ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಪಟ್ಟಿಗೆ ಹೆಸರು ನೋಂದಾವಣೆ ಹೇಗೆ ಗೊತ್ತಾ?

|
Google Oneindia Kannada News

voter list
ಬೆಂಗಳೂರು, ಮಾ.23 : ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಜನರು ಮತದಾನ ಮಾಡಲು ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವವರು ಇದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ ಎಂದು ತಿಳಿಯಬೇಕಾದರೆ ಕೆಳಗಿನ ಮಾಹಿತಿಗಳನ್ನು ಓದಿ.

ಓದು, ಉದ್ಯೋಗ ಎಂದು ನೀವು ಸ್ವಂತ ತವರೂರು ತೊರೆದು ನಗರಗಳಿಗೆ ವಲಸೆ ಬಂದವರಗಿದ್ದರೆ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೆಲವು ಮಾಹಿತಿಗಳು ಇಲ್ಲಿವೆ. ನಿಮ್ಮ ವಾಸಿಸುತ್ತಿರುವ ನಗರ ಮತ್ತು ಮಹಾನಗರ ಪಾಲಿಕೆ ಅಥವ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಕಚೇರಿಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಮೊದಲು ಕೇಂದ್ರ ಚುನಾವಣಾ ಆಯೋಗ ಪ್ರತಿಕೆ, ಟಿವಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಪ್ರಕಟಿಸುತ್ತದೆ. ಅದನ್ನು ನೀವು ಗಮನಿಸಿದ್ದರೆ, ನಿಮ್ಮ ಹತ್ತಿರದ ಕೇಂದ್ರಕ್ಕೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಸಬಹುದು.

ಹದಿನೆಂಟು ವರ್ಷ ತುಂಬಿದ ಪ್ರಜೆಯು ಚುನಾವಣಾ ಆಯೋಗ ಸೂಚಿಸಿದ ಸ್ಥಳಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು. ಬೆಂಗಳೂರಿನಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ವಾರ್ಡ್ ಕಚೇರಿಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದು. ಆಲ್ ಲೈನ್ ಮೂಲಕವು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. www.voterreg.kar.nic.in ತಾಣದಲ್ಲಿ ಅರ್ಜಿ ನಮೂನೆಗಳು ಲಭ್ಯವಿದೆ.

ಅರ್ಜಿಗಳು ಎಲ್ಲಿ ಲಭ್ಯ : ಮುಖ್ಯ ಚುನಾವಣಾ ಆಯುಕ್ತರ ಕಚೇರಿ ಸಿಇಒ ಅಥವ ಸಮೀಪದ ಸಹಾಯಕ ಚುನಾವಣಾ ನೋಂದಣಿ ಕೇಂದ್ರದಲ್ಲಿ (ಎಐಆರ್ಒ) ಕೇಂದ್ರದಿಂದ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಬಹುದು. ಅಥವ http://ceokarnataka.kar.nic.in ನಲ್ಲಿ ಪಡೆದುಕೊಳ್ಳಿ.

ಯಾವ ಅರ್ಜಿ ಪಡೆಯಬೇಕು : ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಫಾರಂ 6, ಫಾರಂ 7, ಫಾರಂ 8, ಫಾರಂ 8ಎ ಎಂಬ ನಾಲ್ಕು ರೀತಿಯ ಅರ್ಜಿಗಳಿವೆ. ಹೊಸದಾಗಿ ಹೆಸರು ನೊಂದಾಯಿಸಲು, ಹೆಸರು ಬದಲಾವಣೆ ಮಾಡಿಸಲು, ಸ್ಥಳ ಬದಲಾವಣೆ ಮಾಡಿದ ನಂತರ ಹೆಸರು ನೋಂದಣಿ ಮಾಡಿಸಲು ನಿಮಗೆ ಅಗತ್ಯವಿರುವ ಅರ್ಜಿಗಳನ್ನು ಬಳಸಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ನೂತನವಾಗಿ ಹೆಸರು ಸೇರಿಸಲು, ಸ್ಥಳ ಬದಲಾವಣೆ ಬಗ್ಗೆ ಮಾಹಿತಿ ನೀಡಲು ಮತ್ತು ಹೆಸರು ಕಣ್ಮರೆ ಆಗಿದ್ದರೆ ಪುನಃ ಸೇರಿಸಲು ಫಾರಂ6 ಅನ್ನು ಬಳಸಬಹದು. ಫಾರಂ 7 ಮುಖಾಂತರ ನಿಮ್ಮ ಹೆಸರನ್ನು ರದ್ದು ಪಡಿಸಬಹುದು, ಮರಣ ಹೊಂದಿದ ವ್ಯಕ್ತಿಯ ಹೆಸರು ತೆಗೆಸಬಹುದಾಗಿದೆ.

ಮತದಾರರ ಪಟ್ಟಿಯಲ್ಲಿನ ನಿಮ್ಮ ವಿವರಗಳಲ್ಲಿ ತಪ್ಪುಗಳಿದ್ದರೆ ಫಾರಂ 8 ಮುಖಾಂತರ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಒಂದೇ ಚುನವಣಾ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಇನ್ನೊಂದು ಜಾಗಕ್ಕೆ ಸ್ಥಳಾಂತರಿಸಲು ಅಂದರೆ ನಿಮ್ಮ ವಿಳಾಸ ಬದಲಾಗಿದ್ದರೆ ಫಾರಂ 8ಎ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.

ನೀವು ಅರ್ಜಿಯನ್ನು ಪಡೆದುಕೊಂಡ ಕಚೇರಿಯಲ್ಲಿಯೇ ಮರಳಿ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಮತದಾರರ ನೋಂದಣಿ ವರ್ಷಪೂರ್ತಿ ನಡೆಯುತ್ತದೆ. ಆದರೆ, ಚುನಾವಣೆ ನಡೆಯುವ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಿರುವವರೆಗೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿರುತ್ತದೆ.

ಯಾವ ದಾಖಲೆ ಬೇಕು : ಎಸ್ಎಸ್ಎಲ್ ಸಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ವಿವಾಹ ನೋಂದಣಿ ಪತ್ರ, ರೇಷನ್ ಕಾರ್ಡ್ ಮುಂತಾದ ವಯೋಮಿತಿ ತಿಳಿಸುವ ದಾಖಲೆಗಳು ಹೆಸರು ನೋಂದಣಿ ಮಾಡಿಸಲು ಸಾಕು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
How to register name in voters list? If your name is not included in voters list, go to nearest govt office and register your name. 18 years person can register his name in voters list and get voter id card from election commission. Do not lose this opportunity to vote in Karnataka assembly election 2013 to be held on May 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X