• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತೃಪ್ತರೊಂದಿಗೆ ರಮೇಶ್ ಜಾರಕಿಹೊಳಿ ಭೇಟಿ: ಸರ್ಕಾರದ ಭವಿಷ್ಯ ನಿರ್ಧಾರ?

|

ಬೆಳಗಾವಿ, ಜೂನ್ 06: ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರು ಈ ವಾರದ ಅಂತ್ಯದಲ್ಲಿ ತಮ್ಮ ಆಪ್ತ ಶಾಸಕರನ್ನು ಭೇಟಿ ಆಗಲಿದ್ದಾರೆ. ಮೈತ್ರಿ ಸರ್ಕಾರದ ಭವಿಷ್ಯ ಆ ಸಭೆಯ ಫಲಿತದ ಮೇಲೆ ನಿಂತಿದೆ ಎನ್ನಲಾಗಿದೆ.

ಸಭೆಗೆ ಎಷ್ಟು ಮಂದಿ ಶಾಸಕರು ಹಾಜರಾಗುತ್ತಾರೆ, ಹಾಜರಾದ ಶಾಸಕರು ತೆಗೆದುಕೊಳ್ಳುವ ನಿರ್ಣಯ ಇನ್ನಿತರ ವಿಷಯಗಳು ಮೈತ್ರಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿವೆ.

ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ಪುಣ್ಯಾನಂದ ಸ್ವಾಮೀಜಿ

ರಮೇಶ್ ಜಾರಕಿಹೊಳಿ ಈ ವಾರಾಂತ್ಯದಲ್ಲಿ ಬೆಂಗಳೂರಿನ ಗುಪ್ತ ಸ್ಥಳದಲ್ಲಿ ಸಭೆ ನಡೆಸಲಿದ್ದಾರೆ ಎನ್ನಲಾಗಿದ್ದು, ಮಹೇಶ್ ಕುಮಟಳ್ಳಿ, ಡಾ.ಸುಧಾಕರ್ ಸೇರಿದಂತೆ ಇನ್ನೂ ಕೆಲವು ಶಾಸಕರಿಗೆ ಸಭೆಗೆ ಆಹ್ವಾ ನೀಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್‌ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಜಾರಕಿಹೊಳಿ ಅವರು ಅತೃಪ್ತ ಶಾಸಕರನ್ನು ಕರೆದಿದ್ದು, ಪಕ್ಷ ಬಿಡುವ ಬಗ್ಗೆ, ಹಾಗೂ ಬಿಜೆಪಿಗೆ ಸೇರಿದರೆ ಸಿಗಲಿರುವ ಸ್ಥಾನ-ಮಾನದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸ್ವಾಮೀಜಿ ಹೇಳಿದ ಬುದ್ದಿಮಾತೇನು?

ನಿನ್ನೆ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಹ, ಬಿಜೆಪಿಗೆ ಬರುವ ಇತರೆ ಪಕ್ಷದವರನ್ನು ಗೌರವದಿಂದ ನಡೆಸಿಕೊಳ್ಳಬೇಕು, ಅವರನ್ನು ತಾತ್ಸಾರ ಮಾಡಬಾರದು ಎಂದು ಯಡಿಯೂರಪ್ಪ ಅವರು ಇತರೆ ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮುಖಂಡರ ಜೊತೆ ರಮೇಶ್ ಜಾರಕಿಹೊಳಿ ತಡರಾತ್ರಿ ಚರ್ಚೆ

ರಮೇಶ್ ಜಾರಕಿಹೊಳಿ ಹಾಗೂ ಅವರ ಆಪ್ತ ಶಾಸಕರನ್ನು ಕಾಂಗ್ರೆಸ್‌ನಲ್ಲಿಯೇ ಉಳಿಸಿಕೊಳ್ಳಲು ಮುಖಂಡರು ಶತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ. ಸಚಿವ ಸಂಪುಟದಲ್ಲಿ ಅತೃಪ್ತರಿಗೆ ಸ್ಥಾನ ನೀಡಬೇಕು ಎಂದು

ಯತ್ನಿಸಲಾಗುತ್ತಿದೆ ಆದರೆ ಉಳಿದವರು ಸಚಿವ ಸ್ಥಾನ ತೆರವು ಮಾಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.

English summary
Congress dissedent MLA Ramesh Jarkiholi is going to meet other congress dissedent MLAs this weekend. He main join BJP soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X