• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಬೆಂಗಳೂರು ಪ್ರಶಸ್ತಿಗೆ ಹೆಸರನ್ನು ಸೂಚಿಸಿ

By Mahesh
|

ಬೆಂಗಳೂರು. ನ. 29 : ಬೆಂಗಳೂರಿನ ಹಿತಕ್ಕಾಗಿ ದುಡಿದ ವ್ಯಕ್ತಿಗಳು, ಸ್ವಯಂ ಸೇವಾಸಂಸ್ಥೆಗಳು, ಶಾಲೆಗಳು ಹೆಗೆ ಹಲವಾರು ಕ್ಷೇತ್ರಗಳಿಂದ "ನಮ್ಮ ಬೆಂಗಳೂರು ಪ್ರಶಸ್ತಿ 2010' ನಾಮ ನಿರ್ದೇಶನವನ್ನು ಸೂಚಿಸಲು ನಮ್ಮ ಬೆಂಗಳೂರು ಫೌಂಡೇಷನ್ ಟ್ರಸ್ಟಿ ಹಾಗೂ ರಾಜ್ಯಸಭಾ ರಾಜೀವ್ ಚಂದ್ರಶೇಖರ್ ಅವರು ಆಹ್ವಾನಿಸಿದ್ದಾರೆ. ಡಿ.1 ರಿಂದ 15 ರವರೆಗೆ ಪ್ರಶಸ್ತಿಗಾಗಿ ಅರ್ಹರಾದವರನ್ನು ಸೂಚಿಸಬಹುದು. ಆಯ್ಕೆ ಮಂಡಳಿ ಪರಿಶೀಲನೆ ನಂತರ ಆಯ್ಕೆಗೊಂಡವರ ಹೆಸರುಗಳನ್ನು ಪ್ರಕಟಿಸಲಾಗುವುದು. ಡಿ.22 ರಂದು ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ರಾಜೀವ್ ಹೇಳಿದರು.

ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಉದ್ಯಮಿಗಳು, ಸ್ವಯಂ ಸೇವಾ ಸಂಘಗಳು, ಎನ್ ಜಿಒಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ತೋರಿರುವ ಜನ ಸಮಾನ್ಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ವರ್ಷ ಸುಮಾರು 4,000 ಜನ ಹೆಸರನ್ನು ಪ್ರಶಸ್ತಿಗೆ ಸೂಚಿಸಲಾಗಿತ್ತು. ನಗರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ವೈದ್ಯರು, ಶಿಕ್ಷಕಿಯರು, ಪೌರ ಸೇವಕರು, ಸಮಾಜ ಸೇವಕರು ಹೀಗೆ ಹಲವು ವ್ಯಕ್ತಿಗಳು, ಸಂಘ ಸಂಸ್ಥೆಗಳು ಎಲೆ ಮರೆ ಕಾಯಿಯಂತೆ ದುಡಿಯುತ್ತಿರುವವರನ್ನು ಮುಖ್ಯ ವಾಹಿನಿಗೆ ಪರಿಚಯಿಸುವುದು ನಮ್ಮ ಬೆಂಗಳೂರು ಫೌಂಡೇಷನ್ ಉದ್ದೇಶ. ಬೆಂಗಳೂರನ್ನು ಉತ್ತಮ ನಗರವನ್ನಾಗಿಸಲು ನಾವು ಹಮ್ಮಿಕೊಂಡಿರುವ ಈ ಕಾಯಕಕ್ಕೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತಿಮುಖ್ಯ ಎಂದು ರಾಜೀವ್ ಅಭಿಪ್ರಾಯಪಟ್ಟರು.

ಆಯ್ಕೆ ಸಮಿತಿ : ಪ್ರಶಸ್ತಿಗೆ ಅರ್ಹರಾದವರನ್ನು ಆಯ್ಕೆ ಮಾಡಲು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕೆಎಸ್ ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ, ನಿವೃತ್ತ ಐಎಎಸ್ ಅಧಿಕಾರಿ ಡಾ. ಎ ರವೀಂದ್ರ ಸೇರಿದಂತೆ 21 ಜನ ಗಣ್ಯರ ಸಮಿತಿ ರಚಿಸಲಾಗಿದೆ.

ಇದೇ ವೇಳೆ " ನಮ್ಮ ಬೆಂಗಳೂರು ಪ್ರಶಸ್ತಿ " ಜೊತೆಗೆ "ನಮ್ಮ ಬೆಂಗಳೂರಿಗ" ಎಂಬ ವಿಶಿಷ್ಟ ಪ್ರಶಸ್ತಿಯನ್ನು ನಗರದ ಒಳಿತಿಗಾಗಿ ದುಡಿಯುವ ವ್ಯಕ್ತಿಗೆ ನೀಡಲಾಗುವುದು ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಯನ್ನು ಹೊಂದಿರುತ್ತದೆ. ಇನ್ನೇಕೆ ತಡ, ಕೆಳಗಿನ ವಿಭಾಗಗಳಲ್ಲಿ ನಿಃಸ್ವಾರ್ಥದಿಂದ ಕರ್ತವ್ಯ ನಿರ್ವಹಿಸುತ್ತಿರುವವರ ಪ್ರಶಸ್ತಿಗೆ ಅರ್ಹರಾದ ನಿಮ್ಮ ನೆಚ್ಚಿನ ಬೆಂಗಳೂರಿಗರನ್ನು ಸೂಚಿಸಿ,

1) ವಿಧಾನಸಭೆ ಸದಸ್ಯ, ವಿಧಾನಪರಿಷತ್ ಸದಸ್ಯ, ಸಂಸದ, ಸರಕಾರಿ ಅಧಿಕಾರಿಗಳು, ಬಿಡಿಎ, ಬಿಬಿಎಂಪಿ, ಬೆಸ್ಕಾಂನಂಥ ಸಂಸ್ಥೆಗಳು.

2) ಸರ್ಕಾರೇತರ ಸಂಸ್ಥೆ, ಮತ್ತು ಶ್ರೀಸಾಮಾನ್ಯರು.

ನಾಮ ನಿರ್ದೇಶನ ಮಾಡುವುದು ಹೇಗೆ?

* ನಮ್ಮ ಬೆಂಗಳೂರು ಅಂತರ್ಜಾಲ ತಾಣದಿಂದ ನಾಮನಿರ್ದೇಶನ ಫಾರಂಅನ್ನು ಡೌನ್ ಲೋಡ್ ಮಾಡಬಹುದು.

* ಬೆಂಗಳೂರು ಒನ್ ಕಚೇರಿ, ಕೆಫೆ ಕಾಫಿ ಡೇಯಿಂದ ನಾಮನಿರ್ದೇಶನ ಫಾರಂಅನ್ನು ಪಡೆಯಬಹುದು.

* ಭರ್ತಿ ಮಾಡಿದ ಅರ್ಜಿಯನ್ನು ಅಥವಾ ಫಾರಂಅನ್ನು ಫೋಟೋ, ವಿಡಿಯೋ ಸಹಿತ ಸಲ್ಲಿಸಬೇಕು.

* ಖುದ್ದಾಗಿ ಅಥವಾ ಆನ್ ಲೈನ್ ಕೂಡ ಅರ್ಜಿಯನ್ನು ಸಲ್ಲಿಸಬಹುದು.

* ನಾಮನಿರ್ದೇಶನ ಫಾರಂಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿವೆ.

* ಹೆಚ್ಚಿನ ಮಾಹಿತಿಗೆ ಫೀವರ್ 104 ಎಫ್ ಎಂ ವಾಹಿನಿ ಹಾಗೂ ರೇಡಿಯೋ ಇಂಡಿಗೋ ಎಫ್ ಎಂ ವಾಹಿನಿ ಕೇಳುತ್ತಿರಿ.

* ನಮ್ಮ ಬೆಂಗಳೂರು ಫೌಂಡೇಷನ್ ಜೊತೆ ಕೈ ಜೋಡಿಸಿರುವ ಸುವರ್ಣ ನ್ಯೂಸ್ ವಾಹಿನಿಯಲ್ಲಿ ವಿವರಗಳನ್ನು ಪಡೆಯಬಹುದು.

English summary
Namma Bengaluru Awards is an initiative by the Namma Bengaluru Foundation to thank ordinary citizens for their extraordinary contributions to the city. The Namma Bengaluru Awards was conceptualized by Member of Parliament and Convener of ABIDe, Mr Rajeev Chandrasekhar with the intention of awarding the real stars of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X