Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ

ಕರ್ನಾಟಕದ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯಲ್ಲಿ ರಾಗಿ ಮುದ್ದೆಯು ಕನ್ನಡಿಗರ ಶಕ್ತಿ, ಆರೋಗ್ಯದ ಸಂಕೇತವಾಗಿ ಉಳಿದಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದ ಜನರ ಜೀವನಾಡಿಯಾಗಿರುವ ರಾಗಿ ಮುದ್ದೆ, ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಆಗರವಾಗಿದೆ. ಬಿಸಿಬಿಸಿ ಮುದ್ದೆಯೊಂದಿಗೆ ಹಿತವಾದ ಬಸ್ಸಾರು ಅಥವಾ ಸೊಪ್ಪಿನ ಸಾರು ಸೇರಿಕೊಂಡರೆ ಆ ರುಚಿಯೇ ಬೇರೆ. ಮಂಡ್ಯದಂತಹ ಜಿಲ್ಲೆಗಳಲ್ಲಿ ಅತಿಥಿಗಳಿಗೆ ಮುದ್ದೆ ಊಟ ಬಡಿಸುವುದು ಅತ್ಯಂತ ಗೌರವದ ವಿಷಯ. ಕೇಂದ್ರದ ಯುವಜನ ವ್ಯವಹಾರ, ಕ್ರೀಡೆ ಮತ್ತು ಕಾರ್ಮಿಕ ಖಾತೆ ಸಚಿವರಾದ ಮನ್ಸುಖ್ ಮಾಂಡವೀಯ ಇತ್ತೀಚೆಗೆ ಮಂಡ್ಯಕ್ಕೆ ಭೇಟಿ ನೀಡಿದಾಗ ಈ ಮಣ್ಣಿನ ಸೊಗಡಿನ ರಾಗಿ ಮುದ್ದೆಯನ್ನು ಸವಿಯುವ ಆಸೆ ಬಿಚ್ಚಿಟ್ಟಿದ್ದು ಗಮನ ಸೆಳೆದಿದೆ.

ಮಂಡ್ಯದ ವಿ.ಸಿ. ಫಾರಂನಲ್ಲಿ ಆಯೋಜಿಸಲಾಗಿದ್ದ 'ಖೇಲೋ ಇಂಡಿಯಾ-ವೈಬ್ರೆಂಟ್ ಮಂಡ್ಯ' ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ಕೇಂದ್ರ ಸಚಿವರಾದ ಮನ್ಸುಖ್ ಮಾಂಡವೀಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಕ್ಕರೆ ನಾಡಿನ ಅಭಿಮಾನಿಗಳು ಸಚಿವರಿಗೆ ಬೃಹತ್ ಬೆಲ್ಲದ ಹಾರವನ್ನು ಹಾಕುವ ಮೂಲಕ ಅಕ್ಕರೆಯ ಸ್ವಾಗತ ಕೋರಿದರು. ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡಿದ ಸಚಿವರು, ವಿ.ಸಿ. ಫಾರಂನಲ್ಲಿ ₹14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಬಹುಪಯೋಗಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿ ಭೂಮಿಪೂಜೆ ನೆರವೇರಿಸಿದರು.

Union Minister Mansukh Mandaviya

ರಾಗಿ ಮುದ್ದೆ ಸವಿದರೆ ನನ್ನ ಭೇಟಿ ಅರ್ಥಪೂರ್ಣ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮನ್ಸುಖ್ ಮಾಂಡವೀಯ ಅವರು ಕರ್ನಾಟಕದ ಸಂಸ್ಕೃತಿ ಮತ್ತು ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಮಂಡ್ಯದ ಶಕ್ತಿ ಎಂದೇ ಕರೆಯಲ್ಪಡುವ ರಾಗಿ ಮುದ್ದೆಯ ಬಗ್ಗೆ ಪ್ರಸ್ತಾಪಿಸಿದ ಅವರು, "ಬಹಳ ದಿನಗಳಿಂದ ನನಗೆ ರಾಗಿ ಮುದ್ದೆ ಸವಿಯುವ ಆಸೆ ಇತ್ತು, ಆ ದಿನ ಇಂದು ಕೂಡಿ ಬಂದಿದೆ. ನಾನು ಮಂಡ್ಯದಿಂದ ಹೊರಡುವ ಮುನ್ನ ಹೆಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ರಾಗಿ ಮುದ್ದೆ ಊಟಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆಯಿದೆ. ಇದರಿಂದ ನನ್ನ ಮಂಡ್ಯ ಭೇಟಿ ನಿಜಕ್ಕೂ ಅರ್ಥಪೂರ್ಣವಾಗಲಿದೆ" ಎಂದು ತಮ್ಮ ಆಸೆ ಬಿಚ್ಚಿಟ್ಟರು.

ವಿಕಲಚೇತನರಿಗೆ ಇವಿ ವಾಹನ ವಿತರಣೆ

ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಭಾರತೀಯ ಉಕ್ಕು ಪ್ರಾಧಿಕಾರ (SAIL) ಮತ್ತು ಟಿವಿಎಸ್ ಕಂಪನಿಯ ಸಿಎಸ್ಆರ್ ನಿಧಿಯಡಿ 388 ವಿಕಲಚೇತನ ಫಲಾನುಭವಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ 'TvsQub9' ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಲಾಯಿತು. ಇವುಗಳಿಗೆ ಹೆಚ್ಚುವರಿಯಾಗಿ ಎರಡು ಚಕ್ರಗಳನ್ನು ಅಳವಡಿಸಿ ಸುರಕ್ಷತೆಯನ್ನು ಖಚಿತಪಡಿಸಲಾಗಿತ್ತು. ಕ್ರೀಡೆಯ ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೂ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡಲಾಯಿತು. ಸರ್ಕಾರಿ ಶಾಲೆಗಳ ಮಕ್ಕಳ ಅನುಕೂಲಕ್ಕಾಗಿ 500 ಕಂಪ್ಯೂಟರ್‌ಗಳು ಮತ್ತು 100 ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡಲಾಯಿತು.

Union Minister Mansukh Mandaviya

ಅಲ್ಲದೆ, ಮಂಡ್ಯದ ಮಿಸ್ಮ್ (MIMS) ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಸಹಕಾರಿಯಾಗುವಂತೆ ಸುಸಜ್ಜಿತ ಆಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಒಟ್ಟಾರೆಯಾಗಿ, ಈ ಕಾರ್ಯಕ್ರಮವು ಮಂಡ್ಯ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಈ ಕಾರ್ಯಕ್ರಮವು ಮಂಡ್ಯದ ಕ್ರೀಡಾ ಮೂಲಸೌಕರ್ಯಕ್ಕೆ ಹೊಸ ವೇಗ ನೀಡುವ ಜೊತೆಗೆ, ಜಿಲ್ಲೆಯ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದೆ. ಕೇಂದ್ರ ಸಚಿವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ತಂದಿತ್ತು ಮತ್ತು ಜಿಲ್ಲೆಯ ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ತುಂಬಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+