ಒಲಿಂಪಿಕ್ 2017: ವೀಕ್ಷಕರು, ಕ್ರೀಡಾಪಟುಗಳಿಗೆ ಜೀವ ವಿಮೆ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 4: ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳಿಗೆ, ವೀಕ್ಷಕರಿಗೆ ಜೀವ ವಿಮೆ ಮಾಡಿಸಲಾಗಿದೆ ಎಂದು ರಾಜ್ಯ ಒಲಿಂಪಿಕ್ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ತಿಳಿಸಿದರು.

ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿ, ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರಾಗಲಿ ಅಥವಾ ಕ್ರೀಡಾಳುಗಳಾಗಲಿ ಮೃತಪಟ್ಟರೆ ಅವರಿಗೆ 10 ಲಕ್ಷ ರೂ. ಜೀವ ವಿಮೆಯಿಂದ ಪರಿಹಾರ ನೀಡಲಾಗುವುದು ಇದಕ್ಕಾಗಿ ಯುವಜನ ಮತ್ತು ಕ್ರೀಡಾ ಇಲಾಖೆ ಈ ಜೀವ ವಿಮೆಯನ್ನು ಮಾಡಿಸಿದೆ ಎಂದರು. ಕ್ರೀಡಾ ಇಲಾಖೆಯು ನ್ಯೂ ಇಂಡಿಯಾ ಇನ್ಸೂರೇಶ್ಸ್ ಕಂಪನಿಗೆ ವಿಮಾ ಮೊತ್ತ ರು. 55,600 ಗಳನ್ನು ಈಗಾಗಲೆ ಪಾವತಿಸಲಾಗಿದೆ ಎಂದರು.[ಧಾರವಾಡದಲ್ಲಿ ರಂಗೇರಿದ ರಾಜ್ಯ ಒಲಿಂಪಿಕ್ ಹವಾ]

State Olympic 2017: life insurance is provided the Athlete, and visitors

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಕೂಟವೊಂದಕ್ಕೆ ವಿಮಾ ಸೌಲಭ್ಯ ಪಡೆದುಕೊಂಡಿದೆ. ಕ್ರೀಡೆಗೆ ಹೆಸರು ನೋಂದಾಯಿಸಿರುವ 3980 ಕ್ರೀಡಾಪಟುಗಳು ಮತ್ತು 499 ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ವೀಕ್ಷಕರಿಗೂ ವಿಮಾ ಸೌಲಭ್ಯ ದೊರಕಲಿದೆ. ಜೊತೆಗೆ ಮೈದಾನ ಮತ್ತು ಕ್ರೀಡಾಳುಗಳಿಗೆ ನೀಡಿರುವ ವಸತಿಗೃಹಗಳಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಕಾಲ್ತುಳಿತ ಅಥವಾ ಗದ್ದಲ ಉಂಟಾದರೆ ಕ್ರೀಡಾ ಪಟುಗಳು ಹಾಗೂ ವೀಕ್ಷಕರಿಗೂ ವಿಮಾ ಸೌಕರ್ಯ ದೊರಕಲಿದೆ. ಮೃತಪಟ್ಟವರಿಗೆ ರು 10 ಲಕ್ಷ ಮತ್ತು ಗಾಯಗೊಂಡರೆ 2 ಲಕ್ಷ ರೂ. ಹಣ ಸಿಗಲಿದೆ ಎಂದರು.

State Olympic 2017: life insurance is provided the Athlete, and visitors

ಇದಕ್ಕಾಗಿ ಮೊಬೈಲ್ ತಂತ್ರಾಂಶ ಕೂಡ ಇದ್ದು ಗೂಗಲ್ ಪ್ಲೇ ಸ್ಟೋರಿನಲ್ಲಿ scoreup-koa ಎಂಬ ಆಪ್ ಅನ್ನು ಡೌನಲೋಡ್ ಮಾಡಿಕೊಳ್ಳಬಹುದು. ವಿವರಗಳನ್ನು ವೆಬಸೈಟ್ ಮೂಲಕ ನೋಡಬಹುದು. ವೆಬಸೈಟ್ ವಿಳಾಸ www.scoreup-koa.in ಎಂದು ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Olympic 2017: life insurance is provided the Athlete, and visitors says State Olympic Association President Govindaraju in Dharwad.
Please Wait while comments are loading...