• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನಲ್ಲಿ ವಿಕಿಪೀಡಿಯ 10ರ ಸಂಭ್ರಮ

By Mahesh
|

ಮೈಸೂರು, ಜ.13: ಪ್ರಪಂಚದಾದ್ಯಂತ ಮುಕ್ತಜ್ಞಾನ ಹಂಚಿಕೆಯ ವಿಕಿಪೀಡಿಯ ಬಳಕೆದಾರರು ವಿಕಿಪೀಡಿಯಾದ ಹತ್ತನೆಯ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ. ಭಾರತದಲ್ಲೂ ಕೆಲವು ನಗರಗಳಲ್ಲಿ ಈ ಆಚರಣೆ ನಡೆಯಲಿದೆ. ಮೈಸೂರು ನಗರವೂ ಈ ಪಟ್ಟಿಯಲ್ಲಿದೆ. ಮೈಸೂರಿನಲ್ಲಿ ವಿಕಿಪೀಡಿಯಾದ ಹತ್ತನೆಯ ವಾರ್ಷಿಕೋತ್ಸವ ಆಚರಣೆಯನ್ನು ಜನವರಿ 16 ರಂದು ಹಮ್ಮಿಕೊಳ್ಳಲಾಗಿದೆ.

ಪ್ರಪಂಚಾದ್ಯಂತ ಮುಕ್ತಜ್ಞಾನಹಂಚಿಕೆಯ ವಿಕಿಪೀಡಿಯ ಬಳಕೆದಾರರು ಇದರ ಹತ್ತನೆಯ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ. ಭಾರತದಲ್ಲೂ ಕೆಲವು ನಗರಗಳಲ್ಲಿ ಈ ಆಚರಣೆ ನಡೆಯಲಿದೆ. ಮೈಸೂರು ನಗರವೂ ಈ ಪಟ್ಟಿಯಲ್ಲಿದೆ.

ಮೈಸೂರಿನ ಮಾನಸಗಂಗೋತ್ರಿಯ ಪಕ್ಕದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಜೆಎಸ್‌ಎಸ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಟ್ಟಡದಲ್ಲಿ ಜನವರಿ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ತನಕ ಈ ಕಾರ್ಯಕ್ರಮ ಜರುಗಲಿದೆ. ವಿವಿಧ ಕ್ಷೇತ್ರಗಳ ಹಲವು ಮಂದಿ ವಿಕಿಪೀಡಿಯ ಮತ್ತು ಅದರ ಬಳಕೆ ಬಗ್ಗೆ ಮಾತನಾಡಲಿದ್ದಾರೆ ಮತ್ತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕನ್ನಡ ವಿಕಿಪೀಡಿಯ ಬಗ್ಗೆ ಕೂಡ ಪ್ರತ್ಯೇಕ ಭಾಷಣ ಮತ್ತು ಪ್ರಾತ್ಯಕ್ಷಿಕೆ ಏರ್ಪಾಡು ಮಾಡಲಾಗಿದೆ.

ವಿಕಿಪೀಡಿಯಾ ಬಳಸುವುದು ಹೇಗೆ, ಅದಕ್ಕೆ ಮಾಹಿತಿ ಸೇರಿಸುವುದು ಹೇಗೆ, ಇತರರು ಸೇರಿಸಿದ ಮಾಹಿತಿಯನ್ನು ತಿದ್ದುವುದು ಹೇಗೆ, ಕನ್ನಡದಲ್ಲಿ ಮಾಹಿತಿ ಸೇರಿಸುವುದು ಹೇಗೆ - ಈ ಎಲ್ಲ ಪ್ರಶ್ನೆಗಳಿಗೆ ಪರಿಣತರು ಪ್ರಾತ್ಯಕ್ಷಿಕೆ ಮೂಲಕ ಉತ್ತರ ನೀಡಲಿದ್ದಾರೆ.

ಮೈಸೂರು ವಿಕಿ ಕಾರ್ಯಕ್ರಮ ವಿವರಗಳು:

ಸ್ಥಳ: ಜೆಎಸ್‌ಎಸ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಟ್ಟಡ, ಮಾನಸ ಗಂಗೋತ್ರಿ ಬಳಿ
ದಿನಾಂಕ : ಜನವರಿ 16, 2011
ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ನೋಂದಣಿಗಾಗಿ ಸಂಪರ್ಕಿಸಿ : ವಿನಯ್ (96320 44188) ಅಥವಾ ರಾಕೇಶ್ (93421 19667)

ಕಾರ್ಯಕ್ರಮದಲ್ಲಿ ಬಾಗವಹಿಸುವ ಖ್ಯಾತನಾಮರು: ಪ್ರೊ.ಚಿದಾನಂದ ಗೌಡ, ಪ್ರೊ. ಯೋಗಾನಂದ, ಪ್ರೊ. ಎಂ.ಎಸ್. ಶ್ರೀಧರ್, ಪ್ರೊ. ಓ.ಎಲ್.ಎನ್. ಸ್ವಾಮಿ, ಡಾ. ಯು.ಬಿ. ಪವನಜ

ಹೆಚ್ಚಿನ ವಿವರಗಳಿಗೆ ಮೈಸೂರು ವಿಕಿ ತಾಣ ವೀಕ್ಷಿಸಿ

ವಿಕಿಪೀಡಿಯ ಬಗ್ಗೆ :ವಿಕಿಮೀಡಿಯಾ ಫೌಂಡೇಶನ್‌ನ ಸಹಾಯದಿಂದ ನಡೆಯುತ್ತಿರುವ ವಿಕಿಪೀಡಿಯ ಒಂದು ಮುಕ್ತ ಸಹಯೋಗಿ ಬಹುಭಾಷಾ ವಿಶ್ವಕೋಶ. ಸುಮಾರು 17 ಮಿಲಿಯ ಲೇಖನಗಳು ಇದರಲ್ಲಿವೆ. ಇಂಗ್ಲಿಶ್ ಭಾಷೆ ಒಂದರಲ್ಲೇ ಸುಮಾರು 3.5 ಮಿಲಿಯ ಲೇಖನಗಳಿವೆ.

ಈ ಎಲ್ಲ ಲೇಖನಗಳನ್ನು ಪ್ರಪಂಚಾದ್ಯಂತ ಚೆದುರಿಹೋಗಿರುವ ಸ್ವಯಂಸೇವಕರು ಬರೆದಿರುವುದು ಮಾತ್ರವಲ್ಲ ಈ ಲೇಖನಗಳನ್ನು ಯಾರು ಬೇಕಾದರು ತಿದ್ದಬಹುದು ಮತ್ತು ನವೀಕರಿಸಬಹುದು. ವಿಕಿಪೀಡಿಯವನ್ನು ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸಾಂಗರ್ ಅವರುಗಳು 2001 ರಲ್ಲಿ ಪ್ರಾರಂಭಿಸಿದರು. ಈಗ ಇದು ಅಂತರಜಾಲದ ಎಲ್ಲ ತಾಣಗಳಲ್ಲಿ ಜನಬಳಕೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ. ಅಂತರಜಾಲದಲ್ಲಿರುವ ಮಾಹಿತಿ ಆಕರವಾಗಿ ಇದು ಪ್ರಥಮ ಸ್ಥಾನದಲ್ಲಿದೆ. [ಮೈಸೂರು]

English summary
Wikipedia 10th anniversary celebrations at Mysore on Jan 16, at JSS center for management studies building, SJRC, near SJCE, Manasa Gangotri. Prof. Chidananda gowda, Prof, Yogananda, Prof OLN Swamy, Dr. UB Pavanaja and others are some of the dignitaries attending the meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X