ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಘೋಷಣೆ: ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ್ದ ಈಶ್ವರಪ್ಪ

ಶಿವಮೊಗ್ಗ, ಮಾರ್ಚ್ 16 : ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಬಂಜಾರ ಕನ್ವೆನ್ಷನ್​ ಹಾಲ್​ನಲ್ಲಿ ಮಾಜಿ ಸಚಿವ ಹಾಗೂ ಕುರುಬ ಸಮುದಾಯದ ನಾಯಕರ ಕೆ ಎಸ್‌ ಈಶ್ವರಪ್ಪ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ

Will Contest As Independent Candidate In Shivamogga Loksabha Constituency Announced By KS Eshwarappa

ಸಭೆಯ ಬಳಿಕ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ. ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇನ್ನೂ ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ನಿರ್ಧರಿಸುವೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿ ಶಿವಮೊಗ್ಗದಿಂದ ಸ್ಪರ್ಧೆಗೆ ರೆಡಿಯಾಗಿದ್ದಾರೆ.

ನಿನ್ನ ಮಗನ ಎಂಪಿ ಮಾಡಿದ್ದೀರಾ ಇನ್ನೊಬ್ಬ ಮಗನಿಗೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೀರಾ. ಒಬ್ಬ ಎಂಪಿ ಇನ್ನೊಬ್ಬ ಎಂಎಲ್ಎ ಹಾಗೂ ರಾಜ್ಯಾಧ್ಯಕ್ಷ. ನಾನು ಪ್ರಾಣ ಹೋದರು ಮೋದಿ ವಿರುದ್ಧ ಹೋಗಲ್ಲ. ನನ್ನ ಎದೆ ಬಗೇದರೆ ಒಂದು ಕಡೆ ಶ್ರೀರಾಮ ,ಇನ್ನೊಂದು ಕಡೆ ಮೋದಿ. ಯಡಿಯೂರಪ್ಪ ಎದೆ ಬಗಿದರೆ ಒಂದು ಕಡೆ ಇಬ್ಬರು ಮಕ್ಕಳು ಇನ್ನೊಂದು ಕಡೆ ಶೋಭಾ ಅಂತ ಕಾರ್ಯಕರ್ತರು ಹೇಳುತ್ತಿದ್ದಾರೆ. ನನ್ನ ಭಾರತ ಅದೇ ನನ್ನ ಪರಿವಾರ ಅಂತ ಮೋದಿ ಹೇಳುತ್ತಾರೆ. ಆದ್ರೆ ಕರ್ನಾಟಕದಲ್ಲಿ ಏನು ಇದನ್ನು ನೋಡಿ‌ ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಕಿಡಿಕಾರಿದರು.

ಯಡಿಯೂರಪ್ಪ ನವರು ಎಲ್ಲರಿಗೂ ಹೇಳಿದರು ನಾನು ಟಿಕೆಟ್ ಕೊಡಿಸುತ್ತೇನೆ ಅಂತ ಹೇಳಿದ್ರು. ನಾನು ಸ್ವಾರ್ಥಕ್ಕಾಗಿ ಈ ಸಭೆ ಕರೆದಿಲ್ಲ, ಕೇಂದ್ರದಲ್ಲಿ ಚೆರ್ಚೆ ಆಗುವುದಕ್ಕಿಂತ ಮುಂಚೆ ಶೋಭಾ ಗೆಲ್ಲಿಸಿ ಅಂದ್ರೂ, ನಾನು ಸುಳ್ಳು ಹೇಳುತ್ತಿದ್ದೇನೆ ಅಂದರೆ ನನ್ನ ಮಗ ಹಾಳಾಗಲಿ.

