ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ : ಭಕ್ತಾನಂದ

By Mrutyunjaya Kalmat
|
Google Oneindia Kannada News

Swami Nithyananda
ರಾಮನಗರ, ಜು. 28 : ವೀಕ್ಷಕರ, ಓದುಗರ ಸಂಖ್ಯೆ ಹೆಚ್ಟಿಸಿಕೊಳ್ಳಲು ರೋಚಕ ಸೃಷ್ಟಿಸುವ ವರದಿ ನೀಡುವುದನ್ನು ಮುಂದುವರೆಸಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಸ್ವಾಮಿ ನಿತ್ಯಾನಂದ ಧ್ಯಾನಪೀಠದ ಕಾರ್ಯದರ್ಶಿ ನಿತ್ಯಾ ಭಕ್ತಾನಂದ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ದೊರೆತ ಯಶಸ್ವಿನ ನಂತರ ಧ್ಯಾನಪೀಠದ ಸೇವಾ ಸಿಬ್ಬಂದಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಈ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಯಾವುದೇ ಕಾರಣಗಳಿಲ್ಲದೆ ಕೆಲವು ಮಾಧ್ಯಮಗಳಲ್ಲಿ ಸಮಾಜ ಸೇವೆ ಸೇರಿದಂತೆ ನಮ್ಮ ಅಶ್ರಮದ ಚಟುವಟಿಕೆಗಳನ್ನು ತಪ್ಪಾಗಿ ನಿರೂಪಿಸುತ್ತಿರುವುದು ನಿಜಕ್ಕೂ ನೋವುಂಟು ಮಾಡಿದೆ.

ತಮಿಳು ಚಾನೆಲ್ ಹೇಸಿಗೆ ಹುಟ್ಟಿಸುವ ವಿಚಾರಗಳನ್ನು ಪ್ರಸಾರ ಮಾಡಿದೆ. ವಿಶ್ವಕ್ಕೆ ಧ್ಯಾನ, ಶಾಂತಿ ಮತ್ತು ಸಹನೆಗಳನ್ನು ಪಸರಿಸಲು ಬದ್ದರಾಗಿರುವ ಸಂಸ್ಥೆ ನಮ್ಮದು. ನಮಗೆ ಯಾರ ಬಗ್ಗೆಯೂ ಯಾವುದೇ ದ್ವೇಷ, ಕೆಟ್ಟ ಉದ್ದೇಶ ಇಲ್ಲ. ಆದರೆ, ಇದೀಗ ನಮ್ಮ ಸಂಸ್ಥೆಯ ಉಳಿವಿನ ಪ್ರಶ್ನೆ ಎದುರಾಗಿರುವುದರಿಂದ ನಮ್ಮ ಹೆಸರನ್ನು ಕೆಡಿಸಲು ನಮ್ಮ ಸೇವೆಗಳನ್ನು ಸ್ಥಗಿತಗೊಳಿಸುವಂತಹ ವರದಿಗಳನ್ನು ಪ್ರಕಟಿಸುವ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಭಕ್ತಾನಂದ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X