ಟಿಕೆಟ್ ಕೈ ತಪ್ಪಿದರೂ ಸದಾನಂದಗೌಡ್ರು ಬಂಡಾಯ ಏಳದೇ ಸೈಲೆಂಟ್ ಯಾಕೆ ಗೊತ್ತಾ?

ಡಿವಿ ಸದಾನಂದಗೌಡ.. ಹಸನ್ಮುಖಿ ರಾಜಕಾರಣಿ.. ಎಲ್ಲ ಗದ್ದುಗೆಗಳನ್ನು ಸಲೀಸಾಗಿ ಏರಿದವರು. ರಾಜ್ಯದಲ್ಲಿ ಮಂತ್ರಿ ಆಗುವ ಕನಸು ಕಂಡವರು ಧಿಡೀರ್‌ ಮುಖ್ಯಮಂತ್ರಿ ಆದರು. ರಾಜಕೀಯ ನಡೆಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ಡಿವಿಎಸ್‌, ತಾವು ಸಂಸದರಾಗಿದ್ದ ಬೆಂಗಳೂರು ಉತ್ತರಿಂದ ಟಿಕೆಟ್‌ ಮಿಸ್ ಆಗಿದ್ದಕ್ಕೆ ಬಂಡಾಯ ಏಳುವ ಸೂಚನೆ ನೀಡಿದ್ದರು.

ಆದರೆ ಆಗಿದ್ದೆ ಬೇರೆ. ಡಿವಿ ಸದಾನಂದಗೌಡರಿಗೆ ಬಂಡಾಯ ಎದ್ದರೆ ಏನಾಗುತ್ತದೆ ಎಂಬ ಬಗ್ಗೆ ಚೆನ್ನಾಗಿ ಅರಿವಿತ್ತು. ಅಲ್ಲದೆ ತುಂಬಾ ಹತ್ತಿರದಿಂದಲೂ ನೋಡಿದ್ದರು. ಇವರು ಸಹದ್ಯೋಗಿ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಜಗದೀಶ್‌ ಶೆಟ್ಟರ್, ವಿಧಾನಸಭಾ ಇಲೆಕ್ಷನ್‌ ವೇಳೆ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಕೈ ಹಿಡಿದರು. ವಿಧಾನಸಭೆಯ ಚುನಾವಣೆಯಲ್ಲಿ ಶೆಟ್ಟರ್‌, ತಮ್ಮ ಶಿಷ್ಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡರು. ಈ ಪಾಠ ಡಿವಿಎಸ್‌ ಕಣ್ಣ ಮುಂದೆ ಹಾದು ಹೋದ ಹಾಗೆ ಇತ್ತು. ಹೀಗಾಗಿ ಅವರು ಕಮಲದ ಮನೆಯಿಂದ ಕಾಲು ಕೀಳುವ ಯೋಚನೆಯನ್ನು ಸಹ ಮಾಡಲಿಲ್ಲ.

Do you know why Sadanand Goudru rebelled and remained silent even though the ticket was lost

ಆದರೆ, ಈಗ ಡಿವಿ ಸದಾನಂದಗೌಡ ಬೇರೆ ಪಕ್ಷಕ್ಕೆ ಹೋದಲ್ಲಿ ಅವರಿಗೆ ಸಿಗುವ ಮರ್ಯಾದೆ ಆದರೂ ಏನು. ಒಂದು ಬಾರಿ ಟಿಕೆಟ್‌ ನೀಡದೇ ಇದಿದ್ದಕ್ಕೆ ಅವರು ಪಕ್ಷವನ್ನ ಬಿಟ್ಟು ಬಿಡುವಷ್ಟು ಕೆಟ್ಟವರಂತೂ ಅಲ್ಲವೆ ಅಲ್ಲ.ಕಟ್ಟಿ ಬೆಳೆಸಿದ ಪಕ್ಷವನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಆಫರ್‌

ಇನ್ನು ಬಿಜೆಪಿಯಿಂದ ಬೆಂಗಳೂರು ಉತ್ತರದಲ್ಲಿ ಟಿಕೆಟ್‌ ಮಿಸ್ ಆಗುತ್ತಾ ಇದ್ದಂತೆ, ಕಾಂಗ್ರೆಸ್ ಡಿವಿ ಸದಾನಂದ್ ಗೌಡರಿಗೆ ಗಾಳ ಹಾಕಲು ಪ್ಲ್ಯಾನ್ ಮಾಡಿತು. ಆದರೆ ಕಾಂಗ್ರೆಸ್‌ ಇವರಿಗೆ ಬೇಕಾದ ಕ್ಷೇತ್ರವನ್ನು ನೀಡಲಿಲ್ಲ ಎಂಬ ಸುದ್ದಿ ಇದೆ. ಡಿವಿ ಸದಾನಂದ್ ಗೌಡ ಕೈ ಹಿಡಿಯುವ ಪ್ರಯತ್ನವನ್ನು ಕೈ ಬಿಟ್ಟರು.

ಎಲ್ಲ ನೀಡಿದ್ದ ಪಕ್ಷ

ಬಿಜೆಪಿ ಪಕ್ಷ ಡಿವಿಎಸ್‌ ಅವರಿಗೆ ಎಲ್ಲವನ್ನೂ ನೀಡಿದೆ. ಕರ್ನಟಕದ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಕೇಂದ್ರ ಸರ್ಕಾರದಲ್ಲಿ ಇವರಿಗೆ ರೈಲ್ವೆ ಇಲಾಖೆಯ ಸಚಿವರನ್ನಾಗಿ ಮಾಡಿತ್ತು. ಅಲ್ಲಿ ತಮ್ಮಗೆ ಘನತೆಗೆ ತಕ್ಕ ಕಾರ್ಯವನ್ನು ಮಾಡದೆ ಹೈಕಮಾಂಡ್ ಕೈಂಗಣ್ಣಿಗೆ ಸದಾನಂದಗೌಡ ಗುರಿಯಾದರು. ನಂತರ ಡಿವಿಎಸ್‌ ಅವರನ್ನು ಸೈಡ್ ಲೈನ್‌ ಮಾಡುತ್ತಲೆ ಬಂದಂತೆ ಕಾಣುತ್ತಿತ್ತು. ಆಗಲೇ ಬಿಜೆಪಿ ಹೈಕಮಾಂಡ್‌ ಇವರಿಗೆ ಟಿಕೆಟ್‌ ನೀಡದಂತೆ ತಡೆಯಲು ಪ್ಲ್ಯಾನ್ ಮಾಡಿಕೊಂಡಿತ್ತು.

Do you know why Sadanand Goudru rebelled and remained silent even though the ticket was lost

ಇದನ್ನೆಲ್ಲಾ ಮೊದಲೇ ಊಹಿಸಿಬಿಟ್ಟಿದ್ದ ಸದಾನಂದ ಗೌಡ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ಮತ್ತೆ ರಾಜನಾಯಕರು ಅವರ ಮನೆಗೆ ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಶ್ರಮಿಸಿದರು. ಅಲ್ಲಿಂದ ಡಿವಿಎಸ್‌ ತಮ್ಮ ನಿರ್ಧಾರದಿಂದ ಹಿಂದೆ ಸರಿದರು.

ಒಂದು ವೇಳೆ ಡಿವಿಎಸ್‌ ಪಕ್ಷವನ್ನು ಬಿಟ್ಟು ಬೇರೆ ಪಕ್ಷಗಳಿಗೆ ಹೋದರೆ ಮುಂದಾಗುವ ಆತಂಕದ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಸದಾನಂದಗೌಡ ಬಿಜೆಪಿಯಲ್ಲಿ ಇದ್ದಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+