Get Updates
Get notified of breaking news, exclusive insights, and must-see stories!

400 ಜನರ ಜೀವ ತೆಗೆದ ಪಾಪಿ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ದಾಳಿ | Pakistan And Afghanistan

ಪಾಕಿಸ್ತಾನ ಸೇನೆ ಮತ್ತೆ ಬಾಲ ಬಿಚ್ಚಿದೆ, ತನ್ನಲ್ಲೇ ನೂರಾರು ಹುಳುಕು ಇಟ್ಟುಕೊಂಡು ಅಕ್ಕಪಕ್ಕದಲ್ಲಿ ಇರುವ ದೇಶಗಳ ಜೊತೆಗೆ ಸದಾ ಕಿರಿಕ್ ಮಾಡುವ ಪಾಕಿಸ್ತಾನ ಮತ್ತೊಮ್ಮೆ ಈಗ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಅಂದಹಾಗೆ ಅಫ್ಘಾನಿಸ್ತಾನ ದೇಶದ ಆಡಳಿತ ನಡೆಸುತ್ತಿರುವ ತಾಲಿಬಾನ್ ವಿರುದ್ಧ‍ ರೊಚ್ಚಿಗೆದ್ದು ವಾಯುದಾಳಿ ನಡೆಸಿರುವ ಪಾಕಿಸ್ತಾನ ಸೇನೆ 400 ಅಮಾಯಕರ ಜೀವ ತೆಗೆದ ಆರೋಪ ಕೇಳಿಬಂದಿದೆ. ಒಂದೇ ದಾಳಿಯಲ್ಲಿ ಸುಮಾರು 400 ಜನರ ಜೀವ ತೆಗೆದಿರುವುದು ಪಾಕಿಸ್ತಾನ ವಿರುದ್ಧ ಆಕ್ರೋಶ ಭುಗಿಲೇಳುವ ರೀತಿ ಮಾಡಿದೆ. ಹಾಗಾದರೆ ಪಾಕಿಸ್ತಾನ ದಾಳಿ ಮಾಡಿದ್ದು ಏಕೆ? ಪಾಕಿಸ್ತಾನ ಸೇನೆ ದಾಳಿ ಮಾಡಿದ ಪ್ರದೇಶದಲ್ಲಿ ಏನಾಯ್ತು? ಬನ್ನಿ ತಿಳಿಯೋಣ.

ಅಫ್ಘಾನಿಸ್ತಾನ ಅಧಿಕಾರಿಗಳ ಮಾಹಿತಿ ಪ್ರಕಾರ ಕಾಬೂಲ್‌ನ ವೈದ್ಯಕೀಯ ಕೇಂದ್ರದ ಮೇಲೆ ಪಾಪಿ ಪಾಕ್ ಸೇನೆ ಭೀಕರವಾದ ದಾಳಿ ನಡೆಸಿದೆ. ಅಂದಹಾಗೆ ಪಾಕಿಸ್ತಾನದ ಈ ವಾಯುದಾಳಿಯಲ್ಲಿ ಕನಿಷ್ಠ 400 ಜನ ಜೀವ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನ ದಾಳಿಯಲ್ಲಿ ಮೃತಪಟ್ಟವರು ಚಿಕಿತ್ಸೆಯನ್ನ ಪಡೆಯುತ್ತಿದ್ದರು, ಹಲವು ರೀತಿಯ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿದ್ದ ಇವರನ್ನ ಚಿಕಿತ್ಸೆಗೆ ಎಂದು ದಾಖಲು ಮಾಡಲಾಗಿತ್ತು. ಆದರೆ ಪಾಕಿಸ್ತಾನ ಸೇನೆ ಯುದ್ಧದ ನಿಯಮ ಮುರಿದು ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಈ ದಾಳಿಯಲ್ಲಿ ವ್ಯಸನ ಚಿಕಿತ್ಸೆಗೆ ಒಳಗಾಗಿದ್ದ ರೋಗಿಗಳು ಬಲಿಯಾಗಿದ್ದಾರೆ. ಪಾಕಿಸ್ತಾನ ಸೇನೆ ನಡೆಸಿದ ದಾಳಿ ಎಷ್ಟು ಭೀಕರವಾಗಿ ಇತ್ತು ಎಂದರೆ, ಈ ದಾಳಿ ನಂತರ ದಿಢೀರ್ ಇಡೀ ಆಸ್ಪತ್ರೆ ಕಟ್ಟಡ ಧಗಧಗ ಹೊತ್ತಿ ಉರಿದಿದೆ.

