ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್ ವೆಲ್ತ್ ಕ್ರೀಡೆಗೆ ಆನ್ ಲೈನ್ ಟಿಕೆಟ್

By Mahesh
|
Google Oneindia Kannada News

CWG 2010 Ticket
ನವದೆಹಲಿ, ಅ.3: ಹಲವಾರು ವಿವಾದಗಳ ಧೂಳನ್ನು ಮೈ ಮೇಲೆ ಹಾಕಿಕೊಂಡಿದ್ದ 19 ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಆಯೋಜಕರು, ಮೈಕೊಡವಿಕೊಂಡು ಮೇಲೆದ್ದಿದ್ದಾರೆ. ಇಂದು ರಾತ್ರಿ 7 ಗಂಟೆಗೆ ಎಪ್ಪತ್ತು ಸಾವಿರ ಕೋಟಿ ರೂ ವೆಚ್ಚದ ಈ ಮಹಾನ್ ಕ್ರೀಡಾಕೂಟಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ಬ್ರಿಟನ್ ಮಹಾರಾಣಿಯ ಪರವಾಗಿ ರಾಜಕುಮಾರ ಚಾರ್ಲ್ಸ್ ಕ್ವೀನ್ಸ್ ಬೇಟನ್ ಪಡೆದು, ಕ್ರೀಡಾ ಕೂಟವನ್ನು ಉದ್ಘಾಟಿಸಲಿದ್ದಾರೆ.

ಈಗಾಗಲೇ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ನಡೆಯುತ್ತಿರುವ ಜವಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ಜನರು ಮುಗಿಬಿದ್ದು ಬರುತ್ತಿದ್ದಾರೆ. ಸುಮಾರು 17 ಕ್ಕೂ ಹೆಚ್ಚು ಸ್ಪರ್ಧೆಗಳನ್ನು ನೋಡಲು ಜನರು ಟಿಕೆಟ್ ಖರೀದಿಯಲ್ಲಿ ನಿರತರಾಗಿದ್ದಾರೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ವಿಫುಲ ಅವಕಾಶ ಒದಗಿಸಲಾಗಿದ್ದು, 1ಸಾವಿರರು ನಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ.

ಕಾಮನ್ ವೆಲ್ತ್ ಕ್ರೀಡಾಕೂಟದ ಅಧಿಕೃತ ವೆಬ್ ತಾಣ ದ ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ, ಸಾವಿರ ರು ನಿಂದ ಹಿಡಿದು 50 ಸಾವಿರ ಮುಖಬೆಲೆಯ ಟಿಕೆಟ್ ಗಳಿದ್ದರೂ, ಜನರ ಬೇಡಿಕೆ ಹೆಚ್ಚುತ್ತಿದೆ.

ವಿವಿಧ ಪ್ಯಾಕೇಜ್ ಗಳಲ್ಲಿ ಟಿಕೆಟ್ ಗಳು ಲಭ್ಯವಿದ್ದು, ರು 50 ರಿಂದ 1000 ರು ವರೆಗಿನ ಪ್ಯಾಕೇಜ್ ಮೂಲಕ ಎಲ್ಲಾ ಸ್ಪರ್ಧೆಗಳನ್ನು ವೀಕ್ಷಿಸುವ ಅವಕಾಶ ನೀಡಲಾಗಿದೆ ಎಂದು ಆನ್ ಲೈನ್ ಟಿಕೆಟ್ ಖರೀದಿ ಸೌಲಭ್ಯ ಉದ್ಘಾಟಿಸಿದ ಕ್ರೀಡಾಕೂಟದ ಮುಖ್ಯಸ್ಥ ಸುರೇಶ್ ಕಲ್ಮಾಡಿ ಹೇಳಿದರು.

19 ನೇ ಕಾಮನ್ ವೆಲ್ತ್ ಗೇಮ್ಸ್ ಮುಖ್ಯಾಂಶಗಳು

* 71 ದೇಶಗಳನ್ನು ಸುತ್ತಿ ಬಂದ ಕ್ವೀನ್ ಬೇಟನ್ ಇಂದು ಪ್ರಿನ್ಸ್ ಚಾರ್ಲ್ಸ್ ಗೆ ಹಸ್ತಾಂತರ
* ಸುಮಾರು ಎಪ್ಪತ್ತು ಸಾವಿರ ಕೋಟಿ ರು ವೆಚ್ಚದ ಕ್ರೀಡಾಕೂಟದ ಲಾಂಛನ ಶೇರಾ(ಹುಲಿ).
* ಸುಮಾರು 17 ಸ್ಪರ್ಧೆಗಳಲ್ಲಿ 829 ಪದಕಗಳನ್ನು ಪಣಕ್ಕಿಡಲಾಗಿದೆ.
* 71 ದೇಶಗಳ 7 ಸಾವಿರ ಮಂದಿ ಕ್ರೀಡಾಳುಗಳು ಪಾಲ್ಗೊಳ್ಳಲಿದ್ದಾರೆ.
* ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಶೂಟರ್ ಅಭಿನವ್ ಬಿಂದ್ರಾ ತ್ರಿವರ್ಣ ಧ್ವಜ ಹಿಡಿದು ಮುನ್ನೆಡೆಸಲಿದ್ದಾರೆ.
* ಉದ್ಘಾಟನೆ ಕಾರ್ಯಕ್ರಮ ಸೇರಿದಂತೆ ಮೂರು ಗಂಟೆಗಳ ಸಾಂಸ್ಕೃತಿಕ ಕಾರ್ಯಗಳು ನಡೆಯಲಿವೆ.
* ಕರ್ನಾಟಕದ ಡೊಳ್ಳು ಕುಣಿತ ಸೇರಿದಂತೆ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ ಅನಾವರಣಗೊಳ್ಳಲಿದೆ.
* ಎ ಆರ್ ರೆಹಮಾನ್ ಅವರ ಸಂಯೋಜನೆಯ 'ಜೀಯೋ, ಉಠೋ, ಬಡೋ, ಜೀತೋ..' ಗೀತೆ ಎಲ್ಲರ ಆಕರ್ಷಣೆಯಾಗಲಿದೆ.

ಟಿಕೆಟ್ ಖರೀದಿದಾರರಿಗೆ ಅನುಕೂಲಕ್ಕಾಗಿ ವಿಶೇಷ ದೂರವಾಣಿ ಸಂಖ್ಯೆ (1800-200-1294) ಯನ್ನು ನೀಡಲಾಗಿದ್ದು, ಟಿಕೆಟ್ ಖರೀದಿ ಹಾಗೂ ವಸತಿ, ಪ್ರವಾಸದ ಬಗ್ಗೆ ಅಗತ್ಯ ಮಾಹಿತಿ ನೀಡಲು ಸಿದ್ಧವಾಗಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X