Get Updates
Get notified of breaking news, exclusive insights, and must-see stories!

ಬೆಂಗಳೂರಿನಂತೆ ಇಲ್ಲಿ ಟ್ರಾಫಿಕ್‌ ಇಲ್ಲ, ನಮ್ಮ ಹೈದರಾಬಾದ್‌ ಬೆಸ್ಟ್‌ ಎಂದ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

ಸಿಲಿಕಾನ್‌ ಸಿಟಿ ಬೆಂಗಳೂರಿನ ಮೇಲೆ ನೆರೆಹೊರೆ ರಾಜ್ಯಗಳ ಸಿಎಂ ಕಣ್ಣು ಮೊದಲಿನಿಂದಲೂ ಇದೆ. ಆಂಧ್ರ ಸಚಿವ ನಾರಾ ಲೋಕೇಶ್‌ ಅವಕಾಶ ಸಿಕ್ಕಿದಾಗಲೆಲ್ಲ ಬೆಂಗಳೂರಿನ ಸಮಸ್ಯೆಗಳನ್ನು ಅಣಕಿಸುತ್ತಾ ಇಲ್ಲಿನ ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಈಗ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಲೇವಡಿ ಮಾಡುವ ಮೂಲಕ ಹೈದರಾಬಾದ್ ನಗರವೇ ಅತ್ಯಂತ ಸುಂದರ ಮತ್ತು ಅಭಿವೃದ್ಧಿ ಹೊಂದಿದ ನಗರ ಎಂದು ಬೆನ್ನುತಟ್ಟಿಕೊಂಡಿದ್ದಾರೆ.

ವಿಮಾನ ನಿಲ್ದಾಣ ತಲುಪಲು ಹೆಚ್ಚು ಸಮಯ ಹಿಡಿಯುತ್ತೆ

ಹೈದರಾಬಾದ್‌ನ ಕೆರೆಗಳ ಪುನಶ್ಚೇತನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಇತರ ಪ್ರಮುಖ ನಗರಗಳ ಅಭಿವೃದ್ಧಿ ಕುಂಠಿತವಾಗಿರುವುದಕ್ಕೆ ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಬೆಂಗಳೂರಿನ ಟ್ರಾಫಿಕ್‌ ಜಾಮ್‌ ಸಮಸ್ಯೆಯನ್ನು ಉಲ್ಲೇಖಿಸಿದ ಅವರು, "ದಕ್ಷಿಣದ ಪ್ರಮುಖ ನಗರವಾದ ಬೆಂಗಳೂರಿನಲ್ಲಿ ಯಾರೂ ಸಹ ವಿಮಾನ ನಿಲ್ದಾಣ ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಅಲ್ಲಿನ ಟ್ರಾಫಿಕ್ ಸಮಸ್ಯೆ ಅಷ್ಟರಮಟ್ಟಿಗೆ ಹದಗೆಟ್ಟಿದೆ" ಎಂದು ಅಣಕಿಸಿದ್ದಾರೆ.

Revanth Reddy

ಅಲ್ಲದೆ ದೆಹಲಿಯ ಮಾಲಿನ್ಯ ನಿಯಂತ್ರಣಕ್ಕೆ ಮೀರಿ ಹೋಗಿದೆ, ಮುಂಬೈ ಮತ್ತು ಚೆನ್ನೈ ನಗರಗಳು ಸ್ವಲ್ಪ ಮಳೆಯಾದರೂ ಮುಳುಗಿ ಹೋಗುತ್ತವೆ. ಆದರೆ ಇವೆಲ್ಲದಕ್ಕೂ ಹೋಲಿಸಿದರೆ ಹೈದರಾಬಾದ್ ಅತ್ಯಂತ ಸುರಕ್ಷಿತ ನಗರ ಎಂದು ಅವರು ಹೇಳಿದ್ದಾರೆ. ಸಬರಮತಿ, ಯಮುನಾ ಮತ್ತು ಗಂಗಾ ನದಿಗಳ ಮಾದರಿಯಲ್ಲಿ ಹೈದರಾಬಾದ್‌ನ ಮೂಸಿ ನದಿಯನ್ನು ಪುನಶ್ಚೇತನಗೊಳಿಸಿ ನದಿ ಆರ್ಥಿಕತೆ ಬೆಳೆಸಬೇಕು. ಇದಕ್ಕೆ ಅಡ್ಡಿಪಡಿಸುವವರು ನಗರಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ರೇವಂತ್‌ ರೆಡ್ಡಿ ಹೇಳಿಕೆಗೆ ಖಂಡನೆ

