ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಜೂನ್ 2026 ದರ್ಶನ ಟಿಕೆಟ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ
ತಿರುಮಲ ತಿರುಪತಿಯ ದೇವಸ್ಥಾನಂ ಮಂಡಳಿಯು (ಟಿಟಿಡಿ) ಮುಂದಿನ ಜೂನ್ ತಿಂಗಳ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಟಿಕೆಟ್‌ಗಳನ್ನು ಮತ್ತು ಕೊಠಡಿಯ ಕೊಟಾಗಳ ಕುರಿತು ಪ್ರಮುಖ ವಿವರಗಳನ್ನು ಪ್ರಕಟಿಸಿದೆ. ವಿವಿದ ಸೇವೆಗಳು, ವಿಶೇಷ ಪೂಜೆಗಾಗಿ ಮತ್ತು ದರ್ಶನಕ್ಕಾಗಿ ಸಂಬಂಧಿಸಿದ ವಿಶೇಷ ಕೋಟಾಗಳ ದಿನಾಂಕಗಳನ್ನು ಟಿಟಿಡಿ ಪ್ರಕಟಿಸಿದೆ.
ವಿಶೇಷ ಸೇವೆಗಳ ಕೋಟಾ
ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ವಿಶೇಷ ಪೂಜೆ ಟಿಕೆಟ್‌ಗಳು ಮೊದಲ ತಿಂಗಳ ಕೋಟಾ ವಿವರವನ್ನು ನಾಳೆ (ಮಾರ್ಚ್ 18) ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸುಪ್ರಭಾತ, ತೋಮಾಲ ಸೇವೆ, ಅರ್ಚನೆ ಮತ್ತು ಅಷ್ಟದಳ ಪಾದ ಪದ್ಮಾರಾಧನೆ ಸೇವೆಗಳಿಗಾಗಿ ಭಕ್ತರು ಎಲೆಕ್ಟ್ರಾನಿಕ್ ಡಿಪ್ ಮೂಲಕ ನೋಂದಣಿ ಮಾಡಿಕೋಳ್ಳಬಹುದು. ಈ ನೋಂದಣಿಯು ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಯವರಿಗೆ ಲಭ್ಯವಿರುತ್ತದೆ. ಆಯ್ಕೆಯಾದ ಭಕ್ತರು ಮಾರ್ಚ 20 ರಿಂದ 22 ರೊಳಗೆ ಮಧ್ಯಾಹ್ನ 12 ಗಂಟೆಯೊಳಗೆ ಮೊತ್ತವನ್ನು ಪಾವತಿಸಿ ಟಿಕೆಟ್‌ಗಳನ್ನು ಪಡೆಯಬೇಕು.

ವರ್ಚುವಲ್ ಸೇವೆಗಳ ಕೋಟಾ
ವರ್ಚುವಲ್ ಸೇವೆಗಳ ಹಾಗೂ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನದ ಸ್ಲಾಟುಗಳ ಕೋಟಾವನ್ನು ಮಾರ್ಚ್ 21 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಉರುಳು ಸೇವೆ ಪ್ರದಕ್ಷಿಣೆ ಟೋಕನ್‌ಗಳು
ಉರುಳು ಸೇವೆಯ ಪ್ರದಕ್ಷಿಣೆ ಟೋಕನ್‌ಗಳ ಕೋಟಾವನ್ನು ಮಾರ್ಚ್ 23 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಶ್ರೀವಾಣಿ ಟ್ರಸ್ಟ್ ದರ್ಶನ
ಶೀವಾಣಿ ಟ್ರಸ್ಟ್ ದರ್ಶನ ಟಿಕೆಟ್‌ಗಳ ಕೋಟಾವನ್ನು ಮಾರ್ಚ್ 23 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.
ವೃದ್ದರು ಮತ್ತು ಅಂಗವಿಕಲರಿಗೆ ವಿಶೇಷ ದರ್ಶನ
ವೃದ್ದರು, ಅಂಗವಿಕಲರು ಮತ್ತು ದೀರ್ಘಕಾಲದ ಅಸ್ವಸ್ಥರಿಗೆ ಉಚಿತ ವಿಶೇಷ ದರ್ಶನ ಟೋಕನ್ ಕೋಟಾವನ್ನು ಮಾರ್ಚ್ 23 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳು
ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಮಾರ್ಚ್ 24 ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.
ತಿರುಮಲ ಮತ್ತು ತಿರುಪತಿಯ ಕೊಠಡಿ ಬುಕ್ಕಿಂಗ್
ತಿರುಮಲ ಮತ್ತು ತಿರುಪತಿಯಲ್ಲಿ ಕೊಠಡಿ ಬುಕ್ಕಿಂಗ್ ಕೋಟಾವನ್ನು ಮಾರ್ಚ್ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಟಿಟಿಡಿ ತಿಳಿಸಿರುವಂತೆ, ಶೀವಾರಿ ದರ್ಶನ ಟಿಕೆಟ್ ಗಳನ್ನು ಅಧಿಕೃತ ವೆಬ್‌ಸೈಟ್ ttdevasthanams.ap.gov.in ಮೂಲಕವೇ ಬುಕ್ ಮಾಡಬೇಕು ಎಂದು ತಿಳಿಸಿದೆ. ಸಾರ್ವಜನಿಕರು ನಕಲಿ ವೆಬ್‌ಸೈಟ್‌ಗಳನ್ನು ನಂಬಿ ಮೋಸ ಹೋಗಬಾರದು ಎಂದು ಭಕ್ತರಿಗೆ ಮಂಡಳಿಯು ಮನವಿ ಮಾಡಿದೆ.












Click it and Unblock the Notifications