ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಧಕೇತರ ಸಿಬ್ಬಂದಿಗೂ ಯುಜಿಸಿ ವೇತನಕ್ಕೆ ಒತ್ತಾಯ

By Mrutyunjaya Kalmat
|
Google Oneindia Kannada News

VS Acharya
ಬೆಂಗಳೂರು, ನ. 17 : ಬೋಧಕೇತರ ಸಿಬ್ಬಂದಿಗೂ ಯುಜಿಸಿ ವೇತನ ಸೇರಿದಂತೆ ನ್ಯಾಯಯುತ ಬೇಡಿಕೆ ತಿಂಗಳ ಒಳಗೆ ಈಡೇರಿಸದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಅನುದಾನಿತ ಪದವಿ ಕಾಲೇಜುಗಳ ಆಡಳಿತಾತ್ಮಕ ಸಿಬ್ಬಂದಿ ಒಕ್ಕೂಟ ಎಚ್ಚರಿಸಿದೆ.

ನಗರದ ವಿಜಯ ಕಾಲೇಜಿನಲ್ಲಿ ನಡೆದ ಸಮಾವೇಶದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಲವು ಬಾರಿ ಗಮನ ಸೆಳೆದರೂ ಸರಕಾರ ಸ್ಪಂದಿಸದ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ. ಉಪನ್ಯಾಸಕರಿಗೆ ಯುಜಿಸಿ ವೇತನ ನೀಡಲಾಗುತ್ತಿದೆ. ಅದೇರೀತಿ, ಬೋಧಕೇತರ ಸಿಬ್ಬಂದಿಗೂ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಕಾಲೇಜಿನ ವಾತಾವರಣ ಕೆಡುತ್ತದೆ. ಸಿಬ್ಬಂದಿ ಮಧ್ಯೆ ಅಸಮಾಧಾನ ಉಂಟಾಗುವ ಸನ್ನಿವೇಶ ನಿರ್ಮಾಣವಾಗುತ್ತದೆ. ಎಲ್ಲ ಸಿಬ್ಬಂದಿ ಯನ್ನೂ ಸಮಾನವಾಗಿ ಪರಿಗಣಿಸಿ ಸೌಲಭ್ಯ ಕೊಡಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆ.

2001ರ ಮಾರ್ಚ್ 3ರ ಆದೇಶದ ಅನ್ವಯ ಪದವಿ ಕಾಲೇಜು ಸಿಬ್ಬಂದಿಗೆ ಬಡ್ತಿ ಮತ್ತಿತರ ಸೌಕರ್ಯ ನೀಡಬೇಕು. ಬೋಧಕೇತರರಿಗೂ ಸಕಾಲದಲ್ಲಿ ಬಡ್ತಿ ನೀಡಬೇಕೆಂದು ಒತ್ತಾಯಿಸಲಾಯಿತು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಒಕ್ಕೂಟ ನೀಡಿರುವ ಮನವಿ ಪರಿಶೀಲಿಸಲಾಗುವುದು. ಈ ಬಗ್ಗೆ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದರು.

ಅನುದಾನಿತ ಪದವಿ ಕಾಲೇಜುಗಳ ಸಿಬ್ಬಂದಿ ಬಹಳ ವರ್ಷದಿಂದ ಅಗತ್ಯ ಸೌಲಭ್ಯದಿಂದ ವಂಚಿತರಾಗಿದ್ದು, ನ್ಯಾಯ ದೊರಕಿಸಿಕೊಡಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಅಭಿಪ್ರಾಯಪಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X