ರೇವಂತ್‌ ರೆಡ್ಡಿ ಅವರ ಈ ಹೇಳಿಕೆಯು ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ಜಾಗತಿಕ ಮಟ್ಟದ ಐಟಿ ಹಬ್ ಆಗಿ ಗುರುತಿಸಿಕೊಂಡಿದ್ದು, ಅತಿ ಹೆಚ್ಚು ತೆರಿಗೆ ಪಾವತಿಸುವ ನಗರವಾಗಿದೆ. ರೇವಂತ್ ರೆಡ್ಡಿ ಅವರು ಹೈದರಾಬಾದ್‌ಗೆ ಹೂಡಿಕೆದಾರರನ್ನು ಸೆಳೆಯಲು ಬೆಂಗಳೂರಿನಂತಹ ಬಲಿಷ್ಠ ನಗರವನ್ನು ಟೀಕಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ಎದುರಿಸುತ್ತಿರುವುದು ನಿಜವಾದರೂ, ಕರ್ನಾಟಕ ಸರ್ಕಾರವು ಮೆಟ್ರೋ ವಿಸ್ತರಣೆ, ಸುರಂಗ ರಸ್ತೆಗಳು ಮತ್ತು ಪೆರಿಫೆರಲ್ ರಿಂಗ್ ರೋಡ್‌ಗಳ ಮೂಲಕ ಸಮಸ್ಯೆಯನ್ನು ಹಂತಹಂತವಾಗಿ ಪರಿಹರಿಸಲು ಮುಂದಾಗಿದೆ. ರೇವಂತ್ ರೆಡ್ಡಿ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಹಲವು ಕನ್ನಡಿಗರು, "ಬೆಂಗಳೂರಿನ ಬೆಳವಣಿಗೆಯ ವೇಗ ಮತ್ತು ಹೂಡಿಕೆಯ ಪ್ರಮಾಣವನ್ನು ಹೈದರಾಬಾದ್ ಮುಟ್ಟಲು ಸಾಧ್ಯವಿಲ್ಲ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡುತ್ತಿದ್ದಾರೆ.

ಆರ್.ಅಶೋಕ್‌ ಕಿಡಿ

ರೇವಂತ್‌ ರೆಡ್ಡಿ ಹೇಳಿಕೆ ಉಲ್ಲೇಖಿಸಿ, ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರತಿಕ್ರಿಯಿಸಿದ್ದಾರೆ. ಸ್ವಂತ ಪಕ್ಷದ ಸಿಎಂ ಕೂಡ ಒಪ್ಪದ 'ಬ್ರ್ಯಾಂಡ್ ಬೆಂಗಳೂರು' ಎಂದು ಗೇಲಿ ಮಾಡಿದ್ದಾರೆ. ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್‌ ಅವರೇ, ನಿಮ್ಮದೇ ಕಾಂಗ್ರೆಸ್‌ ಪಕ್ಷದ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರು ಹೈದರಾಬಾದ್ ಎದುರು ಬೆಂಗಳೂರಿನ ಟ್ರಾಫಿಕ್ ಮತ್ತು ಮಾಲಿನ್ಯವನ್ನು ಬಹಿರಂಗವಾಗಿ ಲೇವಡಿ ಮಾಡಿದ್ದಾರೆ. ಬ್ರ್ಯಾಂಡ್, ಗ್ರೇಟರ್ ಮಾಡಲು ಹೋಗಿ, ನಮ್ಮ ಹೆಮ್ಮೆಯ ಸಿಲಿಕಾನ್ ಸಿಟಿಯನ್ನು "ಬ್ಲ್ಯಾಕ್ ಲಿಸ್ಟ್" ಮಾಡಿದ್ದೇ ನಿಮ್ಮ ದೊಡ್ಡ ಸಾಧನೆ. ಗುಂಡಿಬಿದ್ದ ರಸ್ತೆಗಳು ಮತ್ತು ಕಸದ ರಾಶಿಗಳೇ ನಿಮ್ಮ ಜಾಗತಿಕ ಮಟ್ಟದ ಯೋಜನೆಗಳೇ? ಎಂದು ಕುಟುಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+