• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೇಜಾವರರ ನೇತೃತ್ವದಲ್ಲಿ ರಾಮಮಂದಿರ

By Mrutyunjaya Kalmat
|
Ashok Singhal
ಉಡುಪಿ, ಡಿ. 11 : ಅಯೋಧ್ಯೆ ಸಂಪೂರ್ಣ ರಾಮಜನ್ಮಭೂಮಿಯಾಗಿದೆ. ಮೇರುಸಂತ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣ ನಿರ್ಮಿಸಲಾಗುವುದು. ಈ ಬಗ್ಗೆ ಡಿ.12 ರಂದು ನವದೆಹಲಿಯಲ್ಲಿ ಜನಜಾಗೃತಿ ಕಾರ್ಯಕ್ರಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯ ಕಾರ್ಯದರ್ಶಿ ಅಶೋಕ್ ಸಿಂಘಾಲ್ ಹೇಳಿದ್ದಾರೆ.

ಶುಕ್ರವಾರ (ಡಿ10) ಇಲ್ಲಿ ಪೇಜಾವರ ಸ್ವಾಮಿಜಿಗಳಿಗೆ ನಡೆದ ವಿರಾಟ್ ಅಭಿನಂದನೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಿಂಘಾಲ್, ಪೇಜಾವರಶ್ರೀಗಳು ಹಿಂದೂ ಸಂಘಟನೆಗಳ ಉಸಿರಾಗಿದ್ದಾರೆ ಮತ್ತು ದೊಡ್ಡ ಶಕ್ತಿಯಾಗಿದ್ದಾರೆ. ವಿಎಚ್ ಪಿ ಆರಂಭದಿಂದ ಇಂದಿನವರೆಗೂ ಸಂಘದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಸೋನಿಯಾ ಗಾಂಧೀ ನೇತೃತ್ವದ ಕೇಂದ್ರ ಸರಕಾರ ರಾಮಸೇತುವೆಯನ್ನು ಒಡೆದು ಹಾಕಲು ಮುಂದಾಯಿತು. ಬಹುಸಂಖ್ಯಾತ ಹಿಂದೂಗಳಿಗೆ ಕಿರುಕುಳ ನೀಡುವ ಮೂಲಕ ಸಂಘಟನೆ ಶಕ್ತಿ ಕುಂದಿಸುವ ಕೆಲಸಕ್ಕೆ ಕೈಹಾಕಿದೆ. ದೇಶಭಕ್ತ ಆರ್ಎಸ್ಎಸ್ ಸಂಘಟನೆಯನ್ನು ದೇಶದ್ರೋಹಿ ಸಂಘಟನೆ ಜೊತೆ ತುಳುಕು ಹಾಕುವ ಕೆಲಸ ಮಾಡಿತು, ಇದಕ್ಕೆಲ್ಲಾ ಕಾಲ ಉತ್ತರಿಸಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ರಥಬೀದಿಯಲ್ಲಿ ವಿಶ್ವಕಲ್ಯಾಣ ದೃಷ್ಟಿಯಿಂದ ಹಮ್ಮಿಕೊಂಡಿದ್ದ ಮಹಾಯಾಗ 108 ಯಜ್ಞಕುಂಡಗಳಲ್ಲಿ ಶುಕ್ರವಾರ ಬೆಳಿಗ್ಗೆ ಮಂತ್ರಘೋಷಗಳ ನಡುವೆ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ 11.30ಕ್ಕೆ ಪೂರ್ಣಾಹುತಿಯೊಂದಿಗೆ ಸಮಾಪ್ತಿಗೊಂಡಿತು. 450ಕ್ಕೂ ಅಧಿಕ ವೈದಿಕರು ಅಷ್ಟಮಹಾಮಂತ್ರ, ಧನ್ವಂತರಿ ಹಾಗೂ ಷಡಕ್ಷರ ಮಂತ್ರ ಪಠಿಸಿ, ಪ್ರತಿ ಕುಂಡಕ್ಕೂ 1,000 ಆಹುತಿಗಳನ್ನು ಹಾಕಿ ಹೋಮ ನೆರವೇರಿಸಿದರು.

ಇಂದು ಆಡ್ವಾಣಿ ಭೇಟಿ : ಪೇಜಾವರ ಶ್ರೀಗಳ ವಿರಾಟ್ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಶನಿವಾರ (ಡಿ 11) ಮಧ್ಯಾಹ್ನ ಉಡುಪಿಗೆ ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ನಗರದ ಕುಕ್ಕಿಕಟ್ಟೆಯಲ್ಲಿನ ಶ್ರೀಕೃಷ್ಣ ಉಚಿತ ಸಾರ್ವಜನಿಕ ವಿದ್ಯಾರ್ಥಿ ನಿಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, 5 ಗಂಟೆಗೆ ಕೃಷ್ಣ ಮಠದ ಬಳಿ ನಡೆಯುವ ವಿರಾಟ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thousands of Rambhaktas will gather at Ramlila Maidan in New Delhi on December 12 to pressurise the Central government for clearing hurdles in reconstruction of Sri Ram temple in Ayodhya, says VHP leader Ashok Singhal in Udupi on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more