ಅತ್ಯಾಚಾರ ಭೀತಿ: ಬಿಟಿಎಸ್ ಬಸ್ಸುಗಳಿಗೆ CCTV

ಈ ಮಧ್ಯೆ, ರಾಜಧಾನಿ ಬೆಂಗಳೂರಿನಲ್ಲೂ ಇಬ್ಬರು ಯುವತಿಯರಿಗೆ (ಭೂತಾನ್ ನವರು) ವೋಲ್ವೋ ಬಿಟಿಎಸ್ ಬಸ್ಸಿನಲ್ಲಿ ಕಿರಾತಕ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ (ಈ ಬಗ್ಗೆ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ, ಘಟನೆಯ ಸತ್ಯಾಸತ್ಯತೆ ತಿಳಿಸಲಿದ್ದಾರೆ.) ಅದೂ ಅತ್ತ ಸಾರಿಗೆ ಸಚಿವ ಅಶೋಕ್ ಅವರು 'ಎಚ್ಚೆರಾ, ಎಚ್ಚರ' ಎಂದು ಬೊಂಬಡಾ ಹೊಡೆದು ಹೋದ ಹೊತ್ತಿನಲ್ಲೇ ಈ ಅನುಚಿತ ವರ್ತನೆ ನಡೆದಿದೆ.
ಇದರಿಂದ ಎಚ್ಚೆತ್ತ ಸರಕಾರ ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಖ್ಯವಾಗಿ ಪ್ರತಿಯೊಂದು ಬಿಟಿಎಸ್ ಬಸ್ಸಿನಲ್ಲೂ ಎರಡೆರಡು CCTV ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಿದೆ.
ಆ ಬಸ್-ಈ ಬಸ್ ಅಂತಲ್ಲ. ವೋಲ್ವೋ ಬಸ್ಸಿನಿಂದ ಹಿಡಿದು ಎಲ್ಲ ಬಸ್ಸುಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದನ್ನು ಯಾವಾಗಲೋ ಅಳವಡಿಸಬಹುದಾಗಿತ್ತಾದರೂ ಈಗಲಾದರೂ ಸಾರಿಗೆ ಇಲಾಖೆ ಎಚ್ಚೆತ್ತು ಕೊಂಡಿದೆ. ಅಷ್ಟೇ ಅಲ್ಲ. ಇದನ್ನು ಸದ್ಯದಲ್ಲೇ ರಾಜ್ಯಾದ್ಯಂತ ಕೆಎಸ್ಆರ್ ಟಿಸಿ ಬಸ್ಸುಗಳಲ್ಲೂ ಅಳವಡಿಸಲು ಇಲಾಖೆ ನಿರ್ಧರಿಸಿದೆ.
ಇದೆಲ್ಲ OK, ಆದರೆ ಖಾಸಗಿ ಬಸ್ಸುಗಳಲ್ಲಿ ಸಂಚರಿಸುವವರ ಪಾಡೇನು? CCCTV ಅಳವಡಿಸಿಕೊಳ್ಳುವಂತೆ ಖಾಸಗಿ ಬಸ್ ಮಾಲೀಕರಿಗೂ ಸರಕಾರ ತಾಕೀತು ಮಾಡುತ್ತದಾ?
ಇದೇ ಸಂದರ್ಭದಲ್ಲಿ ಪ್ರಯಾಣಿಕರತ ಸುರಕ್ಷತೆ, ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡಲು BMTC ತನ್ನ ಸಿಬ್ಬಂದಿಗೆ ಒಂದಷ್ಟು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. *Happy Journey! women commuters.
1. ಮಹಿಳಾ ಪ್ರಯಾಣಿಕರ ಜತೆ ಸೌಜನ್ಯವಾಗಿ ವರ್ತಿಸಬೇಕು.
2. ಮಹಿಳಾ ಪ್ರಯಾಣಿಕರಿಗೆ ಆದ್ಯತೆಯಲ್ಲಿ ಸೀಟು ಕೊಡಬೇಕು.
3. ಮಹಿಳಾ ಪ್ರಯಾಣಿಕರ ಪಕ್ಕದಲ್ಲಿ ಮಹಿಳೆಯೇ ಕುಳಿತುಕೊಳ್ಳುವಂತೆ ಎಚ್ಚರವಹಿಸಬೇಕು.
4. ಮಹಿಳಾ ಪ್ರಯಾಣಿಕರ ಜತೆ ಅನಗತ್ಯವಾಗಿ ವಾದ ಮಾಡಬಾರದು.
5. ಮಹಿಳಾ ಪ್ರಯಾಣಿಕರ ಜತೆ ಪುರುಷರು ಅಸಭ್ಯಯವಾಗಿ ವರ್ತಿಸಿದರೆ ಚಾಲಕ-ನಿರ್ವಾಹಕರು ಬಸ್ಸನ್ನು ಸಮೀಪದ ಪೊಲೀಸ್ ಠಾಣೆಯತ್ತ ತಿರುಗಿಸಬೇಕು.












Click it and Unblock the Notifications