ಬಿಜೆಪಿ ಅತೃಪ್ತ ಶಾಸಕರ ರಹಸ್ಯ ಸಭೆ: ಬಂಡಾಯದ ಮುನ್ಸೂಚನೆ?

ಬೆಂಗಳೂರು, ಆಗಸ್ಟ್ 20: ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಬಿಜೆಪಿಯಲ್ಲಿಯೂ ಬಂಡಾಯ ಭುಗಿಲೆದ್ದಿದೆ. ಅತೃಪ್ತ ಶಾಸಕರು ರಹಸ್ಯ ಸಭೆಯನ್ನು ಇಂದು ಮಾಡಿದ್ದಾರೆ.

ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು

ಮಾಜಿ ಸಚಿವ ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ತಿಪ್ಪಾರೆಡ್ಡಿ, ಉಮೇಶ್ ಕತ್ತಿ ಇನ್ನೂ ಕೆಲವು ಶಾಸಕರು ರೇಸ್ ವ್ಯೂ ಹೊಟೆಲ್‌ನಲ್ಲಿ ಇಂದು ಭೇಟಿಯಾಗಿ ಎರಡು ಗಂಟೆ ಮಾತುಕತೆ ನಡೆಸಿದ್ದಾರೆ.

ರೇಣುಕಾಚಾರ್ಯ ಅವರು ತಮಗೆ ಅತೃಪ್ತಿ, ಅಸಮಾಧಾನ ಇಲ್ಲವೆಂದು ಹೇಳಿದ್ದಾರಾದರೂ ಅವರು ಸಭೆಯಲ್ಲಿ ಹಾಜರಿರುವ ಮೂಲಕ ತಮಗೆ ಅಸಮಾಧಾನ ಆಗಿರುವುದು ನಿಜವೆಂದು ರಾಜ್ಯ ನಾಯಕರಿಗೆ ತೋರಿಸಿದ್ದಾರೆ.

Cabinet expansion: dissident MLAs had private meeting

ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಅಪ್ಪಚ್ಚು ರಂಜನ್, ಬಸನಗೌಡ ಪಾಟೀಲ್ ಯಾತ್ನಾಳ್, ಎಸ್.ಅಂಗಾರ, ಪೂರ್ಣಿಮಾ ಶ್ರೀನಿವಾಸ್ ಇನ್ನೂ ಕೆಲವರು ಯಡಿಯೂರಪ್ಪ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದು, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ತಮ್ಮನ್ನು ಭೇಟಿಯಾದ ಅಸಮಾಧಾನಗೊಂಡ ಶಾಸಕರಿಗೆ ಸೂಕ್ತ ಸ್ಥಾನ ಮಾನದ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಇನ್ನೂ 16 ಖಾತೆಗಳು ಇದ್ದು, ಅವುಗಳಲ್ಲಿ ಕೆಲವನ್ನಾದರೂ ನೀಡುವ ಭರವಸೆ ನೀಡಿದ್ದಾರೆ. ಅನರ್ಹ ಶಾಸಕರಿಗೆ ಕೆಲವು ಸ್ಥಾನಗಳು ನೀಡಲೇಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+