ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಡಿಕ್ಲೇಮ್ :ನಗದು ರಹಿತ ಚಿಕಿತ್ಸೆ ಮತ್ತೆ ಲಭ್ಯ

By Mahesh
|
Google Oneindia Kannada News

‎Cashless mediclaim to be restored from Aug 20
ಬೆಂಗಳೂರು, ಆ.20: ಬಹುದಿನಗಳಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕ್ಯಾಶ್‌ಲೆಸ್ (ನಗದು ರಹಿತ) ಸೌಲಭ್ಯ ಜಾರಿ ಕುರಿತಂತೆ ವಿಮಾಕಂಪನಿಗಳ ಜತೆಗಿನ ಒಡಂಬಡಿಕೆಗೆ ಖಾಸಗಿ ಆಸ್ಪತ್ರೆಗಳು ಸಹಿಹಾಕಿವೆ.

ದೇಶದಲ್ಲಿನ ಹೆಸರಾಂತ ಖಾಸಗಿ ಆಸ್ಪತ್ರೆಗಳಾದ ಅಪೋಲೋ ಹೆಲ್ತ್‌ಕೇರ್, ಮ್ಯಾಕ್ಸ್, ಮೆಡಿಸಿಟಿ ಹಾಗೂ ಪೋಟಿಸಿಟಿ ಆಸ್ಪತ್ರೆಗಳು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಶುಕ್ರವಾರದಿಂದಲೇ ಈ ಸೇವೆ ಲಭ್ಯವಾಗಲಿದೆ. ಇದರ ಹೊಣೆಯನ್ನು ಥರ್ಡ್ ಪಾರ್ಟಿ ಆಡಳಿತಾಧಿಕಾರಿ(TPA) ವಹಿಸಿಕೊಳ್ಳಲಿದ್ದು, ಅವರು ವಿಮೆ ಹೊಂದಿದ ವ್ಯಕ್ತಿ ಹಾಗೂ ಆಸ್ಪತ್ರೆಯೊಂದಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕ್ಯಾಶ್‌ಲೆಸ್ ಸೌಲಭ್ಯ ಲಭ್ಯ: ಈ ಯೋಜನೆ ಇಂದಿನಿಂದಲೇ ದೇಶಾದ್ಯಂತ ಜಾರಿಯಾಗಲಿದ್ದು, ಆಸ್ಪತ್ರೆಯ ವೆಚ್ಚಗಳನ್ನು ಟಿಪಿಎ ನಿರ್ಧರಿಸಲಿದೆ. ಕ್ಯಾಶ್‌ಲೆಸ್ ಸೌಲಭ್ಯ ಮಧ್ಯಂತರ ಅವಧಿಯಲ್ಲಿ ಜಾರಿಯಾಗಲಿದೆ ಎಂದು ಮ್ಯಾಕ್ಸ್ ಹೆಲ್ತ್ ಇನ್ಸ್‌ಟಿಟ್ಯೂಟ್‌ನ ವ್ಯವಸ್ಥಾಪಕ ನಿರ್ದೇಶಕ ಪರ್ವೇಜ್ ಅಹ್ಮದ್ ತಿಳಿಸಿದ್ದಾರೆ.

ಇಂದಿನಿಂದ ಈ ಯೋಜನೆ ತಾತ್ಕಲಿಕವಾಗಿ ಜಾರಿಯಾಗಲಿದ್ದು, ಸಂಬಂಧಪಟ್ಟ ನಾಲ್ಕು ಸಾರ್ವಜನಿಕ ಸೇವಾ ವಿಮಾ ಕಂಪನಿಗಳು ಮುಂದೆ ಬಂದಿವೆ ಎಂದು ಅವರು ತಿಳಿಸಿದ್ದಾರೆ. ಆದರೆ ಲೆಕ್ಕಾಚಾರದ ಅಂತಿಮ ವರದಿಯನ್ನು ಮುಂದಿನ 30 ರಿಂದ 40 ದಿನಗಳ ಒಳಗಾಗಿ ಅಂತಿಮಗೊಳ್ಳಲಿದ್ದು, ಇದರಂತೆ ಪ್ರತಿಯೊಬ್ಬ ರೋಗಿಗೂ ವಿಶ್ವಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ.

ದುಬಾರಿ ಚಿಕಿತ್ಸೆ ಭಯಬೇಡ: ಪ್ರಸಕ್ತ ದೇಶದ 449 ಕಾರ್ಪೋರೇಟ್ ಆಸ್ಪತ್ರೆಗಳು ಕ್ಯಾಶ್‌ಲೆಸ್ ನೆಟ್‌ವರ್ಕ್ ವ್ಯಾಪ್ತಿಗೆ ಒಳಪಡಲಿದ್ದು, ಇದರಿಂದ ಬಡರೋಗಿಗಳು ಮುಂದಿನ ದುಬಾರಿ ಚಿಕಿತ್ಸೆಗಾಗಿ ಇನ್ನು ಭಯಪಡುವ ಅಗತ್ಯವಿಲ್ಲ. ಇತ್ತೀಚಿಗಷ್ಟೇ ನ್ಯೂ ಇಂಡಿಯಾ ಆಶ್ಯುರೆನ್ಸ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್, ನ್ಯಾಷನಲ್ ಇನ್ಸೂರೆನ್ಸ್ ಹಾಗೂ ಒರಿಯಂಟಲ್ ಇನ್ಸೂರೆನ್ಸ್ ಕಂಪನಿಗಳು ಕ್ಯಾಶ್‌ಲೆಸ್ ಸೌಲಭ್ಯದಿಂದ ಹಿಂದೆ ಸರಿದಿದ್ದವು. ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ನಿಗದಿ ಮಾಡುತ್ತಿವೆ ಎಂದು ಆರೋಪಿಸಿತ್ತು.

ಖಾಸಗಿ ಆಸ್ಪತ್ರೆಗಳನ್ನು ಅದರ ಸೌಲಭ್ಯಕ್ಕೆ ಅನುಗುಣವಾಗಿ ಎ,ಬಿ,ಸಿ ಎಂದು ವಿಂಗಡಿಸಲಾಗಿದ್ದು, ಅದರ ಅನುಗುಣವಾಗಿ ಬಿಲ್ಲಿಂಗ್ ವ್ಯವಸ್ಥೆ ಜಾರಿಯಾಗಲಿದೆ. ಈ ಒಂದು ಅವಕಾಶದಿಂದ ಖಾಸಗಿ ವಿಮಾ ಕಂಪನಿಗಳು ಸಹ ನಷ್ಟದಿಂದ ಪಾರಾಗಲಿವೆ. ಅಂದಾಜಿನ ಪ್ರಕಾರ ದೇಶದಾದ್ಯಂತ 8 ಕೋಟಿಗೂ ಅಧಿಕ ವೈದ್ಯಕೀಯ ವಿಮಾ ಪಾಲಿಸಿ ಹೊಂದಿದವರಿದ್ದು, ಅದರ ಲಾಭವನ್ನು ಪಡೆಯಲು ವಿಮಾ ಕಚೇರಿಗೆ ಅಲೆಯಬೇಕಿದ್ದ ಪ್ರಮೇಯ ಮುಂದಿನ ದಿನಗಳಲ್ಲಿ ಕೊನೆಯಾಗಲಿದೆ.

ಕಳೆದೊಂದು ವರ್ಷದಿಂದ ಈಚೆಗೆ ಖಾಸಗಿ ವಿಮಾ ಕಂಪನಿಗಳಿಗೆ ಬೆಂಗಳೂರು, ದೆಹಲಿ, ಮುಂಬೈ, ದಿಲ್ಲಿಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗಳು ಹೆಚ್ಚಿನ ದರ ನಿಗದಿಪಡಿಸಿದ್ದರಿಂದ 2000 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X