ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚಿದ ಅಸಮಾಧಾನ: ಹೈಕಮಾಂಡ್‌ನಿಂದ ಬಂತು ಖಡಕ್ ಆದೇಶ

|
Google Oneindia Kannada News

Recommended Video

ರಾಜ್ಯ ರಾಜಕಾರಣಿಗಳಿಗೆ ಹೈ ಕಮಾಂಡ್ ವಾರ್ನಿಂಗ್ | Oneindia Kannada

ಬೆಂಗಳೂರು, ಆಗಸ್ಟ್ 28: ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಎದ್ದಿದ್ದ ಅತೃಪ್ತಿ ಖಾತೆ ಹಂಚಿಕೆ ಬಳಿಕ ಇನ್ನಷ್ಟು ಹೆಚ್ಚಾಗಿದೆ. ಅತೃಪ್ತಿಯನ್ನು ಶಮನ ಮಾಡಲು 'ದಂಡ'ದ ಪ್ರಯೋಗ ಮಾಡಲು ಹೈಕಮಾಂಡ್ ಮುಂದಾಗಿದೆ.

ಯಡಿಯೂರಪ್ಪ ಅವರಿಗೆ ಖಡಕ್ ಆದೇಶವನ್ನು ಬಿಜೆಪಿ ಹೈಕಮಾಂಡ್ ರವಾನಿಸಿದ್ದು, ಅತೃಪ್ತಿ ಹೆಚ್ಚಾದರೆ ಶಿಸ್ತು ಉಲ್ಲಂಘಿಸುವ ಶಾಸಕರಿಗೆ ಅನಾಮತ್ತು ರಾಜೀನಾಮೆ ಪಡೆಯಿರಿ ಎಂದು ಹೇಳಲಾಗಿದೆ..

ಆರ್‌ ಅಶೋಕ್‌ಗೆ ಡಿಸಿಎಂ ಪಟ್ಟ ತಪ್ಪಿದ್ದು ಏಕೆ, ಇಲ್ಲಿದೆ ಕಾರಣಆರ್‌ ಅಶೋಕ್‌ಗೆ ಡಿಸಿಎಂ ಪಟ್ಟ ತಪ್ಪಿದ್ದು ಏಕೆ, ಇಲ್ಲಿದೆ ಕಾರಣ

ಅತೃಪ್ತಿಯನ್ನು ಹೊರಹಾಕುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಶಾಸಕರು, ಹೈಕಮಾಂಡ್ ನಿರ್ಧಾರವನ್ನು ಪ್ರಶ್ನೆ ಮಾಡುವ ಶಾಸಕರು, ಖಾತೆ ಹಂಚಿಕೆ ಬಗ್ಗೆ ಅಸಮಾಧಾನಿತ ಶಾಸಕರಿಗೆ ಎಚ್ಚರಿಕೆ ನೀಡಿ ಅತೃಪ್ತಿ ಮತ್ತು ಅಶಿಸ್ತು ಮುಂದುವರೆಸಿದರೆ ರಾಜೀನಾಮೆ ಪಡೆಯಿರೆಂದು ಹೈಕಮಾಂಡ್ ಸೂಚನೆ ರವಾನಿಸಿದೆ.

Take Resignation From Who Ever Violates The Party Discipline: High Command

ಸೋತ ಲಕ್ಷ್ಮಣ ಸವದಿಗೆ ದೊಡ್ಡ ಹುದ್ದೆ ಕೊಟ್ಟಿರುವ ಹಿಂದಿದೆ ಭಾರಿ ಲೆಕ್ಕಾಚಾರಸೋತ ಲಕ್ಷ್ಮಣ ಸವದಿಗೆ ದೊಡ್ಡ ಹುದ್ದೆ ಕೊಟ್ಟಿರುವ ಹಿಂದಿದೆ ಭಾರಿ ಲೆಕ್ಕಾಚಾರ

ಕೆಲವು ದಿನಗಳ ಹಿಂದೆ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾಗ ಯಡಿಯೂರಪ್ಪ ಅವರಿಗೆ . 'ಅತೃಪ್ತರನ್ನು ನಿಭಾಯಿಸುವ ಜವಾಬ್ದಾರಿ ನಿಮ್ಮದೆ, ಅದರಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡುವುದಿಲ್ಲ, ಅನರ್ಹ ಶಾಸಕರ ಜವಾಬ್ದಾರಿಯೂ ನಿಮ್ಮದೇ' ಎಂದು ಯಡಿಯೂರಪ್ಪ ಮೇಲೆ ಎಲ್ಲ ಜವಾಬ್ದಾರಿಯನ್ನು ಹೊರಿಸಿತ್ತು.

ಯಡಿಯೂರಪ್ಪ ಸಂಪುಟದಲ್ಲಿ ಯಾವ ಸಚಿವರಿಗೆ ಯಾವ ಖಾತೆ?ಯಡಿಯೂರಪ್ಪ ಸಂಪುಟದಲ್ಲಿ ಯಾವ ಸಚಿವರಿಗೆ ಯಾವ ಖಾತೆ?

ಸಂಪುಟ ವಿಸ್ತರಣೆ ಬಳಿಕ ಸಣ್ಣದಾಗಿ ಪ್ರಾರಂಭವಾಗಿದ್ದ ಅಸಮಾಧಾನ, ಖಾತೆ ಹಂಚಿಕೆ ನಂತರ ದೊಡ್ಡದಾಗಿದ್ದು, ಹಿರಿಯ ಶಾಸಕರು, ಸಚಿವರುಗಳೇ ಅತೃಪ್ತಿ ಹೊರಹಾಕಿದ್ದಾರೆ. ಮೈತ್ರಿ ಸರ್ಕಾರದಲ್ಲಿ ರಾಜ್ಯದ ಜನ ನೋಡಿದ್ದ ಕಚ್ಚಾಟ ನಿಧಾನಕ್ಕೆ ಬಿಜೆಪಿ ಸರ್ಕಾರದಲ್ಲೂ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿವೆ.

English summary
BJP High command told Yediyurappa that 'take resignation from who ever violates the party discipline'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X