ಕರ್ನಾಟಕ: ಆಟೋ ರಿಕ್ಷಾ ಚಾಲಕರು, ಮಕ್ಕಳು, ಮಹಿಳೆಯರು, ಯುವಕರಿಗೆ ನೆರವಾಗುವ ಯೋಜನೆಗಳಿಗೆ ಚಾಲನೆ ಸಿಕ್ಕಿದೆ, ಯಾವುವು? ತಿಳಿಯಿರಿ
ಬೆಂಗಳೂರು, ಮಾರ್ಚ್ 23: ಕರ್ನಾಟಕದ ಲಕ್ಷಾಂತರ ಆಟೋ ಚಾಲಕರಿಗೆ 'ವಿಮಾ ನಿಧಿ ಯೋಜನೆ' ಮತ್ತವರ ಮಕ್ಕಳಿಗೆ 'ವಿದ್ಯಾನಿಧಿ'ಮತ್ತು ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ಮಹಿಳೆಯರಿಗೆ 'ಸಮುದಾಯ ಬಂಡವಾಳ ನಿಧಿ ವಿತರಣೆ', ಗ್ರಾಮೀಣ ಭಾಗದಲ್ಲಿ ಹೆಚ್ಚಿರುವ ಕುರಿಗಾಯಿಗಳಿಗೆ ಅನುಕೂಲಕರವಾದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ' ಚಾಲನೆ ನೀಡಿದರು.
ಇದೇ ವೇಳೆ ರಾಜ್ಯದ ಯುವಕರಿಗೆ ಉದ್ಯೋಗ ಒದಗಿಸುವ ಹೊಸ 'ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ' ಸಹ ರಾಜ್ಯ ಸರ್ಕಾರದಿಂದ ಹಸಿರು ನಿಶಾನೆ ದೊರೆಯಿತು.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ವಿತರಣೆ ಮಾಡಿದರು.
ಅಷ್ಟೆ ಅಲ್ಲದೇ ಆಟೋ ಚಾಲಕರಿಗೆ ವಿಮೆ ಯೋಜನೆ, ಕುರಿಗಾರರಿಗಾಗಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಬೊಮ್ಮಾಯಿಯವರು ಚಾಲನೆ ನೀಡಿ ಯೋಜನೆಗಳನ್ನು ಉದ್ದೇಶಿಸಿ ಮಾತನಾಡಿದರು.

ದುಡಿಮೆಗೆ ಗೌರವ ಸಿಗಬೇಕು: ಬೊಮ್ಮಾಯಿ
ದುಡಿಮೆಗೆ ಗೌರವ ದೊರೆತರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು 'ಶಕ್ತಿ ನಿಮ್ಮ ಒಳಗಡೆ ಇದೆ. ನೀವು ಏನು ಬೇಕಾದರು ಮಾಡಬಲ್ಲಿರಿ' ಎಂದಿದ್ದಾರೆ. ಮನಸ್ಸಿನಲ್ಲಿ ಸಂಕಲ್ಪ ಸಾಧಿಸುವ ಛಲ ಇದ್ದರೆ ಏನಾದರೂ ಸಾಧಿಸಬಹುದು. ನಿರಂತರ ಪ್ರಯತ್ನ ವಿದ್ದರೆ ಯಾವುದೂ ಅಸಾಧ್ಯವಲ್ಲ. ದುಡಿಮೆಗೆ ಪ್ರೋತ್ಸಾಹ ನೀಡಲು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ 12 ಸಾವಿರ ಯುವ ಸಂಘಗಳನ್ನು ರಚಿಸಿ ಅವರಿಗೆ ತರಬೇತಿ, ಉತ್ಪಾದನೆ, ಮಾರುಕಟ್ಟೆ, ಬ್ಯಾಂಕ್ ಸಹಾಯ ನೀಡಿ ಸ್ವಯಂ ಉದ್ಯೋಗಿಗಳಾಗಳು ನೆರವು ನೀಡಲಾಗುತ್ತಿದೆ. ನಮ್ಮ ಯುವಕರು ಕೈ ಚಾಚಬಾರದು ಅವರು ಕೊಡುವ ಕೈ ಯಾಗಬೇಕು. ಈ ರೀತಿಯ ಯೋಜನೆ ರಾಜ್ಯದಲ್ಲಿ ಈವರೆಗೆ ಇರಲಿಲ್ಲ. ಗ್ರಾಮೀಣ ಭಾಗದ ಯುವಕರು ನಿರುದ್ಯೋಗಗಳಾಗಿದ್ದು ಅಲ್ಲಿಯೇ ಸಂಘ ರಚಿಸಿ ಉತ್ಪಾದನೆ ಮಾಡಿದರೆ, ಅವರು ಈ ನಾಡು ಕಟ್ಟಲು ಮುಂದಾಗುತ್ತಾರೆ. ಗ್ರಾಮೀಣ ಭಾಗದ ಯುವಕರು ಕೆಲಸವಿಲ್ಲದೇ ಇರಬಾರದು ಎಂದರು.
