ಹಣಕ್ಕಾಗಿ ಸಾಯುವ ನಾಟಕ : 'ಬದುಕಿದ್ದ' ಮಹಿಳೆ ಬಂಧನ

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್ 27: ಒಂದು ಕೋಟಿ ಜೀವ ವಿಮೆ ಹಣದ ಆಸೆಗಾಗಿ ಹೆಂಡತಿ ಸತ್ತಿದ್ದಾಳೆ ಎಂದು ನಕಲಿ ಪ್ರಮಾಣ ಪತ್ರ ನೀಡಿ ಸಿಕ್ಕಿಹಾಕಿಕೊಂಡಿರುವ ಘಟನೆ ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಲ್ಲಿ ನಡೆದಿದೆ.

35 ವರ್ಷದ ಶಕೀಲ್ ಅಲಮ್ ಎಂಬಾತ ತನ್ನ ಮಡದಿ ಎದೆ ನೋವಿನಿಂದ ಸತ್ತಿರುವುದಾಗಿ ಖಾಸಗಿ ವಿಮಾ ಸಂಸ್ಥೆಗೆ ನಕಲಿ ಪ್ರಮಾಣ ಪತ್ರ, ನಕಲಿ ಆಸ್ಪತ್ರೆ ಬಿಲ್, ಮರಣ ಪತ್ರಗಳನ್ನು ನೀಡಿ ಜೀವ ವಿಮೆ ಮೊತ್ತ ಒಂದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.

ಶಕೀಲ್ ಅಲಮ್ ತನ್ನ ಪತ್ನಿ ಹೆಸರಿಗೆ 2012ರಲ್ಲಿ 1 ಕೋಟಿ ರೂಪಾಯಿ ಜೀವ ವಿಮೆ ಮಾಡಿಸಿದ್ದ, ಪ್ರತಿ ತಿಂಗಳು 11 800 ಪ್ರೀಮಿಯಂ ಹಣ ತುಂಬಿಸುತ್ತಿದ್ದ.

Man submits fake death certificate of his wife to claim Insurance

ವಿಮಾ ಮೊತ್ತ ನೀಡುವ ಮುಂಚೆ ಪರಿಶೀಲನೆ ನಡೆಸಿದ ವಿಮಾ ಸಂಸ್ಥೆಗೆ ಶಕೀಲ್ ಅಲಮ್ ಅವರ ಪತ್ನಿ ಬದುಕಿರುವುದಾಗಿ ತಿಳಿದುಬಂದಿದೆ. ಕೂಡಲೆ ವಿಮಾ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಶಕೀಲ್ ಅಹ್ಮದ್ ತಲೆ ತಪ್ಪಿಸಿಕೊಂಡಿದ್ದಾನೆ.

ಇದೇ ರೀತಿಯ ಮತ್ತೊಂದು ಪ್ರಕರಣ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲೇ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Hyderabad's Banjara hills area man Syed Shakeel Alam a real estate agent who allegedly submitted "fake" documents declaring that his policy holder wife had died, is on the run.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