ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿಗಳಲ್ಲಿ ಬಡಮಕ್ಕಳ ಸಂಖ್ಯೆ ಹೆಚ್ಚು

By Mrutyunjaya Kalmat
|
Google Oneindia Kannada News

Student
ಕಾನ್ಪುರ್, ಆ. 23 : ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಐಐಟಿ-ಐಎಂಎಂ ಗಳು ಶ್ರೀಮಂತರ ಮಕ್ಕಳಿಗೆ ಅಥವಾ ದೊಡ್ಡ ದೊಡ್ಡ ಶಾಲಾ ಕಾಲೇಜಿನಲ್ಲಿ ಇಂಗ್ಲಿಷ್ ಮೀಡಿಯಂ ವಿದ್ಯಾಭ್ಯಾಸದ ಮಾಡಿದವರಿಗೆ ಮಾತ್ರ ಎಂಬ ಭ್ರಮೆ ಬಹುತೇಕರಲ್ಲಿ ಇದೆ. ಆದರೆ, 2010ರ ಐಐಟಿ-ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವವರಲ್ಲಿ ಶೇ.35 ರಷ್ಟು ವಿದ್ಯಾರ್ಥಿಗಳು ಬಡವರ ಮಕ್ಕಳು ಎನ್ನುವುದು ವಿಶೇಷ.

ಇತ್ತೀಚೆಗೆ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿರುವ 9075 ಅಭ್ಯರ್ಥಿಗಳಲ್ಲಿ ಶೇಕಡಾ 35 ರಷ್ಟು ಅಭ್ಯರ್ಥಿಗಳು ತೀರಾ ಬಡ ಕುಟುಂಬದಿಂದ ಬಂದವರಾಗಿದ್ದಾರೆ. ಉತ್ತೀರ್ಣರಾದವರಲ್ಲಿ ಶೇಕಡಾ 40ರಷ್ಟು ಅಭ್ಯರ್ಥಿಗಳು ಟ್ಯೂಶನ್ ಪಡೆದಿಲ್ಲ ಎಂಬುದು ಕಾನ್ಪುರ ಐಐಟಿ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.

ಐಐಟಿಗೆ ಶ್ರೀಮಂತ ಕುಟುಂಬದ ಮಕ್ಕಳು ಮಾತ್ರ ಪ್ರವೇಶ ಸಾಧ್ಯ ಎಂಬುದನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸುಳ್ಳು ಮಾಡಿದ್ದಾರೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಖಾಸಗಿ ಟ್ಯೂಶನ್ ಪಡೆಯದೆ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಪ್ರತಿಷ್ಠಿತ ಕಾಲೇಜುಗಳ ಹೊಸ್ತಿಲು ತುಳಿದಿದ್ದು ಸ್ವಾಗತಾರ್ಹ ಬೆಳವಣಿಗೆ ಎಂದು ಕಾನ್ಪುರ ಐಐಟಿ ನಿರ್ದೇಶಕ ಸಂಜಯ್ ಗೋವಿಂದ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X