Will Contest As Independent Candidate In Shivamogga Loksabha Constituency Announced By KS Eshwarappa

ಬೊಮ್ಮಾಯಿ ಹೇಳಿದ್ರೂ ನಾನು ನಿಲಲ್ಲ ಎಂದರೂ. ಆಗ ಬೊಮ್ಮಾಯಿಯನ್ನ ನಂಬಬೇಡಿ ಅಂದಿದ್ರೂ, ಬೊಮ್ಮಾಯಿ ಹೆಸರು ಅವರಿಗೆ ಆಸಕ್ತಿ ಇಲ್ಲದಿದ್ದರು ಹೇಗೆ ಬಂತು ಗೊತ್ತಿಲ್ಲ. ಗೋ ಬ್ಯಾಕ್ ಶೋಭಾ ಅಂತ ಇಡೀ ಚಿಕ್ಕಮಗಳೂರಿನ ಕಾರ್ಯಕರ್ತರು ಅಂದ್ರೂ. ಸಿ.ಟಿ ರವಿಗೆ ಚಿಕ್ಕಮಗಳೂರಿಗೆ ಕೊಡುತ್ತಾರೆ ಅಂದುಕೊಂಡಿದ್ದೆ, ಸಿಟಿ ರವಿ,ಸದಾನಂದ ಗೌಡ,ನಳೀನ್ ಕುಮಾರ್ ಕಟೀಲ್ ,ಪ್ರತಾಪ್ ಸಿಂಹನಿಗೆ ಯಾಕೇ ಟಿಕೆಟ್ ತಪ್ಪಿತು. ಅವರೆಲ್ಲ ಹಿಂದುತ್ವದ ಕಾರ್ಯಕರ್ತರು ಎಂದು ಆಕ್ರೋಶ ಹೊರಹಾಕಿದರು.

ನನ್ನ ಜೀವನದಲ್ಲಿ ಈ ರೀತಿಯ ದಿನ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ನರೇಂದ್ರ ಮೋದಿಯವರು ಹೇಳುತ್ತಿದ್ದ ಮಾತು ನೆನಪಿದೆ, ಕಾಂಗ್ರೆಸ್ ಕುಟುಂಬ ರಾಜಕಾರಣದ ಜೊತೆಗಿದೆ ಅನ್ನುತ್ತಿದ್ದರು. ಪ್ರಾಣ ಹೋದರು ನರೇಂದ್ರ ಮೋದಿ ಬಿಟ್ಟು ಇರಲ್ಲ. ಭಾರತೀಯ ಸಂಸ್ಕೃತಿ ಮೂಲಕ ನೀವು ಎಲ್ಲಾ ನಮ್ಮವರು ಎಂದವರು ಮೋದಿ, ನರೇಂದ್ರ ಮೋದಿ ಪ್ರಧಾನಿ ಆಗುವ ಮುಂಚೆ ದೇಶದ ಪರಿಸ್ಥಿತಿ ಬೇರೆ ಇತ್ತು.

ಕರ್ನಾಟಕದಲ್ಲಿ ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದೆ. ಇದನ್ನು ನೊಂದು ಹೇಳುತ್ತಿದ್ದೇನೆ, ನಾವು ಏನು ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ಕಾಯುತ್ತಿದ್ದಾರೆ. ಹಾವೇರಿಗೆ ಬಸವರಾಜ್ ಬೊಮ್ಮಾಯಿಗೆ ಹಾಗೂ ಚಿಕ್ಕಮಗಳೂರಿಗೆ ಶೋಭಾಗೆ ಹಠ ಹೀಡಿದಿದ್ದಾರೆ ಅಂತ. ಯಡಿಯೂರಪ್ಪ ನವರ ಮನೆಗೆ ಹೋದಾಗ, ಈಶ್ವರಪ್ಪ ಅವರಿಗೂ ಭವಿಷ್ಯ ಇದೆ. ಕಾಂತೇಶ್ ಅವರಿಗೂ ಭವಿಷ್ಯ ಇದೆ ಅಂದಿದ್ರೂ. ಯಡಿಯೂರಪ್ಪ ನವರಿಗೆ ಕಾಂತೇಶ್ ಕೇಳಿದಾ. ನೀವು ಅವಕಾಶ ಮಾಡಿಕೊಟ್ಟರೆ ಸ್ಪರ್ಧಿಸುತ್ತೇನೆ ಅಂದ. ಆಗ ಯಡಿಯೂರಪ್ಪ ಹೇಳಿದ್ರೂ ಟಿಕೆಟ್ ಕೊಡಿಸುತ್ತೇನೆ ಜೊತೆ ನಾನು ಪ್ರಚಾರಕ್ಕೆ ಬರ್ತನೆ ಅಂದ್ರೂ. ಕಾಂತೇಶ್ ಹಾವೇರಿಯಿಂದ ನಿಂತರೆ ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+