TTD Property: ತಿರುಪತಿ ತಿಮ್ಮಪ್ಪನ ಆಸ್ತಿಗೆ ಭದ್ರತೆ ಇಲ್ಲ: ಟಿಟಿಡಿ ಆಡಳಿತ ವಿರುದ್ಧ ಭ್ರಷ್ಟಾಚಾರ ಆರೋಪ
ತಿರುಪತಿ, ಮಾರ್ಚ್ 27: ಆಂಧ್ರಪ್ರದೇಶ ರಾಜ್ಯದ ವ್ಯಾಪ್ತಿಗೆ ಬರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದ (TTD) ಆಸ್ತಿಗಳಿಗೆ ಭದ್ರತೆ ಇಲ್ಲ. YSRCP ಪಕ್ಷದ ಸಿಎಂ ಜಗನ್ ಮೋಹನ್ ರೆಡ್ಡಿ ಆಡಳಿತದ ವಿರುದ್ಧ ಅಪಸ್ವರ ಕೇಳಿ ಬಂದಿವೆ. ಈ ಕುರಿತು ತೆಲುಗು-360 ವರದಿ ಮಾಡಿದೆ.
ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ತಿರುಮಲದಲ್ಲಿರುವ ವೆಂಕಟೇಶ್ವರನ ಆಸ್ತಿಗಳಿಗೂ ಭದ್ರತೆ ಇಲ್ಲ. ದೇವರ ಆಸ್ತಿಗಳಿಗೂ ಕುತ್ತು ಬರಲಿದೆ ಎಂದು 'ತೆಲುಗು ದೇಶಂ ಪಾರ್ಟಿ' (TDP) ಅಧಿಕೃತ ವಕ್ತಾರ ನೀಲಯಪಾಲೆಂ ವಿಜಯ್‌ಕುಮಾರ್ ಮಂಗಳವಾರ ಆರೋಪಿಸಿದ್ದಾರೆ. ಇಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಳಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಧರ್ಮಾ ರೆಡ್ಡಿ ಹಾಗೂ ಅಧ್ಯಕ್ಷ ಕರುಣಾಕರ್ ರೆಡ್ಡಿ ಅವರೊಂದಿಗೆ ಏಕಪಕ್ಷಿಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ತಮಗೆ ಬೇಕಾದ ಸ್ವಂತ ವ್ಯಕ್ತಿಗಳಿಗೆ ಟಿಟಿಡಿ ಸಂಬಂಧಿತ ಕೆಲಸಗಳನ್ನು ಗುತ್ತಿಗೆ ನೀಡಲಾಗುತ್ತಿದೆ. ಈ ಮೂಲಕ ಕಮಿಷನ್ ಆಸೆಗೆ ಹೀಗೆಲ್ಲ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಟಿಟಿಡಿ ವೆಬ್‌ಸೈಟ್‌ಗೆ ಮಾಹಿತಿ ಅಪ್ಲೋಡ್ ಮಾಡಿಲ್ಲ
ಈ ಗುತ್ತಿಗೆ ಮತ್ತಿತರ ಕೆಲವು ವಿಚಾರಗಳನ್ನು ಟಿಟಿಡಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿಲ್ಲ. ಸಾಧ್ಯವಾದಷ್ಟು ಎಲ್ಲವನ್ನು ರಹಸ್ಯವಾಗಿ ಇಡಲಾಗುತ್ತಿದೆ. ಟಿಟಿಡಿ ಟ್ರಸ್ಟ್ ಬೋರ್ಡ್ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಸಹ ಬಹಿರಂಗವಾಗುತ್ತಿಲ್ಲ. ದೇವಾಲಯಕ್ಕೆ ಅಪಾರ ಪ್ರಮಾಣದ ಹಣವನ್ನು ದೇಣಿಗೆ ನೀಡುವ ಯಾತ್ರಾರ್ಥಿಗಳಿಗೆ ವಿವರಗಳನ್ನು ಬಹಿರಂಗಪಡಿಸುವಂತೆ ಅವರು ಕೇಳಿದ್ದಾರೆ.
ಟಿಟಿಡಿ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ
ಟಿಟಿಡಿ ಅಧ್ಯಕ್ಷರಾಗಿ ಭೂಮನ ಕರುಣಾಕರ್ ರೆಡ್ಡಿ ನೇಮಕವಾದ ಬಳಿಕ ದೇವಸ್ಥಾನದ ಆರ್ಥಿಕ ವಿಚಾರ, ವಹಿವಾಟಿನಲ್ಲಿ ಪಾರದರ್ಶಕತೆ ಇಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.

