• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜೀನಾಮೆ ಕೊಟ್ಮೇಲೆ ಗೌಡರು ಏನು ಹೇಳಿದರು?

By Mahesh
|
EX CM Sadananda Gowda farewell speech
ನವದೆಹಲಿ, ಜು.8: 'ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನಗೆ ಯಾವುದೇ ಜವಾಬ್ದಾರಿಯನ್ನು ಹೊರೆಸಿದರೂ ನಿಭಾಯಿಸಲು ಸಿದ್ಧನಿದ್ದೇನೆ ' ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿ ಪಕ್ಷದ ಬಲವರ್ಧನೆಗೆ ಇನ್ನೂ ಹೆಚ್ಚಿನ ಶಕ್ತಿ ತುಂಬುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಕೈಗೊಂಡ ತೀರ್ಮಾನಕ್ಕೆ ಒಪ್ಪಿ ನಾನು ರಾಜೀನಾಮೆ ನೀಡಿದ್ದೇನೆ. ನಾಯಕತ್ವ ಬದಲಾವಣೆಯಿಂದ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಪಕ್ಷ ನಂಬಿದೆ. ನಾನು ಅದರಂತೆ ನಡೆಯುತ್ತೇನೆ.'

ಪಕ್ಷದ ಹಿರಿಯ ನಾಯಕ ಜಗದೀಶ್ ಶೆಟ್ಟರು ಅವರಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಮುಂದಿನ ಮುಖ್ಯಮಂತ್ರಿ 10 ತಿಂಗಳು ಅವಕಾಶವಿರುತ್ತದೆ. ಈ ಅವಧಿಯಲ್ಲಿ ಪಕ್ಷದ ಏಳಿಗೆಗಾಗಿ ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಸಹಕರಿಸುತ್ತೇನೆ. ನಾನು ಈಗ ಹೆಚ್ಚು ನಿರಾಳವಾಗಿದ್ದೇನೆ.

11 ತಿಂಗಳು 5 ದಿನ ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ ತೃಪ್ತಿಯಿದೆ. ನನ್ನ ಆಡಳಿತದ ಬಗ್ಗೆ ಪಕ್ಷದ ಹಿರಿಯ ನಾಯಕರು, ಸಂಘ ಪರಿವಾರ ಅದರಲ್ಲೂ ವಿಶೇಷವಾಗಿ ಎಲ್ ಕೆ ಅಡ್ವಾಣಿ ಅವರು ಮೆಚ್ಚುಗೆಯ ಮಾತನ್ನಾಡಿರುವುದು ನನಗೆ ತುಂಬಾ ಸಂತಸ ತಂದಿದೆ.

ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಸುಳ್ಯ, ಪುತ್ತೂರು, ಮಂಗಳೂರು ಹಾಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರಗಳಿಂದ ನನ್ನನ್ನು ಜನ ಆರಿಸಿ ಕಳಿಸಿದ್ದಕ್ಕೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಕೈಗೊಳ್ಳುವ ನಿರ್ಣಯದಂತೆ ನಾನು ನಡೆಯುತ್ತೇನೆ.

ದೆಹಲಿ ಮಾಧ್ಯಮ ಮಿತ್ರರಿಗೆ ನನ್ನ ಧನ್ಯವಾದ ಅರ್ಪಿಸಬೇಕು. ಪ್ರತಿ ಸಾರಿ ಬಂದಾಗಲೂ ಹೆಚ್ಚು ಮುಜುಗರವಾಗದಂತೆ ನಗು ನಗುತ್ತಾ ಪ್ರಶ್ನೆಗಳನ್ನು ಕೇಳಿದ್ದಾರೆ. ನನ್ನ ನಗುವನ್ನು ಹೆಚ್ಚಿಸಿದ್ದಾರೆ ಎಂದರು.

ಬಿಜೆಪಿ ಪಕ್ಷ ಈಗ ಜಾತಿ, ವ್ಯಕ್ತಿ ಪ್ರಾತಿನಿಧ್ಯಕ್ಕೆ ಬೆಲೆ ಕೊಡುತ್ತಿದೆ ಎನಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸದಾನಂದ, ಜಾತಿ ದೊಡ್ಡ ಸಂಗತಿ ಏನಲ್ಲ. ಹೈಕಮಾಂಡ್ ನಿರ್ಧಾರ ಸೂಕ್ತವಾಗಿದೆ. ಜಾತಿಗಿಂತ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದರು.

ಸಂಘ ಪರಿವಾರ ನನ್ನ ಮೊದಲಗುರು ನನ್ನ ಶಿಸ್ತು, ಸಂಯಮ, ಉತ್ತಮ ಆಡಳಿತ ಎಲ್ಲಕ್ಕೂ ನನ್ನ ಗುರುಗಳ ಹಾರೈಕೆಯೇ ಕಾರಣ ಎಂದರು. ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಸುರೇಶ್ ಕುಮಾರ್ ಅವರು ಉಪಸ್ಥಿತರಿದ್ದರು. ಸದಾನಂದ ಗೌಡರು ದೆಹಲಿ ಬಿಟ್ಟು ಬೆಂಗಳೂರಿಗೆ ಭಾನುವಾರವೇ ಮರಳಲಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I m obedient soldier of the party and ready to work assigned to me by the the party. Jagadish Shettar is senior leader and I will give full co operation to him. I m glad that BJP high command is happy with my 11 months corruption free short tenure as CM said Former CM of Karnataka DV Sadananda Gowda in his farewell speech at Newdelhi on Jul.8, Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more