Pakistan And Afghanistan

250ಕ್ಕೂ ಹೆಚ್ಚು ಜನರಿಗೆ ಗಾಯ

ಪಾಕಿಸ್ತಾನದ ಕುತಂತ್ರಿ ರಾಜಕೀಯ ನಾಯಕರು ಹಾಗೂ ಅಲ್ಲಿನ ಕುತಂತ್ರಿ ಸೇನಾ ಮುಖ್ಯಸ್ಥ ಪದೇ & ಪದೇ ತಮ್ಮ ವಿಕೃತ ಮನಸ್ಥಿತಿಯಿಂದ ಅಕ್ಕಪಕ್ಕ ಇರುವ ದೇಶಗಳಿಗೆ ತೊಂದರೆ ಕೊಡುತ್ತಲೇ ಇದ್ದಾರೆ. 400 ಅಮಾಯಕರ ಜೀವ ಬಲಿಪಡೆದಿರುವ ಪಾಕಿಸ್ತಾನ ದಾಳಿ ಮತ್ತೊಂದು ಕಡೆ 250ಕ್ಕೂ ಹೆಚ್ಚು ಜನ ಗಾಯಗೊಂಡು ನರಳುವಂತೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ತಾಲಿಬಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್, ನಿನ್ನೆ ತಡರಾತ್ರಿ ನಡೆದ ದಾಳಿಯಿಂದ ಕಟ್ಟಡವು ಭಾರೀ ಹಾನಿಗೊಳಗಾಗಿದೆ.

250 ಜನ ಗಾಯಗೊಂಡಿದ್ದು, ರಕ್ಷಣಾ ತಂಡಗಳು ಬೆಂಕಿ ನಂದಿಸಲು ಹಾಗೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಒದ್ದಾಡಿವೆ. ಈ ದಾಳಿಯನ್ನು ಪಾಕಿಸ್ತಾನವೇ ನಡೆಸಿದೆ ಎಂದು ತಾಲಿಬಾನ್ ಆಡಳಿತ ಆರೋಪ ಮಾಡಿದ್ದು, ಇದಕ್ಕೆ ತಕ್ಕ ರಿವೇಂಜ್ ಗ್ಯಾರಂಟಿ ಎಂದಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಈ ಆರೋಪಗಳನ್ನ ತಳ್ಳಿ ಹಾಕಿ, ಕಾಬೂಲ್ & ಪೂರ್ವ ಅಫ್ಘಾನಿಸ್ತಾನದಲ್ಲಿ ನಡೆದ ದಾಳಿಗಳು ನಾಗರಿಕ ಅಥವಾ ವೈದ್ಯಕೀಯ ಕೇಂದ್ರಗಳನ್ನ ಗುರಿಯಾಗಿಸಲಿಲ್ಲ ಎಂದು ತಿಪ್ಪೆ ಸಾರಿಸಿದೆ. ಈ ದಾಳಿಯ ನಂತರ ಅಪ್ಘಾನಿಸ್ತಾನ ಕುದ್ದು ಹೋಗಿದ್ದು, ಭೀಕರವಾದ ಮರುದಾಳಿಗೆ ಎಲ್ಲಾ ಸಿದ್ಧತೆಗಳ ಆರಂಭಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+