Paytmನಲ್ಲಿ ಪಿಎಂ ಜನ ಆರೋಗ್ಯ ಯೋಜನೆ: ಆಸ್ಪತ್ರೆಗಳ ಲಿಸ್ಟ್, ಪ್ರಯೋಜನ ತಿಳಿಯಿರಿ
ನಿಮ್ಮ ವಾಣಿಜ್ಯ ಮತ್ತು ವ್ಯವಹಾರದ ದಿನಬಳಕೆಯ ಪೇಟಿಎಂ ಅಪ್ಲಿಕೇಶನ್ ಈಗ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಸೌಲಭ್ಯಗಳನ್ನು ನೀವು ಪೇಟಿಎಂ ಮೂಲಕ ಪಡೆದುಕೊಳ್ಳಬಹುದು ಈ ಯೋಜನೆಯನ್ನು ಜನರಿಗೆ ಇನ್ನು ಹತ್ತಿದವಾಗಲು ಪೇಟಿಎಂ ಅಪ್ಲಿಕೇಶನ್ ಈಗ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY)ತನ್ನ ವೇದಿಕೆಯಲ್ಲಿ ತಂದಿದೆ. ಈಗ ನೀವು ಪೇಟಿಎಂ (Paytm) ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ಪಿಎಂ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಪಡೆಯಬಹುದು.
ಇದರಲ್ಲಿ ನೀವು ಈ ಯೋಜನೆಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದು ನಿಮಗೆ ತಿಳಿಯಲಿದೆ ಮತ್ತು ಈ ಯೋಜನೆಗೆ ಸಂಬಂಧಿಸಿದ ಇತರ ಕೆಲಸಗಳನ್ನು ಸಹ ಅಪ್ಲಿಕೇಶನ್ ಮೂಲಕ ಮಾಡಬಹುದು. ಇದು ಆರೋಗ್ಯ ರಕ್ಷಣೆಯಲ್ಲಿ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಭಾರತ ಸರ್ಕಾರದ ಮಿಷನ್‌ಗೆ ಅನುಗುಣವಾಗಿದೆ.
ಪೇಟಿಎಂ (Paytm) ಅಪ್ಲಿಕೇಶನ್ ಮೂಲಕ ಬಳಕೆದಾರರು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಪ್ರಯೋಜನಗಳನ್ನು ನೀಡುವ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಪಟ್ಟಿಯನ್ನು ಪ್ರವೇಶಿಸಬಹುದು. ಅರ್ಹ ಬಳಕೆದಾರರು ಈ ಯೋಜನೆಯಡಿ ದಾಖಲಾದ ಹತ್ತಿರದ ಆಸ್ಪತ್ರೆಯನ್ನು ಪತ್ತೆ ಮಾಡಬಹುದು ಮತ್ತು ಲಭ್ಯವಿರುವ ಆರೋಗ್ಯ ವಿಮೆಯ ಸಂಪೂರ್ಣ ಸ್ಪೆಕ್ಟ್ರಮ್‌ನ್ನು ಕೂಡ ಲಭ್ಯವಿದೆ. ತಮ್ಮ PMJAY ಆರೋಗ್ಯ ಕವರ್ ವಿವರಗಳನ್ನು ಆಸ್ಪತ್ರೆಯ ಸಲಹೆಗಾರರು ಮತ್ತು ಸಿಬ್ಬಂದಿಗೆ ತಮ್ಮ ಫೋನ್‌ಗಳಲ್ಲಿ ತೋರಿಸಬಹುದು.

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಬಗ್ಗೆ ತಿಳಿಯಿರಿ
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PMJAY) ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಅದು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ, ರೋಗಿಯ ಆಸ್ಪತ್ರೆಯ ವೆಚ್ಚಗಳು, ಆಸ್ಪತ್ರೆಯ ನಂತರದ ಆರೈಕೆ, ಆಹಾರ ಸೌಲಭ್ಯಗಳು, ಔಷಧಿ, ರೋಗನಿರ್ಣಯ ಮತ್ತು ಪ್ರಯೋಗಾಲಯ ಸೌಲಭ್ಯಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ. ಯೋಜನೆಯು ಕೋವಿಡ್ ಚಿಕಿತ್ಸೆಯನ್ನು ಸಹ ಒಳಗೊಂಡಿದೆ.