ವೆಬ್‌ಸೈಟ್‌ನಲ್ಲಿ ಕೇಂದ್ರವೂ ಎಲ್ಲಾ ಜಿಒಗಳನ್ನು ಅಪ್‌ಲೋಡ್ ಮಾಡುತ್ತಿದೆ, ಆದರೆ ಅಪ್ಲೋಡ್ ಮಾಡುವಲ್ಲಿ ಟಿಟಿಡಿ ಏಕೆ ವಿಫಲವಾಗಿದೆ ಎಂದು ಪ್ರಶ್ನಿಸಿದರು. ಸಾಮಾನ್ಯವಾಗಿ ಮಾಸಿಕವಾಗಿ ಟ್ರಸ್ಟ್ ಬೋರ್ಡ್ ಸಭೆ ನಡೆಯುತ್ತಿದ್ದವು. ಭೂಮನ ಕರುಣಾಕರ ರಡ್ಡಿ ಅವರು ಅಧ್ಯಕ್ಷರಾದ ಮೇಲೆ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಯುತ್ತವೆ. ಏಕೆಂದರೆ ತಮ್ಮ ಸ್ವಂತ ಜನರಿಗೆ ಗುತ್ತಿಗೆ ನೀಡುವುದು, ತೆರವುಗೊಳಿಸಲು ಈ ಸಭೆ ಆಯೋಜಿಸಲಾಗುತ್ತದೆ ಎಂದು ಅವರು ಕಿಡಿ ಕಾರಿದರು.
3 ತಿಂಗಳಲ್ಲಿ ರೂ.1300 ಕೋಟಿ ಮಂಜೂರು
ಟಿಟಿಡಿಗೆ ಅಧ್ಯಕ್ಷರಾದ ಬಂದ ಮೂರೇ ತಿಂಗಳಲ್ಲಿ ಕರುಣಾಕರ್ ರೆಡ್ಡಿ ಅವರು 1300 ಕೋಟಿ ರೂ. ಗುತ್ತಿಗೆ ಮಂಜೂರು ಮಾಡಿದ್ದಾರೆ. ಅದು ಸಹ ಬಜೆಟ್‌ನೊಂದಿಗೆ ಯಾವುದೇ ಸಂಬಂಧ ಇಲ್ಲದೇ ಕಮಿಷನ್ ಪಡೆಯಲು ಮಾತ್ರ ಎಂದು ಅವರು ದೂರಿದರು.
ಸದರಿ ಲೋಕಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿಯಿಂದ ಕರುಣಾಕರ ರೆಡ್ಡಿ ಪುತ್ರ ತಿರುಪತಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಈ ಮೂಲಕ ಅಭಿವೃದ್ಧಿಯ ನೆಪದಲ್ಲಿ ಟಿಟಿಡಿ ಹಣವನ್ನು ದುರುಪಯೋಗ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗೆ ಆರೋಪ ಮಾಡುವ ಮೂಲಕ ವಿವಿಧ ಕಾಮಗಾರಿಗಳಿಗೆ ಮೀಸಲಿಟ್ಟ ಹಣದ ಕುರಿತು ಅವರು ಲೆಕ್ಕ ಕೊಟ್ಟರು.
ಇಒ ಅಧಿಕಾರ ವಿಸ್ತರಣೆಗೆ ಸಿಎಂ ಮನವಿ
ಇತ್ತ ರಾಜ್ಯದಲ್ಲಿ ಅಧಿಕಾರದಲ್ಲಿರುವ YSRCP ಪಕ್ಷದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ತಪ್ಪಿತಸ್ಥ ಟಿಟಿಡಿ EO ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು EO ಅಧಿಕಾರಾವಧಿ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ ಎಂದರು.
ಇದೆಲ್ಲ ಬೆಳವಣಿಗೆ ಕುರಿತು ಚುನಾವಣಾ ಆಯೋಗ ಗಮನಹರಿಸಬೇಕು. ಟಿಟಿಡಿ ಅಧ್ಯಕ್ಷರನ್ನು ಕನಿಷ್ಠ ಚುನಾವಣೆಯ ವರೆಗೆ ಸ್ಥಾನದಿಂದ ವಜಾಗೊಳಿಸಬೇಕು. ಇಒ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.












Click it and Unblock the Notifications