ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸೆಸ್ಸೆಲ್ಸಿ ದಂಡಯಾತ್ರೆ: 6 ಬಾರಿ ಮಾತ್ರ ಅವಕಾಶ

By Mahesh
|
Google Oneindia Kannada News

Vishveshwar Hegde Kageri on SSLC Supplementary Exams
ಬೆಂಗಳೂರು, ಫೆ.21: ಕೆಲವರು 10 ರಿಂದ 15 ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ದಂಡಯಾತ್ರೆ ನಡೆಸಿದ ಸಾಧನೆ ಮೆರೆದವರಿದ್ದಾರೆ. ಅಪ್ಪ ಮಗ ಒಟ್ಟಿಗೆ ಎಸೆಸ್ಸೆಲ್ಸಿ ಪರೀಕ್ಷೆ ಬರೆದು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿರುವ ಅಭ್ಯರ್ಥಿಗಳಿಗೆ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದೆ. ಸಪ್ಲಿಮೆಂಟರಿ ಬರೆಯುವ ಅಭ್ಯರ್ಥಿಗಳಿಗೆ ಕೇವಲ ಆರು ಬಾರಿ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಆರು ಬಾರಿ ಸಂಪ್ಲಿಮೆಂಟರಿ ಪರೀಕ್ಷೆಗೆ ಹಾಜರಾತಿ ಫೇಲಾದವರು, ಏಳನೇ ಬಾರಿ ಪರೀಕ್ಷೆಗೆ ಕುಳಿತುಕೊಳ್ಳಲು ಇಚ್ಛಿಸಿದರೆ ಅಂಥ ಅಭ್ಯರ್ಥಿಗಳು 'ಎಲ್ಲಾ ವಿಷಯಗಳ ಪರೀಕ್ಷೆಗಳಿಗೆ ಹಾಜರಾಗಬೇಕು" ಎಂಬ ಕ್ರಮ ಜಾರಿಗೊಳಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ" ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಇಲ್ಲಿ ತನಕ ಎಸೆಸ್ಸೆಲ್ಸಿ ಪ್ರಮಾಣ ಪತ್ರ ಪಡೆಯಲು ಪರೀಕ್ಷೆ ಎಷ್ಟು ಬಾರಿ ಬರೆಯಬೇಕೆಂಬ ಷರತ್ತು ವಿಧಿಸಿರಲಿಲ್ಲ. ಹಾಗಾಗಿ ಕೆಲವು ಅಭ್ಯರ್ಥಿಗಳು 15 ಬಾರಿ ಪರೀಕ್ಷೆ ಕುಳಿತುಕೊಂಡಿರುವ ಉದಾಹರಣೆಗಳಿವೆ. ಈ ರೀತಿ ಮೆಟ್ರಿಕ್ ಪರೀಕ್ಷೆಯಲ್ಲಿ ಕಾಲಹರಣ ತಡೆಯಲು ಈ ಕ್ರಮ ಅನುಸರಿಸಲಾಗಿದೆ. ಆರು ಬಾರಿ ಪ್ರಯತ್ನಿಸಿ ಎಲ್ಲ
ವಿಷಯಗಳಲ್ಲಿ ತೇರ್ಗಡೆಯಾಗಬೇಕು. ಇಲ್ಲದಿದ್ದಲ್ಲಿ ಏಳನೇ ಬಾರಿಗೆ ಎಲ್ಲ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಕಾಗೇರಿ ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

2011ರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಎಪ್ರಿಲ್ ಒಂದರಿಂದ ಆರಂಭಗೊಂಡು 13ರವರೆಗೆ ನಡೆಯಲಿದೆ. ಈ ಬಾರಿ 76,752 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪರೀಕ್ಷಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ಬಾರಿ 58,960 ಅಭ್ಯರ್ಥಿಗಳುಮೆಟ್ರಿಕ್ ಪರೀಕ್ಷೆ ಬರೆದಿದ್ದರು.

English summary
Karnataka Secondary Education Board has announced the SSLC examination schedule for 2011. The exams begin from 1 April 2011 and ends on April 13th. SSLC Supplementary Exams candidates have to clear all subject in 6 trails, else they have to write all the subjects again said Primary education minister Vishweshwar Hegde Kageri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X