Paytm ಅಪ್ಲಿಕೇಶನ್‌ನಲ್ಲಿ ನೀವು ಪಿಎಂಜೆಎವೈಗೆ ಅರ್ಹರೇ ತಿಳಿಯುವುದು ಹೇಗೆ?
ಹಂತ 1: Paytm ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ
ಹಂತ 2: ಕೆಳಗೆ ಸ್ಕ್ರಾಲ್ ಮಾಡಿಬೇಕು, (Paytm Health) ಅಡಿಯಲ್ಲಿ ಪಿಎಂಜೆಎವೈ (PMJAY) ಆಯ್ಕೆಯನ್ನು ಕ್ಲಿಕ್ ಮಾಡಿ ಅಥವಾ ಹುಡುಕಾಟ ಪಟ್ಟಿಯಲ್ಲಿ ಪಿಎಂಜೆಎವೈ(PMJAY)ನ್ನು ಹುಡುಕಿದರೆ ಸರಳವಾಗಿ ಲಭ್ಯವಿದೆ.
ಹಂತ 3: ಚೆಕ್ ಅರ್ಹತೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 4: ನಿಮ್ಮ ರಾಜ್ಯವನ್ನು ನಮೂದಿಸಿ
ಹಂತ 5: ವಿವರಗಳನ್ನು ಭರ್ತಿ ಮಾಡಿ ಅಂದರೆ ಹೆಸರು, ರೇಷನ್ ಕಾರ್ಡ್, HHD ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು RSBY URN
ಹಂತ 6: ಕುಟುಂಬದ ಸದಸ್ಯರೊಂದಿಗೆ ಬಳಕೆದಾರರ ವಿವರಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ ನಂತರ ನೀವು ಈ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಬಹುದು.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಪ್ರಯೋಜನಗಳು
ಕೇಂದ್ರ ಸರ್ಕಾರವು ಫೆಬ್ರವರಿ 2018 ರಲ್ಲಿ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿತ್ತು, ಆದರೆ ಯೋಜನೆಯನ್ನು ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ವಾರ್ಷಿಕ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
*ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಮತ್ತು ಸಲಹೆ ವೆಚ್ಚ
*ಪೂರ್ವ ಆಸ್ಪತ್ರೆಗೆ ವೆಚ್ಚಗಳು
*ಆಸ್ಪತ್ರೆಯ ವಾಸ್ತವ್ಯದ ವೆಚ್ಚಗಳು
*ಊಟದ ವೆಚ್ಚ (ಆಸ್ಪತ್ರೆಯಲ್ಲಿ)
*ಚಿಕಿತ್ಸೆಯ ಸಮಯದಲ್ಲಿ ಪರೀಕ್ಷಾ ವೆಚ್ಚ
*ಆಸ್ಪತ್ರೆಗೆ ದಾಖಲಾದ ನಂತರ 15 ದಿನಗಳ ಆರೈಕೆ
*ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಆಹಾರ ಮತ್ತು ಔಷಧ ವೆಚ್ಚಗಳನ್ನು ಬರಿಸಬಹುದು

ಈ ಯೋಜನೆಗೆ ಈ ಯಾರು ಅರ್ಹರಾಗಿರುತ್ತಾರೆ ?
*ನಗರ ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
*ಅಭ್ಯರ್ಥಿಗಳ ವಾರ್ಷಿಕ ಆದಾಯ ಗರಿಷ್ಠ 1 ಲಕ್ಷ ರೂ. ಇರಬೇಕು.
*ಬಿಪಿಎಲ್ ಕುಟುಂಬಗಳನ್ನು ಈ ಯೋಜನೆಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ.
*ಅಭ್ಯರ್ಥಿಗಳು ಜಮೀನು ಹೊಂದಿರಬಾರದು.
*ರಾಷ್ಟ್ರೀಯ ರಾಷ್ಟ್ರೀಯ ಸುರಕ್ಷಾ ಬಿಮಾ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
*ಮೊದಲು ಜನ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
*ಏಜೆಂಟರು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುತ್ತಾರೆ, ನೀವು ಅರ್ಹರಾಗಿದ್ದರೆ ನೀವು ಜನ ಆರೋಗ್ಯ ಗೋಲ್ಡನ್ ಕಾರ್ಡ್‌ನ್ನು ಪಡೆಯುತ್ತೀರಿ.
*ನಿಮ್ಮ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಏಜೆಂಟ್‌ಗೆ ನೀಡಬೇಕು.
*ನೀವು ಏಜೆಂಟ್ ಮೂಲಕ ನೋಂದಾಯಿಸಲ್ಪಡುತ್ತೀರಿ.
*ನೋಂದಣಿ ಪೂರ್ಣಗೊಂಡ ನಂತರ ನಿಮಗೆ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ನೀಡಲಾಗುತ್ತದೆ.
*ನಂತರ ನೀವು ಸುಮಾರು 10-15 ದಿನಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಪಡೆದುಕೊಳ್ಳತ್ತೀರಾ.
*ಕಾರ್ಡ್‌ಗೆ ಕೇವಲ ರೂ.30 ಶುಲ್ಕ ಪಾವತಿಸಬೇಕು.
ಆರೋಗ್ಯ ಗೋಲ್ಡನ್ ಕಾರ್ಡ್ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳ ಮೂಲಕವೂ ಮಾಡಬಹುದು ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ನೀವು ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಳ್ಳಬೇಕು. ಅದರ ನಂತರ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ನಿಮಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications