ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಕಾರು ರಿಜಿಸ್ಟರೇ ಆಗಿಲ್ಲ; ಹೆಲಿಕಾಪ್ಟರ್ ಠಾಣೆಯಲ್ಲಿ ಠಿಕಾಣಿ

By Srinath
|
Google Oneindia Kannada News

janardhan-reddy-car-registration-not-done
ಬಳ್ಳಾರಿ, ಜ. 20: ಹೌದು ಇದು ಸಿಬಿಐನ ಸತ್ಯಶೋಧನೆ. ಅಸಲಿಗೆ ಜನಾರ್ಧನ ರೆಡ್ಡಿಯ ಒಂದು ಕಾರಿಗೆ ರಿಜಿಸ್ಟ್ರೇಶನ್ ಮಾಡಿಸಿಯೇ ಇಲ್ಲ. ಇನ್ನು ಅವರ ಹೆಲಿಕಾಪ್ಟರ್ ಬಳ್ಳಾರಿ ಠಾಣೆಯಲ್ಲಿ ನಾಲ್ಕೈದು ದಿನಗಳಿಂದ ಠಿಕಾಣಿ ಹೂಡಿದೆ. ಈ ಮಧ್ಯೆ, ಬೆಲ್ 407 ಹೆಲಿಕಾಪ್ಟರ್ ಅನ್ನು ರೆಡ್ಡಿ ಖಾಸಗಿಯಾಗಿ ಬಳಸುತ್ತಿದ್ದರಾದರೂ ಅದನ್ನು ಓಬಳಾಪುರಂ ಮೈನಿಂಗ್ ಕಂಪನಿ ಪ್ರೈ. ಲಿ. (OMCPL) ಹೆಸರಿನಲ್ಲಿ ನೋಂದಾಯಿಸಿದ್ದರು. ಅದೀಗ ಜಕ್ಕೂರಿನ ಡೆಕ್ಕನ್ ಚಾರ್ಟರ್ಸ್ ಲಿಮಿಟೆಡ್ ಜೋಪಾನವಾಗಿ ನೋಡಿಕೊಳ್ಳುತ್ತಿದೆ.

ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರ ವೈಭವೋಪೇತ, ಐಷಾರಾಮಿ ಕಾರುಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಆದರೆ ಅವುಗಳ ಒಳಗುಟ್ಟುಗಳು ಹೀಗೆ ಸಿಬಿಐ ತನಿಖೆಯಿಂದ ಒಂದೊಂದಾಗಿ ಹೊರಬಂದಿವೆ.

ಇಷ್ಟಕ್ಕೂ ರೆಡ್ಡಿ ವಿಚಾರಣಾಧೀನ ಕೈದಿಯಾಗಿ ಹೈದರಾಬಾದಿನ ಚಂಚಲಗೂಡ ಜೈಲು ಸೇರಿಕೊಂಡ ಬಳಿಕ ಅವೆಲ್ಲ ಯಾರ ಬಳಿಯಿವೆ? ಎಂದು ಸಹಜವಾಗಿಯೇ ಕುತೂಹಲಕಾರಿ ಪ್ರಶ್ನೆ ಏಳುತ್ತದೆ. ಸೆ. 5ರಂದು ರೆಡ್ಡಿಯನ್ನು ಬಂಧಿಸಿದ ಬಳಿಕ ಅವರ ಅನೇಕ ಐಷಾರಾಮಿ ಕಾರುಗಳು, ಹೆಲಿಕಾಪ್ಟರ್ ಸಿಬಿಐ ಸುಪರ್ದಿಯಲ್ಲಿವೆ.

ಇದೆಲ್ಲ ಸರಿ. ಆದರೆ ಸಿಬಿಐ ಕೋರ್ಟಿನಲ್ಲಿ ದಾಖಲಿಸಿರುವ ಚಾರ್ಜ್ ಷೀಟ್ ಪ್ರಕಾರ ರೆಡ್ಡಿ ಬಳಿಯಿದ್ದ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಮತ್ತು ಮಸೇರಟಿ ವಿದೇಶಿ ಕಾರುಗಳನ್ನು ಜಫ್ತಿ ಮಾಡಲಾಗಿದೆ. ಕುತೂಹಲದ ಸಂಗತಿಯೆಂದರೆ ರೋಲ್ಸ್ ರಾಯ್ಸ್ ಕಾರಿಗೆ KA-34-C-01 ಬಳ್ಳಾರಿಯ ನೋಂದಣಿ ಸಂಖ್ಯೆ ತೂಗುಹಾಕಲಾಗಿದೆ. ಆದರೆ ಮೂರು ಕೋಟಿಯ ಮಸೇರಟಿ ಕಾರು ನೋಂದಣಿಯೇ ಆಗಿಲ್ಲ.

ಅದೇನು ಅದನ್ನು ಅವರು ಇನ್ನೂ ಬಳಸಿಯೇ ಇಲ್ಲವೋ ಅಥವಾ ನೋಂದಣಿ ಸಂಖ್ಯೆಯೇ ಇಲ್ಲದೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ಓಡಿಸುತ್ತಿದ್ದರೋ ಆ ಭಗವಂತನೇ ಬಲ್ಲ. ಇನ್ನೂ ಕುತೂಹಲದ ಸಂಗತಿಯೆಂದರೆ ಈ ಎರಡೂ ವೈಭವೋಪೇತ ಕಾರುಗಳನ್ನು ಸೆಕ್ಯುರಿಟಿ ಕಾರಣಗಳಿಂದಾಗಿ ಹೈದರಾಬಾದಿನಲ್ಲಿ ಕೋರ್ಟಿಗೆ ಹಾಜರುಪಡಿಸಲು ಸಾಧ್ಯವಾಗದು. ಆದ್ದರಿಂದ ಅವು ಬಳ್ಳಾರಿ ಪೊಲೀಸ್ ಠಾಣೆಯಲ್ಲಿಯೇ ಠಿಕಾಣಿ ಹೂಡಿವೆ ಎಂದು ಸಿಬಿಐ ಕೋರ್ಟಿಗೆ ತಿಳಿಸಿದೆ.

ತುಸು ಹೆಚ್ಚು ಎನಿಸುವಷ್ಟು ರೆಡ್ಡಿಗೆ ಕಾರ್ ಹುಚ್ಚು ಇತ್ತು ಎಂಬುದು ಲೋಕ ಚರ್ಚಿತ ವಿಷಯ. ಸಣ್ಣಪುಟ್ಟದ್ದು ಬಿಟ್ಟು ಹಡಗಿನಂತಹ ದೊಡ್ಡ ದೊಡ್ಡ ಕಾರುಗಳಾದ ರೋಲ್ಸ್ ರಾಯ್ಸ್ ಫ್ಯಾಂಟಮ್, ಮಸೇರಟಿ, ಕಾಂಟಿನೆಂಟಲ್ ಜಿಟಿ ಕುಪಿಯಾ, ರೇಂಜ್ ರೋವರ್ ಸ್ಪೋರ್ಟ್ಸ್ ಕಾರ್, ಮರ್ಸಿಡಿಸ್ ಬೆಂಜ್ ಲಿಮೊಸೈನ್, ಟೊಯೋಟಾ ಲ್ಯಾಂಡ್ ಕ್ರೂಯಿಸರ್, ಆಡಿ, ಜತೆಗಿರಲಿ ಅಂತ ಹತ್ತಾರು ಮಿತ್ಸುಬಿಷಿ ಪೇಜೇರೋಸ್.

ಮರೆತ ಮಾತು: ತಮ್ಮ ರಾಜಕೀಯ ಮಾರ್ಗದಲ್ಲಿ ಪಥಸಂಚಲನಕ್ಕಾಗಿ ಪಂಚ ಕೋಟಿ ರೂ.ಗಳ ಹಳೆಯ 'ರುಕ್ಮಿಣಿ' ವೋಲ್ವೊ ಬಸ್ ಇದೆ. ಇದಲ್ಲದೆ ಒಂದು ಡಜನ್ನಿಗೂ ಅಧಿಕ ಸಾಧಾರಣ ಬಸ್ ಗಳೂ ಇವೆ. ಅಂದಹಾಗೆ ಸಿಬಿಐ ಅಧಿಕಾರಿ ವಿವಿ ಲಕ್ಷಿನಾರಾಯಣ ಅವರು ರೆಡ್ಡಿಯನ್ನು ಬಂಧಿಸಿದ ದಿನ ಅವರ ಕುಠೀರ ಮನೆಯಿಂದ 57.89 ಕೆಜಿ ಚಿನ್ನದ ಸಾಮಾನುಗಳನ್ನು ಜಫ್ತಿ ಮಾಡಲಾಗಿದೆ.

English summary
Mining baron Gali Janardhan Reddy’s collection of luxury cars would make any millionaire go green with envy. But one among the Reddy's cars Rolls Royce bears a Bellary town registration number— KA-34-C-01— while the Maserati does not have a number!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X