ಅತೃಪ್ತಿಯ ಬೆಂಕಿ ಹತ್ತಿದ್ದು ಬೆಳಗಾವಿಯಿಂದ: ಸತೀಶ್ ಜಾರಕಿಹೊಳಿ
ಬೆಂಗಳೂರು, ಜುಲೈ 12: ಅತೃಪ್ತಿಯ ಬೆಂಕಿ ಮೊದಲು ಹೊತ್ತಿಕೊಂಡಿದ್ದು ಬೆಳಗಾವಿಯಲ್ಲಿ, ಈಗ ಅದು ಇಲ್ಲಿಯವರೆಗೆ ಬಂದು ತಲುಪಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಧ್ಯಮಗಳೊಟ್ಟಿಗೆ ಅವರು ಮಾತನಾಡಿದರು.
ರೆಸಾರ್ಟ್‌ಗೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತಿರಿಸಿ, ನಾನು ಯಾವ ರೆಸಾರ್ಟ್‌ಗೂ ಹೋಗುವವನಲ್ಲ, ನಾನು ನನ್ನ ಮನೆಯಲ್ಲಿಯೇ ಇರುತ್ತೇನೆ, ನಮ್ಮ ಹಿರಿಯರೂ ಇದನ್ನೇ ಮಾಡಿದ್ದಾರೆ, ನಾನು ಅದನ್ನೇ ಪಾಲಿಸುತ್ತೇನೆ ಎಂದರು.

ಸರ್ಕಾರ ಸುಭದ್ರವಾಗಿರುತ್ತದೆ ಎಂಬ ಭರವಸೆ ಸಿಕ್ಕಿದೆ, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಅವರು ಧೈರ್ಯವಾಗಿರುವಂತೆ ಭರವಸೆ ನೀಡಿದ್ದಾರೆ. ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ವಿಶ್ವಾಸಮತ ಯಾಚನೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ, ಮುಂಬೈಗೆ ತೆರಳಿರುವ ಶಾಸಕರು ವಾಪಸ್ ಬರಬಹುದು, ಅವರೇನು ಬಿಜೆಪಿಯವರಲ್ಲ, ಅವರೆಲ್ಲರೂ ನಮ್ಮವರೇ ಅವರೆಲ್ಲರೂ ವಾಪಸ್ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications