ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣ ಹಣ ಗಳಿಸುವ ದಂಧೆ : ರವಿ ಬೆಳಗೆರೆ

By Mahesh
|
Google Oneindia Kannada News

Ravi Belagere
ಮೈಸೂರು, ಅ.9: ಕರ್ನಾಟಕದಲ್ಲಿ ಶ್ರೀಮಂತಿಕೆಯ ರಾಜಕಾರಣ ಮತ್ತು ಸಾಂಪ್ರದಾಯಿಕ ರಾಜಕಾರಣದ ಮಧ್ಯೆ ತಿಕ್ಕಾಟ ಆರಂಭವಾಗಿದ್ದು, ರಾಜ್ಯದ ಪಾಲಿಗೆ ಇದು ಅಪಾಯಕಾರಿ ಬೆಳವಣಿಗೆ ಎಂದು ಪತ್ರಕರ್ತ ರವಿ ಬೆಳಗೆರೆ ಆತಂಕ ವ್ಯಕ್ತಪಡಿಸಿದ್ದಾರೆ.

'ಸಪ್ನ ಬುಕ್ ಹೌಸ್' ಹೊರತಂದಿರುವ ಸಂಸದ ಎಚ್.ವಿಶ್ವನಾಥ್ ಅವರ 'ಹಳ್ಳಿ ಹಕ್ಕಿಯ ಹಾಡು" ಆತ್ಮಕಥನದ ಇಂಗ್ಲೀಷ್ ಅವತರಣಿಕೆಯನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

'ಶ್ರೀಮಂತಿಕೆಯ ರಾಜಕಾರಣ ರಾಜ್ಯಕ್ಕೆ ಕಾಲಿಟ್ಟಿದೆ. ಹಣದ ಮೌಲ್ಯ ಗೊತ್ತಿಲ್ಲದವರು ರಾಜಕೀಯ ಅಧಿಕಾರ ಹಿಡಿಯುವುದಕ್ಕಾಗಿ ಬಿಲಿಯನ್‌ಗಟ್ಟಲೆ ಹಣವನ್ನು ಖರ್ಚುಮಾಡುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ಹೋರಾಟ ಮತ್ತು ಚಳವಳಿಯ ಹಿನ್ನೆಲೆಯಿಲ್ಲ. ಜನರ ಭಾವನೆಗಳೇನೆಂಬುದು ಗೊತ್ತಿಲ್ಲ. ಹಣದಿಂದ ಎಲ್ಲವೂ ಸಾಧ್ಯ ಎಂಬುದಾಗಿ ನಂಬಿಕೊಂಡಿರುವ ಶ್ರೀಮಂತ ರಾಜಕಾರಣಿಗಳು ಸಾಂಪ್ರದಾಯಿಕ ರಾಜಕಾರಣಕ್ಕೆ ಸಡ್ಡುಹೊಡೆಯುವ ಪ್ರಯತ್ನದಲ್ಲಿದ್ದಾರೆ' ಎಂದು ಅವರು ವಿವರಿಸಿದರು.

'ರಾಜಕಾರಣದಲ್ಲಿ ಇಲ್ಲಿಯವರೆಗೆ ಜಾತಿ ಪ್ರಧಾನ ಪಾತ್ರ ವಹಿಸುತ್ತಿತ್ತು. ಶೇ.80 ಜಾತಿಯ ಪ್ರಭಾವ ಮತ್ತು ಶೇ.20 ರಷ್ಟು ಹಣ ಖರ್ಚುಮಾಡಿ ರಾಜಕಾರ ಣಿಗಳು ಚುನಾವಣೆಗಳನ್ನು ಗೆಲ್ಲುತ್ತಿದ್ದರು. ಆದರೆ ಇದೀಗ ಅದು ತಿರುವು ಮುರುವಾಗಿದ್ದು, ಜಾತಿಗಿಂತ ಹಣ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿದೆ' ಎಂದು ಅವರು ಭಿಪ್ರಾಯಪಟ್ಟರು.

ರಾಜಕಾರಣದಲ್ಲಿ ನಿಶ್ಚಿತ ಜೀವನ ಸಾಧ್ಯವಿಲ್ಲ. ಆದ್ದರಿಂದ ರಾಜಕಾರಣಿಯಾ ಗುವ ಪ್ರಧಾನ ಗುರಿ ಯನ್ನು ಯಾರೂ ಹೊಂದು ವುದಿಲ್ಲ. ಬೇರೆ ಯಾವುದೇ ವೃತ್ತಿಗೆ ನಿಶ್ಚಿತ ಜೀವನ ಮತ್ತು ನಿಶ್ಚಿತ ಆದಾಯವೆಂ ಬುದು ಇರುತ್ತದೆ. ಆದರೆ ರಾಜಕಾರಣ ವೆಂಬ ವೃತ್ತಿ ನಿಶ್ಚಿತ ಜೀವನ ಚೌಕಟ್ಟಿನಿಂದ ಆಚೆ ಇದೆ ಎಂದು ಅವರು ವ್ಯಾಖ್ಯಾನಿಸಿದರು. ಪ್ರಸ್ತುತ ರಾಜಕಾರಣಿಗಳಲ್ಲಿ ಸೂಕ್ಷ್ಮತೆಯ ಮನೋ ಭಾವವಿಲ್ಲ. ಸತ್ಯ ಹೇಳುವುದಿಲ್ಲ. ಪ್ರಜ್ಞಾವಂತಿಕೆ ಕ್ಷೀಣ ವಾಗುತ್ತಿದೆ ಎಂದು ಬೆಳಗೆರೆ ವಿಷಾದ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಇದಕ್ಕೂ ಮುನ್ನಾ ಮಾತನಾಡಿದ್ದ ಸಂಸದ ಎಚ್.ವಿಶ್ವನಾಥ್, ವಿಧಾನಸೌಧವನ್ನು 'ಸದಾ ಸುಂದರಿ' ಎಂದು ಬಣ್ಣಿಸಿದರು. ರಾಜಕಾರಣಿಗಳೆಂದರೆ ಜನ ಮೂಗು ಮುರಿಯುವ ಈ ಕಾಲದಲ್ಲಿ ರಾಜಕಾರಣಿ ಪುಸ್ತಕ ಬರೆಯುತ್ತಾ ನೆಂದರೆ ಅದಕ್ಕೆ ಟೀಕೆ ಟಿಪ್ಪಣಿ ಸಹಜ. ಅಂತೆಯೇ ನನ್ನ ಪುಸ್ತಕಕ್ಕೆ ಕೂಡ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದರು.


ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X