ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾವಗಡ ಟೆಕ್ಕಿ ಪವನ್ ಅಮೆರಿಕದಲ್ಲಿ ನಿಗೂಢ ಸಾವು

By Srinath
|
Google Oneindia Kannada News

bangalore-cognizant-techie-pawan-dead-us-hotel
ಬೆಂಗಳೂರು‌, ಜೂನ್ 27: ಮೂಲತಃ ಪಾವಗಡದವರಾದ ಸಾಫ್ಟ್‌ವೇರ್ ಇಂಜಿನಿಯರ್ ಪವನ್‌ ಕುಮಾರ್ ಅಂಜಯ್ಯ ಎಂಬ ಯುವಕ ಅಮೆರಿಕ ನ್ಯೂಜೆರ್ಸಿಯ ಡೆಲೆವರ್ ನಲ್ಲಿ ಜೂನ್ 19ರಂದು ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ವರದಿಯಾಗಿದೆ.

ನಗರದ ಕಾಗ್ನಿಜೆಂಟ್ ಟೆಕ್ನಾಲಜಿಸ್ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪವನ್‌ ಕುಮಾರ್, ಕಂಪನಿ ಕೆಲಸದ ನಿಮಿತ್ತ 2011ರ ಫೆಬ್ರುವರಿಯಲ್ಲಿ ಅಮೆರಿಕಕ್ಕೆ ಹೋಗಿದ್ದರು.

ಪವನ್ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. 'ಬೆಂಗಳೂರಿನಲ್ಲಿರುವ Cognizant Technology Solutions ಕಂಪನಿಯ ಪ್ರವೀಣ್‌ ಜೋಷಿ ಎಂಬುವವರು ಪವನ್‌ ತಂದೆಗೆ ಜೂನ್ 20ರಂದು ಕರೆ ಮಾಡಿ ಪವನ್‌ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

'ನಮ್ಮ ಪುತ್ರನ ಸಾವಿನ ಬಗ್ಗೆ ಕಂಪನಿಯವರು ಹೆಚ್ಚಿನ ವಿವರ ನೀಡುತ್ತಿಲ್ಲ. ಶವವನ್ನು ದೇಶಕ್ಕೆ ತರಲು ಕಂಪನಿಯವರು ಸಹಕರಿಸುತ್ತಿಲ್ಲ. ಅಮೆರಿಕದಲ್ಲಿರುವ ಮಗನ ಶವವನ್ನು ನಗರಕ್ಕೆ ತರಲು ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಾಗುತ್ತಿಲ್ಲ' ಎಂದು ಪವನ್‌ ತಂದೆ-ತಾಯಿ ಅಳಲು ತೋಡಿಕೊಂಡಿದ್ದಾರೆ.

26 ವರ್ಷದ ಪವನ್‌ ಅವರ ತಂದೆ, ತಾಯಿ ಅಂಜಪ್ಪ ಹಾಗೂ ರಂಗರತ್ನಮ್ಮ ಪ್ರಸ್ತುತ ಸಂಜಯನಗರದಲ್ಲಿ ವಾಸವಾಗಿದ್ದಾರೆ. ತುಮಕೂರು ಜಿಲ್ಲೆ ಪಾವಗಡದ ಅಂಜಪ್ಪ-ರಂಗರತ್ನಮ್ಮ ದಂಪತಿಗೆ ಪವನ್ ಮತ್ತು ಗುಣಶೀಲಾ ಎಂಬ ಇಬ್ಬರ ಮಕ್ಕಳು. ಗುಣಶೀಲಾ ಶಾಲಾ ಶಿಕ್ಷಕಿಯಾಗಿದ್ದಾರೆ.

'ಜೂನ್ 15ರಂದು ಕಡೆಯ ಬಾರಿಗೆ ಕರೆ ಮಾಡಿದ್ದ. ಪವನ್ ಜುಲೈ ಮೊದಲ ವಾರದಲ್ಲಿ ದೇಶಕ್ಕೆ ವಾಪಸ್ ಬರಬೇಕಿತ್ತು. ಆತನ ಸಾವಿನ ಬಗ್ಗೆ ವಿವರ ನೀಡುವಂತೆ ಮನವಿ ಮಾಡಿದರೂ ಕಂಪನಿಯವರು ಸ್ಪಂದಿಸುತ್ತಿಲ್ಲ' ಎಂದು ಗುಣಶೀಲಾ ದೂರಿದ್ದಾರೆ.

ಆದರೆ 'ಪವನ್ ಕುಟುಂಬದವರನ್ನು ಭೇಟಿ ಮಾಡಿ ಕಾನೂನು ನೆರವು ನೀಡುವುದಾಗಿ ಹೇಳಿದ್ದೇವೆ. ಆತನ ಶವವನ್ನು ದೇಶಕ್ಕೆ ತರಲು ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದೇವೆ. ಆದರೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ' ಎಂದು ಕಾಂಗ್ನಿಜೆಂಟ್ ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪವನ್ ಸಾವಿಗೆ ಪ್ರೇಮ-ಪ್ರೀತಿ ಕಾರಣವೇ?

English summary
Bangalore Cognizant techie Pawan Kumar (26) allegedly committed suicide in US New Jersey hotel on June 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X