ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ರಕ್ಷಣೆಗೆ ಮಾಟ, ಮಂತ್ರ, ವಾಮಾಚಾರ?

By Mahesh
|
Google Oneindia Kannada News

Black Magic practice near Vidhansoudha
ಬೆಂಗಳೂರು, ಅ.8: ರಾಜಕಾರಣಿಗಳಿಗೆ ನಂಬಿಕೆಗಳಿರುತ್ತದೆಯೋ ಇಲ್ಲವೋ ಮೂಢನಂಬಿಕೆಗಳಂತೂ ಇದ್ದೇ ಇರುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಇಂದು ವಿಧಾನಸೌಧದ ಬಳಿ ಮಾಟ, ಮಂತ್ರದ ಅವಶೇಷಗಳು ಕಂಡು ಬಂದಿದೆ. ಮಾನ್ಯ ಮುಖ್ಯಮಂತ್ರಿಗಳು ವಿಧಾನಸೌಧಕ್ಕೆ ಅಷ್ಟ ದಿಗ್ಬಂಧನ ಹಾಕಿಸಿದ್ದರೂ, ಅದನ್ನು ಹೊಡೆದು ಹಾಕುವ ಮಾಟ ಯಾರದರೂ ಮಾಡಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ವಿಧಾನಸೌಧ ಮುಖ್ಯದ್ವಾರದ ಪೂರ್ವ ಭಾಗದಲ್ಲಿ ಮರವೊಂದರ ಕೆಳಗೆ ಮಾಟ, ಮಂತ್ರ ಮಾಡಿ ಅರಿಶಿನ ನೀರು ಚೆಲ್ಲಿ ಹೋಗಿರುವ ಕುರುಹುಗಳು ಪತ್ತೆಯಾಗಿದೆ. ಅಮಾವಾಸ್ಯೆಯ ದಿನದಮ್ದು ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಯಾರು, ಯಾವ ಉದ್ದೇಶಕ್ಕೆ ಈ ಮಾಟ ಮಾಡಿಸಿದ್ದಾರೆ ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಆದರೆ, ಇದು ಕಿಡಿಗೇಡಿಗಳ ಕೃತ್ಯ ಎಂದು ವಿಧಾನಸೌಧ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೂರ್ವದಿಕ್ಕಿನ ದ್ವಾರದ ಬಳಿ ಮರದ ಕೆಳಗೆ ಕೋಳಿ ತಲೆ, ಗೊಂಬೆ, ಮೊಳೆ ಚುಚ್ಚಿದ ನಿಂಬೆ ಹಣ್ಣು, ಅರಿಶಿನ ನೀರು ಕಂಡು ಬಂದಿದೆ. ಪೊಲೀಸ್ ಸರ್ಪಗಾವಲಿನ ನಡುವೆ ವಿಧಾನಸೌಧದ ಬಳಿ ಬಂದು ಮಾಟ ಮಾಡಿರುವುದು ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಈ ಹಿಂದೆ ದೇವೇಗೌಡರಿಂದ ಹಿಡಿದು ಅನೇಕಾನೇಕ ಘಟಾನುಘಟಿ ರಾಜಕಾರಣಿಗಳ ಮೇಲೆ ವಶೀಕರಣ, ವಾಮಾಚಾರ ಪ್ರಯೋಗದ ಬಗ್ಗೆ ಆರೋಪ ಹೊರೆಸಲಾಗಿತ್ತಾದರೂ ಯಾವುದೂ ದೃಢಪಟ್ಟಿರಲಿಲ್ಲ. ವಿಧಾನಸೌಧದಲ್ಲಿ ಇಂದು ಕಂಡು ಬಂದಿರುವ ವಾಮಚಾರ ಪ್ರಯೋಗ ಸರ್ಕಾರದ ಪರವೋ ಅಥವಾ ವಿರೋಧವೋ ತಿಳಿದುಬಂದಿಲ್ಲ.

ಯಾರೋ ಕಿಡಿಗೇಡಿಗಳು ತಮಾಷೆಗೆ ಕೋಳಿ ತಲೆ, ನಿಂಬೆ ಹಣ್ಣು ಎಸೆದಿದ್ದಾರೆ ಎನ್ನುವಂತಿಲ್ಲ. ಕಾರಣ, ವಾಮಾಚಾರಿಗಳು ಬಳಸುವ ವಿಧಾನದಲ್ಲೇ ಎಲ್ಲಾ ಅವಶೇಷಗಳು ಕಂಡುಬಂದಿದ್ದು ಅನುಮಾನಕ್ಕೆ ಎಡೆ ಮಾಡಿದೆ ಎಂದು ವಿಧಾನಸೌಧದ ಸಿಬ್ಬಂದಿ ಹೇಳುತ್ತಾರೆ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X