ಮಹಿಳೆಯರ ಸಾಮರ್ಥ್ಯ ರಾಜ್ಯಕ್ಕೆ ಉಪಯೋಗ ಆಗಬೇಕು ಎಂದು ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈಗಾಗಲೇ ಮೊದಲ ಕಂತು 50 ಸಾವಿರ ರೂ.ಗಳನ್ನು 10 ಸಾವಿರ ಸಂಘಕ್ಕೆ ನೀಡಿದ್ದು, ಎರಡನೇ ಕಂತಿನಲ್ಲಿ 50 ಸಾವಿರ ರೂ.ದೊರೆಯಲಿದೆ. 20 ಸಾವಿರ ಸಂಘಗಳಿಗೆ ನೇರವಾಗಿ ಅವರ ಖಾತೆಗಳಿಗೆ ಜಮಾ ಆಗಿದೆ. ಅವರಿಗೂ ತರಬೇತಿ ನೀಡಿ ಉತ್ಪಾದನೆಗೆ ಪೂರಕವಾಗಿ ನೆರವು ನೀಡಲಾಗುತ್ತಿದೆ ಎಂದರು. ಈ ವರ್ಷದ ಬಜೆಟ್ ನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ.ಗಳನ್ನು ನೀಡುವ ಯೋಜನೆಗೆ ಅನುದಾನ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಆಟೋ ಚಾಲಕರಿಗೆ ವಿಮೆ, ಅವರ ಮಕ್ಕಳಿಗೆ ವಿದ್ಯಾನಿಧಿ
ರಾಜ್ಯದಲ್ಲಿ 2.5 ಲಕ್ಷ ಆಟೊ ಚಾಲಕರಿದ್ದು,ಅವರಿಗಾಗಿ ಈ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ. 15 ಸಾವಿರ ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ವಿಸ್ತರಿಸಲಾಗಿದೆ. ಶಾಲಾ/ ಕಾಲೇಜು ಪ್ರವೇಶ ಪ್ರಮಾಣ ಪತ್ರ ನೀಡುವವರಿಗೆ 2500 ರೂ.ಗಳಿಂದ 11 ಸಾವಿರ ರೂ.ಗಳ ವರೆಗೆ ನೀಡಲಾಗುವುದು.
ನಾಡಿನ ಕುರಿಗಾಹಿಗಳಿಗೆ ಆರ್ಥಿಕ ಸಹಾಯ
ನೆಲೆಯಿಲ್ಲದ ಕುರಿಗಾಹಿಗಳಿಗೆ ಕಳೆದ ವರ್ಷ ಕುರಿ ದೊಡ್ಡಿ ನಿರ್ಮಾಣ ಮಾಡಲು ಅನುದಾನ ನೀಡಲಾಗುತ್ತಿದೆ. ಕುರಿಗಾಹಿಗಳಿಗೆ 355 ಕೋಟಿ ರೂಪಾಯಿ ಮೀಸಲಿಡಲಾಗಿದೆ. 20 ಕುರಿ ಒಂದು ಮೇಕೆಯನ್ನು ಕೊಳ್ಳಲು ಪ್ರತಿಯೊಬ್ಬರಿಗೆ 1.31 ಲಕ್ಷ ನೀಡಿ ವರ್ಷ 20 ಸಾವಿರ ಕುರಿಗಾಹಿಗಳಿಗೆ ನೀಡಿದ್ದೇವೆ. ಕುರಿ ಉಣ್ಣೆ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ ಎಂದು ತಿಳಿಸಿದರು.












Click it and Unblock the Notifications