದ್ದಕ್ಕಿದ್ದಂತೆ ಬ್ಯಾರಿಕೇಡ್‌ಗಳನ್ನು ತಳ್ಳಿ ಮಹಿಳೆಯರು ನುಗ್ಗಿದರು. ಆಗ ಕಾಲ್ತುಳಿತ ಸಂಭವಿಸಿತು,' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಸಾಕಷ್ಟು ಪೊಲೀಸ್ ಭದ್ರತೆ ನೀಡಲಾಗಿತ್ತು ಎಂದು ಗುಂಟೂರಿನ ಪೊಲೀಸ್ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

'200 ಪೊಲೀಸರನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿತ್ತು. ಮೊದಲ ಕೌಂಟರ್‌ನಲ್ಲಿ ಬ್ಯಾರಿಕೇಡ್ ತಳ್ಳಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಕ್ಷಣದಲ್ಲಿ ಪೊಲೀಸ್ ಉಪ ಅಧೀಕ್ಷಕರು ಸ್ಥಳದಲ್ಲಿದ್ದರು. ಕೆಲವು ಮಹಿಳೆಯರನ್ನು ರಕ್ಷಿಸಿದ್ದಾರೆ' ಎಂದು ಅವರು ಹೇಳಿದ್ದಾರೆ.

 ಬುಧವಾರ ನೆಲ್ಲೂರು ಜಿಲ್ಲೆಯಲ್ಲಿಯೂ ಕಾಲ್ತುಳಿತ

ಬುಧವಾರ ನೆಲ್ಲೂರು ಜಿಲ್ಲೆಯಲ್ಲಿಯೂ ಕಾಲ್ತುಳಿತ

ನೆಲ್ಲೂರು ಜಿಲ್ಲೆಯಲ್ಲಿ ಬುಧವಾರ ಇದೇ ರೀತಿಯ ಘಟನೆ ನಡೆದಿತ್ತು. ರೋಡ್‌ಶೋ ವೇಳೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದರು. ಅವರಲ್ಲಿ ಒಬ್ಬ ಮಹಿಳೆಯೂ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ರೋಡ್‌ಶೋಗಾಗಿ ಕಂದುಕೂರಿಗೆ ಬರುತ್ತಿದ್ದ ನಾಯ್ಡು ಅವರನ್ನು ನೋಡಲು ಕಾಯುತ್ತಿದ್ದಾಗ ಹಲವರು ತೆರೆದ ಕಾಲುವೆಯಲ್ಲಿ ಬಿದ್ದಿದ್ದರು.

ಚಂದ್ರಬಾಬು ನಾಯ್ಡು ಅವರು ಸಭೆಯನ್ನು ತಕ್ಷಣವೇ ರದ್ದುಗೊಳಿಸಿದ್ದರು. ತಮ್ಮ ಬೆಂಬಲಿಗರನ್ನು ಕಳೆದುಕೊಂಡ ಕುಟುಂಬಗಳಿಗೆ ₹ 24 ಲಕ್ಷ ಪರಿಹಾರವನ್ನು ಘೋಷಿಸಿದ್ದರು. ಈ ಘಟನೆ ಬಳಿಕ ನಾಯ್ಡು ಅವರು ತಮ್ಮ ರಾಜಕೀಯ ಸಭೆಗಳನ್ನು ಮುಂದುವರೆಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಸಂಕ್ರಾಂತಿ ಕೊಡುಗೆ ಕಿಟ್ ವಿತರಣೆಯಲ್ಲಿ ವಿಳಂಬವಾದ ಕಾರಣ ಕಾಲ್ತುಳಿತ ಸಂಭವಿಸಿದೆ ಎಂದು ವೈಎಸ್ಆರ್ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಜನರು ಗಂಟೆಗಟ್ಟಲೆ ಕಾದು ಪರದಾಡಿದರು ಎಂದು ಆರೋಪಿಸಿದ್ದಾರೆ.

 ಪ್ರಚಾರದ ಉನ್ಮಾದ ದುರಂತಕ್ಕೆ ಕಾರಣವೆಂದ ಜಗನ್‌

ಪ್ರಚಾರದ ಉನ್ಮಾದ ದುರಂತಕ್ಕೆ ಕಾರಣವೆಂದ ಜಗನ್‌

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಾವಿಗೆ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಮುಖಂಡರನ್ನು ದೂಷಿಸಿದ್ದಾರೆ. ಅವರ ಪ್ರಚಾರದ ಉನ್ಮಾದ ದುರಂತಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ಅವರು ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾನುವಾರ ಗುಂಟೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಟುಂಬಕ್ಕೆ ಸರಕಾರ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

 ಭಾರೀ ಪ್ರಮಾಣದ ಜನರನ್ನು ಆಕರ್ಷಿಸುತ್ತಿರುವ ನಾಯ್ಡು

ಭಾರೀ ಪ್ರಮಾಣದ ಜನರನ್ನು ಆಕರ್ಷಿಸುತ್ತಿರುವ ನಾಯ್ಡು

ಚಂದ್ರಬಾಬು ನಾಯ್ಡು ಅವರು ತಮ್ಮ ರ್‍ಯಾಲಿಗಳು ಮತ್ತು ರಾಜಕೀಯ ಸಭೆಗಳನ್ನು ಹೆಚ್ಚು ನಡೆಸುತ್ತಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಭಾರೀ ಪ್ರಮಾಣದ ಜನರು ಸೇರುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ವೈಎಸ್‌ಆರ್‌ ಕಾಂಗ್ರೆಸ್ ಒತ್ತಡದಲ್ಲಿದೆ ಎಂದು ಟಿಡಿಪಿ ಹೇಳಿದೆ.

2019 ರಲ್ಲಿ ವೈಎಸ್ಆರ್ ಕಾಂಗ್ರೆಸ್‌ ವಿರುದ್ದ ಚಂದ್ರಬಾಬು ನಾಯ್ಡು ಅವರ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತ್ತು. ಟಿಡಿಪಿಯ ಪುನರುತ್ಥಾನದ ಸೂಚನೆಯಂತೆ ನಾಯ್ಡು ಅವರ ಕಾರ್ಯಕ್ರಮಗಳಲ್ಲಿ ಭಾರೀ ಜನಸಮೂಹವನ್ನು ಕಂಡುಬರುತ್ತಿದೆ.

ಜನರು ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರದಿದ್ದರೆ 2024 ರ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಚಂದ್ರಬಾಬಯ ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಶೀಘ್ರದಲ್ಲೇ ಪಾದಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಅದು ಯುವ ವೇದಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 4,000 ಕಿ.ಮೀ.ಗೂ ಹೆಚ್ಚು ಕ್ರಮಿಸಲಿರುವ 400 ದಿನಗಳ ಪಾದಯಾತ್ರೆ ಜನವರಿ 27ರಿಂದ ಆರಂಭವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+