ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನನ್ನು ಕಾಯಲು ಯುವಕರೇ ಸಜ್ಜಾಗಿ : ಪೇಜಾವರ ಶ್ರೀ

By Mrutyunjaya Kalmat
|
Google Oneindia Kannada News

Vishweshateertha Swamiji
ಮೈಸೂರು, ಆ. 17: ಪ್ರಭು ಶ್ರೀರಾಮಚಂದ್ರ ರಾಷ್ಟ್ರಕ್ಕೆ ಪ್ರೇರಕ ಶಕ್ತಿ. ಆತ ಜನಿಸಿದ ಸ್ಥಳದಲ್ಲಿ ಮಂದಿರ ನಿರ್ಮಾಣ ಆಗದಿರುವುದು ನಾಚಿಕೆಕೇಡು. ಇತಿಹಾಸ ಮತ್ತು ಪುರಾಣ ದೃಷ್ಟಿಯಲ್ಲಿ ಅವಲೋಕಿಸಿದರೆ ಅಯೋಧ್ಯೆ ಶ್ರೀರಾಮನ ಜನ್ಮಭೂಮಿ. ಶ್ರೀರಾಮ ಜನಿಸಿದ ಸ್ಥಳದಲ್ಲಿ ಮಂದಿರ ನಿರ್ಮಿಸಲು ಆಗದಿರುವುದು ರಾಷ್ಟ್ರಕ್ಕಾದ ಅತಿದೊಡ್ಡ ಅವಮಾನ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಚಾತುರ್ಮಾಸ ವೃತದಲ್ಲಿರುವ ಶ್ರೀಗಳು ಮೈಸೂರಿನಲ್ಲಿ ಸೋಮವಾರ ಹನುಮಶಕ್ತಿ ಜಾಗರಣ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕಾದರೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ವಿಧೇಯಕ ತರಬೇಕು. ಎಲ್ಲಾ ಪಕ್ಷಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ. ರಾಜಕೀಯ ಕಾರಣ ಮುಂದಿಟ್ಟುಕೊಂಡು ಮಂದಿರ ನಿರ್ಮಾಣ ವಿಚಾರವನ್ನು ಮುಂದೂಡುವುದು ಸರಿಯಲ್ಲ. ನ್ಯಾಯಾಲಯದ ತೀರ್ಪಿಗೆ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಯಾವ ಧರ್ಮದ ವಿರುದ್ಧವಾಗಲೀ ಅಥವಾ ಸಮಾಜದ ವಿರುದ್ದವಾಗಲೀ ನಾನು ಮಾತನಾಡುತ್ತಿಲ್ಲ. ಜನರು ಏಕಾಭಿಪ್ರಾಯಕ್ಕೆ ಬಂದರೆ ಯಾವುದೇ ಸರಕಾರ ಮಣಿಯಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ, ಜಾಗರಣೆ, ಸಂಘಟನೆ, ಅಭಿಯಾನ ಆಗಬೇಕು. ಭಕ್ತಿ ಮತ್ತು ಶಕ್ತಿಯ ಸಂಕೇತವಾಗಿರುವ ಹನುಮಂತನಂತೆ ಯುವಕರು ರಾಮನನ್ನು ಕಾಯಲು ಸಜ್ಜಾಗಬೇಕು. ಅಯೋಧ್ಯೆಯಲ್ಲಿ ಮಂದಿರ ಇದ್ದದ್ದು ಸ್ಪಷ್ಟ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X