• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೆಕ್ಕಿ ಪವನ್ ಸಾವು: Cognizant ಕಂಪನಿ ಹೇಳುವುದೇನು?

By Srinath
|
bangalore-techie-pawan-suicide-cognizant-clarification
ಬೆಂಗಳೂರು‌, ಜೂನ್ 30: ಪಾವಗಡ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಪವನ್‌ ಕುಮಾರ್ ಅಂಜಯ್ಯ (26) ಅಮೆರಿಕದಲ್ಲಿ ಜೂನ್ 19ರಂದು ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪವನ್ ಕೆಲಸ ಮಾಡುತ್ತಿದ್ದ ಬೆಂಗಳೂರಿನ Cognizant Technology Solutions ಕಂಪನಿ ಪತ್ರಿಕಾ ಹೇಳಿಕೆ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಕಂಪನಿಯ ಹೇಳಿಕೆ ಹೀಗಿದೆ:

ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಪವನ್‌ ಕುಮಾರ್ ಅಂಜಯ್ಯ ಅವರ ಸಾವು ದಿನೇ ದಿನೆ ಗೋಜಲುಗೋಜಾಲುತ್ತಿದೆ. ಅಧಿಕ ಪ್ರಮಾಣದಲ್ಲಿ 'ಮಾದಕ ದ್ರವ್ಯ' ಸೇವನೆಯಿಂದಾಗಿ ನ್ಯೂಜೆರ್ಸಿಯ ಡೆಲೆವರ್ ಹೋಟೆಲೊಂದರಲ್ಲಿ ಸಾವಿಗೀಡಾಗಿದ್ದು ಮತ್ತು ಅಮೆರಿಕದ ಮಹಿಳೆಯ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪ ಹಾಗೇ ಕಣ್ಮುಚ್ಚಿಕೊಳ್ಳುವಂತಾಗಿತ್ತು. ಆದರೆ ಪವನ್‌ ಕುಮಾರ್ ಕುಟುಂಬದವರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ಪ್ರಕರಣಕ್ಕೆ ಜೀವ ತುಂಬಿ, ಬೇರೆಯದೇ ಅರ್ಥ ನೀಡಿದರು.

ಪವನ್‌ ಕುಮಾರ್ ಆತ್ಮಹತ್ಯೆ ಪತ್ರ (ಪತ್ರದಲ್ಲೇನಿತ್ತು ಎಂಬುದು ಬಹಿರಂಗಪಡಿಸಿಲ್ಲ) ಬರೆದಿಟ್ಟು ಸತ್ತಿದ್ದಾನೆ ಎಂದು ಅಮೆರಿಕದ ಪೊಲೀಸರು ಹೇಳಿದ್ದರೂ ಪವನ್‌ ಕುಮಾರ್ ಕುಟುಂಬದವರು ಆತ್ಮಹತ್ಯೆ ವಿಷಯವನ್ನು ಒಪ್ಪಿಕೊಳ್ಳಲು ತಯಾರಿಗಿಲ್ಲ. ಅವರು ಪವನ್ ಸಾವಿಗೆ ಉದ್ಯೋಗದಾತ ಕಂಪನಿಯಾದ Cognizant ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಪವನ್ ಶವವನ್ನು ತಕ್ಷಣ ವಾಪಸು ತರಲು ನಮ್ಮ ಕಂಪನಿ ಹೆಚ್ಚು ಶ್ರಮಿಸಲಿಲ್ಲ ಎಂದೂ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರ ನಿಂದಾತ್ಮಕ ಮಾತುಗಳ ಬಗ್ಗೆ Cognizant ಕಂಪನಿಯು ಈ ಮೂಲಕ ಪತ್ರಿಕಾ ಹೇಳಿಕೆ ನೀಡುತ್ತಿದೆ:

ಶುಕ್ರವಾರ ರಾತ್ರಿ ಪವನ್‌ ಕುಮಾರ್ ಕುಟುಂಬದ ಸದಸ್ಯರು Cognizant ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಆಗ ಅವರಿಗೆ ಒಂದು ಅಂಶವನ್ನು ಸ್ಪಷ್ಟಪಡಿಸಲಾಯಿತು. ನ್ಯೂಜೆರ್ಸಿಯ ವೈದ್ಯಕೀಯ ಅಧಿಕಾರಿಗಳ ಕಚೇರಿಯ ಪ್ರಕಾರ ಪವನ್‌ ಕುಮಾರ್ ಅವರ ದೇಹವನ್ನು ವಾಪಸ್ ತರಬೇಕು ಅಂದರೆ ಪವನ್‌ ಕುಟುಂಬದವರು ಸಮ್ಮತಿ ಪತ್ರಕ್ಕೆ ಸಹಿ ಹಾಕಿ, ಅರ್ಜಿಯನ್ನು ಕಳಿಸಿಕೊಡುವುದು ಅನಿವಾರ್ಯ.

ಅಮೆರಿಕದ ಈ ಕಾನೂನು ವಿಷಯದಲ್ಲಿ Cognizant ಕಂಪನಿಯ ಪಾತ್ರವೇನೂ ಇಲ್ಲ. ದುರದೃಷ್ಟವೆಂದರೆ ಪವನ್‌ ಕುಟುಂಬದವರು ಇದನ್ನು ಅರ್ಥೈಸಿಕೊಳ್ಳದೆ, ಅರ್ಜಿಗೆ ಸಹಿ ಹಾಕದಿರುವುದರಿಂದ ಪವನ್ ದೇಹ ವಾಪಸ್ ತರುವುದಕ್ಕೆ ತೊಡಕಾಗಿದೆ.

ಪವನ್ ದೇಹದೊಂದಿಗೆ ನ್ಯೂಜೆರ್ಸಿ ಪೊಲೀಸರ ವರದಿ, ಶವಪರೀಕ್ಷೆ ವರದಿಯೂ ತರಬೇಕು ಎಂದು ಪವನ್‌ ಕುಟುಂಬದವರು ಮತ್ತು ಅವರ ಜತೆ ಬಂದಿದ್ದ ವಕೀಲರು ಷರತ್ತು ಹಾಕಿದ್ದಾರೆ. ಅದಕ್ಕೆ ಸಮ್ಮತಿಸಿದರೆ ಮಾತ್ರ ಪತ್ರಕ್ಕೆ ಸಹಿ ಮಾಡುವುದಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಇನ್ನೂ ಒಂದಷ್ಟು ಪೂರ್ವಷರತ್ತುಗಳನ್ನು ವಿಧಿಸಿದ್ದಾರೆ: ಪವನ್‌ ಕುಮಾರ್ ಮಾಡಿರಿವ ವೈಯಕ್ತಿಕ ಸಾಲದ ವಿವರ, ಆತ್ಮಹತ್ಯೆ ಪತ್ರದ ಪ್ರತಿ, ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಬೇಕು... ಹೀಗೆ ಇನ್ನೂ ಹಲವು ಪೂರ್ವಷರತ್ತುಗಳನ್ನು ಕುಟುಂಬಸ್ಥರು ಹಾಕಿದ್ದಾರೆ. ಆದರೆ Cognizant ಕಂಪನಿಗೆ ಈ ವಿವರಗಳನ್ನೆಲ್ಲ ಪಡೆಯುವುದು ಸಾಧ್ಯವಾಗದು.

ಹಾಗೆಯೇ, ಮತ್ತೊಂದು ಷರತ್ತೂ ಹಾಕಿದ್ದಾರೆ. ಏನಪಾ ಅಂದರೆ ಪವನ್ ಕುಟಂಬದ ಒಬ್ಬ ಸದಸ್ಯ ಮತ್ತು ಒಬ್ಬ ಸಲಹೆಗಾರರನ್ನು ಅಮೆರಿಕಕ್ಕೆ ಕಳಿಸಿಕೊಡಲು ಸಂಪೂರ್ಣ ವೆಚ್ಚ ಭರಿಸಬೇಕು ಎಂದೂ ಕೇಳಿದ್ದಾರೆ. ಇದರ ಹೊರತಾಗಿಯೂ ಸಂಬಂಧಪಟ್ಟ ಅಮೆರಿಕದ ಹಲವು ಅಧಿಕಾರಿಗಳನ್ನು ಸಂಪರ್ಕಿಸಿದೆವು. ಆದರೆ ಅದು ಫಲ ನೀಡಲಿಲ್ಲ.

ಆದ್ದರಿಂದ ಪವನ್‌ ಕುಟುಂಬದವರು ವಿಧಿಸಿರುವ ಪೂರ್ವಷರತ್ತುಗಳನ್ನು ಪೂರೈಸುವುದು ನಮ್ಮ ಕೈಯಲ್ಲಿಲ್ಲ ಎಂಬುದನ್ನು Cognizant ಕಂಪನಿ ಸ್ಪಷ್ಟಪಡಿಸುತ್ತದೆ. ಪವನ್ ದೇಹವನ್ನು ವಾಪಸು ತರಲು ಕಂಪನಿಯು ಶಕ್ತಿಮೀರಿ ಸಹಕರಿಸುತ್ತದೆ. ಆದ್ದರಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪವನ್‌ ಕುಟುಂಬದವರು ತಕ್ಷಣ ಒಪ್ಪಿಗೆಯ ಪತ್ರಕ್ಕೆ ಸಹಿ ಹಾಕಿದ್ದೇ ಆದರೆ ಕಂಪನಿಯ ವೆಚ್ಚದಲ್ಲೇ ಪವನ್ ದೇಹವನ್ನು ವಾಪಸ್ ತರಲು ಕಂಪನಿ ಸದಾ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸುತ್ತೇವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಟೆಕ್ಕಿ ಸುದ್ದಿಗಳುView All

English summary
While Cognizant is doing what it can to help the family members get what Pawan Kumar is entitled to given the circumstances of his death, the company find many of the demands are simply not within their control. Cognizant has done and is doing everything in their power to assist the family with the return of the body - In the back drop of the suicide case of the Bangalore-based techie from Cognizant Pawan Kumar Anjaiah turning up to be a rather murky affair, Cognizant makes a statement.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more